Posts

Showing posts from 2019

Here is a Hiriya

ಹೀಗೊಬ್ಬ ಹಿರಿಯ ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Here is a Hiriya -  English version is given below in the end ) ನಾನೀಗ ಹೇಳಹೊರಟಿರುವುದು ನಮ್ಮೂರಿನ ಹಿರಿಯನ ಬಗ್ಗೆ. ಹೌದು ಅವನ ಹೆಸರೇ ಹಿರಿಯ. ಆತ ದೊಡ್ಡ ಮನುಷ್ಯನೇ, ಕಾಯದಲ್ಲಿಯೂ, ವಯಸ್ಸಿನಲ್ಲಿಯೂ, ಗುಣದಲ್ಲಿಯೂ. ಜಾತಿಯಲ್ಲಿ ಮಾತ್ರ ದೊಡ್ಡವನಲ್ಲ. ಆತ ಹೊಲೆಯರ ಜಾತಿಗೆ ಸೇರಿದವನು. ನಾನು ಚಿಕ್ಕವನಿದ್ದಾಗ ಅಮ್ಮನೊಡನೆ ಈ ಹಿರಿಯನಿಗೆ ವಯಸ್ಸೆಷ್ಟು ಎಂದು ಕೇಳಿದಾಗ ಆಕೆ ಅಂದಿದ್ದಳು - ಗೊತ್ತಿಲ್ಲಪ್ಪ, ನಾನು ಚಿಕ್ಕವಳಿದ್ದಾಗಲೂ ಆತ ಹೀಗೇ ಇದ್ದ. ಈತ ಎಲ್ಲೋ 'ಸಂಜೀವಿನಿ' ಸೇವಿಸಿರಬೇಕು ಅಂದುಕೊಳ್ಳುತ್ತಿದ್ದೆ ! ನನ್ನ ಕಾಲಕ್ಕೆ ಈ 'ಒಕ್ಕಲುತನ ಅಥವಾ ಜೀತ' ಎನ್ನುವುದು ಕಡಿಮೆಯಾಗುತ್ತ ಬಂದಿತ್ತು. ಈ ಭೂಸುಧಾರಣೆ ಕಾಯಿದೆ ಬಂದ ಮೇಲೆ ಒಕ್ಕಲು ಅನ್ನಿಸಿಕೊಂಡವರಿಗೆಲ್ಲ ಒಂದಿಷ್ಟು ಭೂಮಿಯ ಒಡೆತನ ಸಿಕ್ಕಿ ಅವರೆಲ್ಲ ಯಾರೋ ಒಬ್ಬ ಧಣಿಯ ಅಡಿಯಾಳಾಗಿ ಜೀವಮಾನ ಸವೆಸಬೇಕಾಗಿರಲಿಲ್ಲ. ಆದರೆ ಹೊಲೆಯರಿಗೆ ಮಾತ್ರ ಭೂಮಿಯ ಭಾಗ್ಯ ದಕ್ಕಿದ್ದು ಕಡಿಮೆ. ಯಾಕೆಂದರೆ ಅವರಿಗೆ ಉಳುವ ಭೂಮಿಯನ್ನು ಗೇಣಿಗೆ ಕೊಡುತ್ತಿರಲಿಲ್ಲ. ಗೇಣಿಗೆ ಕೊಂಡವರಿಗೆ ಮಾತ್ರ ಭೂಮಿ ಒಡೆತನ ದಕ್ಕುತ್ತಿತ್ತು. ಈ ಹಿರಿಯ ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ. ಇನ್ನೊಬ್ಬರ ಹೊಲಗಳಲ್ಲಿ ದುಡಿಯುತ್ತಿದ್ದ. ನಮ್ಮ ಮನೆಗೂ ಕೆಲಸಕ್ಕೆ ಬರುತ್ತಿ...

Sakura and Shakuntala

ಸಕುರಾ ಎಂಬ ಶಕುಂತಲೆಯ ನೆನಪು ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Sakura and Shakuntala -  English version is given below in the end ) ದಿನಕರ, ದಿನೇಶ ಸೂರ್ಯನಿಗಿರುವ ಅನ್ಯನಾಮಗಳು.  ಜಪಾನನ್ನು ಸೂರ್ಯ ಹುಟ್ಟುವ ನಾಡು ಎನ್ನುತ್ತಾರೆ. ಕಾರ್ಯನಿಮಿತ್ತ ಜಪಾನಿಗೆ ನಾನು ನನ್ನ ಆಫೀಸಿನ ತಂಡದೊಂದಿಗೆ ತೆರಳಿದಾಗ ನನ್ನ ಗೆಳೆಯ ವಿಶ್ವನಾಥ - ನೀನು ನಿನ್ನ ತವರಿಗೆ ಭೆಟ್ಟಿಕೊಟ್ಟಂತಾಯಿತು ಎಂದ. ದಿನೇಶ ಅರ್ಥಾತ್- ದಿನದ ಒಡೆಯನು ಹುಟ್ಟಿದ ನಾಡಿಗೆ ಬಂದ- ಅಂದ! ಈ ಜಪಾನಿನಲ್ಲಿ ನನಗೆ ಪೌರತ್ವ ಕೊಟ್ಟಾರೆಯೇ - ಎಂದು ಕೇಳಿದರೆ, ಆತ - ಕೆಲವು ಸಮಯ ಇಲ್ಲಿಯೇ ಉಳಿದರೆ, ಇಲ್ಲಿನವಳೊಬ್ಬಳನ್ನು ಮದುವೆಯಾದರೆ ಕೊಟ್ಟಾರು - ಎಂದ! ನನ್ನ ಗೆಳೆಯ ವಿಶ್ವನಾಥ, ವಿಶಾಲ ಹೃದಯದವನು. ವಸುಧೈವ ಕುಟುಂಬಕಂ ಎಂಬ ಜಾತಿಯವ. ಇನ್ನೊಬ್ಬರ ಸಖ್ಯ ಬೆಳೆಸುವುದರಲ್ಲಿ ನಿಪುಣ. ಆತ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆಸಿದ್ದಾನೆ. ಜಪಾನೀ ಭಾಷೆಯನ್ನು ಕಲಿತು ಅಲ್ಲಿಯ ತರುಣಿಯೊಬ್ಬಳೊಂದಿಗೆ ಸಹಜೀವನ ನಡೆಸುತ್ತಿದ್ದಾನೆ. ಜಪಾನ್ ಒಂದು ವಿಚಿತ್ರ ದೇಶ ಎನಿಸಿತ್ತು ನನಗೆ. ಮನುಷ್ಯ ಹುಟ್ಟಿದ್ದೇ ದುಡಿಯಲು ಎಂದುಕೊಂಡಿದ್ದಾರೋ ಇಲ್ಲಿನವರು - ನಮ್ಮಲ್ಲಿ ಮೊದಲು ಕತ್ತೆ ಹುಟ್ಟಿದ್ದೇ ನಮ್ಮ ಚಾಕರಿ ಮಾಡಲು ಅಂದುಕೊಳ್ಳುತ್ತಿದ್ದರಲ್ಲ ಹಾಗೆ - ಎನಿಸಿತ್ತು. ಅದೇನೋ ಕೆಲಸದ ವ್ಯಸನ ಅವರಿಗೆ ಅನ್ನಬಹುದು. ಹೀಗೆ ಬಿಡುವಿಲ್ಲದೆ ದು...

Emotions and 'Raakshasa'

    ರಾಕ್ಷಸ – ತುಡಿತ ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Emotions and 'Raakshasa' -  English version is given below in the end ) ಕೆಲವೊಮ್ಮೆ ಯೋಚಿಸುತ್ತೇನೆ -   ಅದು ಹೇಗೆ ನಾವು ಇನ್ನೊಬ್ಬರ  ಬಗ್ಗೆ ತುಡಿಯಲಾರಂಬಿಸುತ್ತೇವೆ? ಇನ್ನೊಬ್ಬರೊಡನೆ ಹೊಕ್ಕುಬಳಕೆಯಾದೊಡನೆಯೇ ತುಡಿಯತೊಡಗುತ್ತೇವೆಯೋ  ಅಥವಾ ಅವರ ಪ್ರಭಾವಬೀರುವ  ವ್ಯಕ್ತಿತ್ವದ ಫಲವಾಗಿಯೋ ? ಒಂದು ವೇಳೆ ದುರ್ನಡತೆಯವರಾದರೆ,  ದ್ವೇಷ ಹುಟ್ಟಿಸಬಲ್ಲಂತೆ ವರ್ತಿಸುವವರಾದರೆ  ಅವರ ಬಗ್ಗೆ ತುಡಿವುದು ಸಾಧ್ಯವಾದೀತೆ? ಈ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದದ್ದುಂಟು. ಆ ದಿನಗಳಲ್ಲಿ ನಾನೊಂದು ಭೂಸೇನಾ ವಿಭಾಗದೊಂದಿಗೆ ಆಗಾಗ ವ್ಯವಹರಿಸುತ್ತಿದ್ದೆ. ನಾನು ಸಮವಸ್ತ್ರದವನಲ್ಲ, ತಂತ್ರಜ್ಞನಾಗಿ ಅಲ್ಲಿಗೆ ಹೋಗುತ್ತಿದ್ದುದರಿಂದ ಅಲ್ಲಿನ ಸೈನಿಕರು ನನ್ನೊಂದಿಗೆ ಬಿಗುಮಾನವಿಲ್ಲದೆಯೇ ಸಲೀಸಾಗಿ ಮಾತನಾಡುತ್ತಿದ್ದರು. ಅವರ ಶ್ರೇಣೀಕೃತ ಅಧಿಕಾರಿಗಳ ಸಾಲಿನಲ್ಲಿ ನನ್ನಂತಹವರನ್ನು ನಿಲ್ಲಿಸಿ ನೋಡಬೇಕಾಗಿರಲಿಲ್ಲ ಅವರಿಗೆ. ಕಠಿಣ ಪರಿಸರದಲ್ಲಿ ಕೆಲಸಮಾಡುವ ಸೈನಿಕರು ತಮ್ಮ  ಮಾನಸಿಕ ತುಮುಲಗಳನ್ನು   ನಮ್ಮಂತವರ  ಬಳಿ ತೋಡಿಕೊಳ್ಳುತ್ತಿದ್ದರು.  ದೂರದ ತಮ್ಮ ಸಂಸಾರಗಳ ಬಗ್ಗೆಯೋ, ಸಂಸಾರದ ಖುಷಿಕ್ಷಣಗಳ ಬಗ್ಗೆಯೋ, ತಮ್ಮ ಕಷ್ಟಕಾರ್ಪಣ್ಯಗಳ ಬಗ್ಗೆಯೋ, ನಮ್ಮೊಡನೆ ತೋಡಿ...

Ajji Killer

    ಅಜ್ಜಿ ಯ  ಕೊಂದ  ಕಥೆ  ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ (Ajji Killer -  English version is given below in the end) ಅಜ್ಜಿ ಎಂಬ ಪದ ಅಮ್ಮ ಎಂಬ ಪದದಷ್ಟೇ ಆಪ್ಯಾಯಮಾನ ವಾದದ್ದು ಮಕ್ಕಳಿಗೆ. ಕೆಲವು ಮಕ್ಕಳಿಗೆ, ಅದರಲ್ಲೂ ಅವರ ತಾಯಿ ಕೆಲಸಕ್ಕೆ ಹೋಗುವ ತಾಯಿಯಾಗಿದ್ದರೆ, ಅಜ್ಜಿ ತಾಯಿಗಿಂತಲೂ ಒಂದು ತೊಲ  ಹೆಚ್ಛೇ ತೂಗುತ್ತಾಳೆ. ನನಗೂ ಕೂಡ ಹಾಗೆ - ನನ್ನ ಅಜ್ಜಿ ಹೆಚ್ಛೇ ತೂಗುತ್ತಿದ್ದಳು. ಅಮ್ಮನನ್ನು ಬೇಡಿ ಪಡೆಯಲಾಗದದ್ದನ್ನು ಅಜ್ಜಿಯಿಂದ ಪಡೆಯುವುದು ಎಲ್ಲ ಮಕ್ಕಳೂ  ಮೊದಲು ಕಲಿಯುವ ಜಾಣ್ಮೆ. ಅಜ್ಜಿಯಂದಿರು ಯಾವತ್ತಾದರೂ ಮಕ್ಕಳನ್ನು ಶಿಕ್ಸಿಸುವುದುಂಟೇ ? ಯಾವಾಗಲೂ ಮುದ್ದು ಮಾಡುತ್ತಿರುತ್ತಾರೆ. ಅತ್ತು ಕಾಡಿದರೆ ಕೈಯಲ್ಲಿ  ಬೆಲ್ಲದ ಚೂರೋ, ತೆಂಗಿನಕಾಯಿಯ ಹೋಳೋ, ಹುರಿಗಡಲೆಯೋ ಬೆಣ್ಣೆಯೋ  ಇಡುತ್ತಿದ್ದಳು. ತಿಂದು ಬಂದು ಮತ್ತೆ ಕೈಚಾಚಿದರೆ ಕಾಡಿದರೆ ಮತ್ತೊಂದಿಷ್ಟು. ಬಗೆದಷ್ಟೂ  ಕೊಡುವ ಕಾಮಧೇನು.   ಎಲ್ಲೋ ಹಬ್ಬಕ್ಕೆ ಹೋದರೆ ಮುಂಡಕ್ಕಿ ಖಾರಕಡ್ಡಿ ಜಿಲೇಬಿ ಸೆರಗಿನಲ್ಲಿ ಕಟ್ಟಿಕೊಂಡು ಬಂದು ತಂದುಕೊಡುವುದು, ಪೀಪೀ, ಗಿರಗಿಂಟಿ , ಬಲೂನು, ಚೆಂಡು  ಇತ್ಯಾದಿ ತಂದುಕೊಡುವುದು, ಹೀಗೆ ಮನೆಯಿಂದ ಹೊರಗೆ ಹೋಗಿ ಬಂದರೂ ಅಜ್ಜಿ ನಮ್ಮ ಸಂಭ್ರಮಕ್ಕೆ ಕಾರಣಳಾಗುತ್ತಿದ್ದಳು. ಬೀಸುವ ಕಲ್ಲಿನ ಮುಂದೆ ಕೂತಾಗಲೋ , ಮೊಸರು ಕಡೆಯ...

Bomb – Upakaara

ಬಾಂಬ್ ಉಪಕಾರ ( ಕಥೆಗಾರ:  ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ) (Bomb – Upakaara English version is given below in the end) ಆಗ ನಾನು ಡೆಹ್ರಾಡೂನ್   ನಲ್ಲಿದ್ದೆ ಸರ್ಕಾರೀ   ನೌಕರಿ ಮಾಡುತ್ತಿದ್ದೆ . ಆಗ ನನಗೆ ಪದೇ ಪದೇ ಕಾರ್ಯನಿಮಿತ್ತ   ಪ್ರಯಾಣ ಮಾಡುವ ಸಂದರ್ಭ ಒದಗಿಬರುತ್ತಿದ್ದವು .  ನಾನೋ ಬ್ರಹ್ಮಚಾರಿ , ಪ್ರಯಾಣಕ್ಕೆ ಸನ್ನದ್ಧವಾಗುವುದೇನೂ ಕಷ್ಟವೆನಿಸುತ್ತಿರಲಿಲ್ಲ . ನನ್ನದೊಂದು ಸಣ್ಣ ಬ್ರೀಫ್ ಕೇಸ್ ಸದಾ ಸಿದ್ಧವಾಗಿರುತ್ತಿತ್ತು . ಅದೊಂದು ದಿನ ಬೆಳಗ್ಗೆ ನನ್ನ ಮೇಲಧಿಕಾರಿ ಕೂಡಲೇ ಮದ್ರಾಸಿಗೆ ಹೋಗು ಎಂದರು ಹೊರಟೆ . ಯಾವ ಟಿಕೇಟ್ ರಿಸರ್ವೇಶನ್ ಮಾಡಿಸಿರಲೂ ಇಲ್ಲ . ನನ್ನ ಬಳಿ ಇದ್ದ ಬ್ರೀಫ್ ಕೇಸ್ನಲ್ಲಿ ಆಫೀಸ್ನ ಕೆಲವು ಸಾಮಗ್ರಿಗಳನ್ನೂ ಕೊಂಡುಹೋಗಬೇಕಿತ್ತು . ಅವು ಇಂಪೋರ್ಟ್ ಮಾಡಿದ್ದ ಬೆಲೆಬಾಳುವ ಉಪಕರಣಗಳು ಆಗಿದ್ದವು . ಮತ್ತೊಂದು ಸ್ಲೀಪಿಂಗ್ ಬ್ಯಾಗ್ ಹಿಡಿದುಕೊಂಡಿದ್ದೆ . ಚಳಿಗಾಲದಲ್ಲಿ ಅದರ ಉಪಯೋಗ ಉತ್ತರಭಾರತದಲ್ಲಿ ಪ್ರಯಾಣ ಮಾಡಿದವರಿಗೆ ಗೊತ್ತು .   ಬಸ್ ಸ್ಟ್ಯಾಂಡ್ಗೆ ಬಂದರೆ ಅಲ್ಲೊಂದು ಶಟ್ಲ್ ಬಸ್ ದಿಲ್ಲಿಗೆ ಹೋಗಲು ಸಿದ್ಧವಾಗಿತ್ತು ಹತ್ತಿ ಕುಳಿತೆ .  ದಾರಿಯುದ್ದಕ್ಕೂ ಅಲ್ಲಲ್ಲಿ ನಿಲ್ಲಿಸುತ್ತಾ ಹೋಗುತ್ತಿತ್ತು ಆ ಬಸ್ .  ಮಧ್ಯಾಹ್ನದ ಹೊ...