Sakura and Shakuntala
ಸಕುರಾ ಎಂಬ ಶಕುಂತಲೆಯ ನೆನಪು
ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ
ದಿನಕರ, ದಿನೇಶ ಸೂರ್ಯನಿಗಿರುವ
ಅನ್ಯನಾಮಗಳು. ಜಪಾನನ್ನು ಸೂರ್ಯ ಹುಟ್ಟುವ
ನಾಡು ಎನ್ನುತ್ತಾರೆ.
ಕಾರ್ಯನಿಮಿತ್ತ ಜಪಾನಿಗೆ ನಾನು ನನ್ನ ಆಫೀಸಿನ ತಂಡದೊಂದಿಗೆ ತೆರಳಿದಾಗ ನನ್ನ ಗೆಳೆಯ ವಿಶ್ವನಾಥ - ನೀನು ನಿನ್ನ ತವರಿಗೆ ಭೆಟ್ಟಿಕೊಟ್ಟಂತಾಯಿತು ಎಂದ. ದಿನೇಶ ಅರ್ಥಾತ್- ದಿನದ ಒಡೆಯನು ಹುಟ್ಟಿದ ನಾಡಿಗೆ ಬಂದ- ಅಂದ! ಈ ಜಪಾನಿನಲ್ಲಿ ನನಗೆ ಪೌರತ್ವ ಕೊಟ್ಟಾರೆಯೇ - ಎಂದು ಕೇಳಿದರೆ, ಆತ - ಕೆಲವು ಸಮಯ ಇಲ್ಲಿಯೇ ಉಳಿದರೆ, ಇಲ್ಲಿನವಳೊಬ್ಬಳನ್ನು ಮದುವೆಯಾದರೆ ಕೊಟ್ಟಾರು - ಎಂದ! ನನ್ನ ಗೆಳೆಯ ವಿಶ್ವನಾಥ, ವಿಶಾಲ ಹೃದಯದವನು. ವಸುಧೈವ ಕುಟುಂಬಕಂ ಎಂಬ ಜಾತಿಯವ. ಇನ್ನೊಬ್ಬರ ಸಖ್ಯ ಬೆಳೆಸುವುದರಲ್ಲಿ ನಿಪುಣ. ಆತ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆಸಿದ್ದಾನೆ. ಜಪಾನೀ ಭಾಷೆಯನ್ನು ಕಲಿತು ಅಲ್ಲಿಯ ತರುಣಿಯೊಬ್ಬಳೊಂದಿಗೆ ಸಹಜೀವನ ನಡೆಸುತ್ತಿದ್ದಾನೆ.
ಜಪಾನ್ ಒಂದು ವಿಚಿತ್ರ ದೇಶ ಎನಿಸಿತ್ತು ನನಗೆ. ಮನುಷ್ಯ ಹುಟ್ಟಿದ್ದೇ ದುಡಿಯಲು ಎಂದುಕೊಂಡಿದ್ದಾರೋ ಇಲ್ಲಿನವರು - ನಮ್ಮಲ್ಲಿ ಮೊದಲು ಕತ್ತೆ ಹುಟ್ಟಿದ್ದೇ ನಮ್ಮ ಚಾಕರಿ ಮಾಡಲು ಅಂದುಕೊಳ್ಳುತ್ತಿದ್ದರಲ್ಲ ಹಾಗೆ - ಎನಿಸಿತ್ತು. ಅದೇನೋ ಕೆಲಸದ ವ್ಯಸನ ಅವರಿಗೆ ಅನ್ನಬಹುದು. ಹೀಗೆ ಬಿಡುವಿಲ್ಲದೆ ದುಡಿಯುತ್ತಾ ಹೋದರೆ, ಅದರ ಫಲವನ್ನು ಉಣ್ಣಲೂ ಬಿಡುವಿಲ್ಲದಿದ್ದರೆ, ಪ್ರಯೋಜನವೇನು -ಅನ್ನಿಸುತ್ತಿತ್ತು ನನಗೆ. ಅಲ್ಲಿನ ಆಫೀಸ್ಗಳಲ್ಲಿ - ಗಂಭೀರ ಮುಖಗಳನ್ನು ಹೊತ್ತುಕೊಂಡಿರುವ, ಹೊತ್ತಿಗೆ ಮುಂಚೆ -ಅದರಲ್ಲೂ ಮೇಲಧಿಕಾರಿ ಬರುವ ಮುಂಚೆ - ಆಫೀಸ್ಗೆ ಬಂದು ದಿನವಿಡೀ ಗೇಯ್ಮೆ ಮಾಡಿ, ಮೇಲಧಿಕಾರಿ ಆಫೀಸ್ ಬಿಟ್ಟ ಬಳಿಕವೇ ಮನೆಗೆ ಹೊರಡುವ ಕೆಲಸಗಾರರನ್ನು ನೋಡಿದರೆ ಕನಿಕರ ಮೂಡುತ್ತಿತ್ತು.
ನಾನು ನೋಡುತ್ತಿದ್ದ ಆಫೀಸ್ನಲ್ಲಿ ಬೆಳಗಿಂದ ಸಂಜೆಯ ವರೆಗೆ ಕಂಪ್ಯೂಟರ್ ಸ್ಕ್ರೀನ್ ನೋಡುತ್ತಾ ಒಂದು ಕ್ಷಣವೂ ಅಕ್ಕ ಪಕ್ಕದವರನ್ನು ನೋಡದೆ, ಮಾತನಾಡಿಸದೆ ದಿನಕಳೆಯುವ ಜನರನ್ನು ನೋಡಿ ಬಹುಶಃ ಇವರು ನಮ್ಮಂತ ಹುಲುಮಾನವರಲ್ಲ, ಬ್ರಹ್ಮ ವಿಶೇಷವಾಗಿ ಸ್ರಷ್ಟಿಸಿರುವ ಮನುಜರೂಪದ ಯಂತ್ರಗಳು ಎಂದುಕೊಂಡೆ! ಒಂದಷ್ಟು ಹರಟೆಯಿರದ, ವಿನೋದವಿರದ ಗದ್ದಲವಿರದ ನಿಶ್ಯಬ್ದ ವಾತಾವರಣದಲ್ಲಿ ಕೆಲಸ ಮಾಡುವುದು ನೋಡಿದರೆ - ನಮ್ಮ ದೇಶದ ಯಾವ ನರಕಸದ್ರಶ ಸ್ಥಳಗಳೂ ಇದಕ್ಕಿಂತ ಮೇಲು ಅನ್ನಿಸುತ್ತಿತ್ತು. ಆ ಆಫೀಸ್ನಲ್ಲಿ ನೋಡಿದ ಇನ್ನೊಂದು ಶಿಷ್ಟಾಚಾರವೆಂದರೆ ನೌಕರರ ಟೇಬಲ್ ಸಾಲಿಗೆ ಲಂಬವಾಗಿ ಮ್ಯಾನೇಜರ್ ಕುಳಿತುಕೊಳ್ಳುತ್ತಾರೆ ಯಾಕೆಂದರೆ ನೌಕರರು ಏನು ಮಾಡುತ್ತಿದ್ದಾರೆ ಎಂದು ಮ್ಯಾನೇಜರ್ ಕಾಣುವಂತಿರಬೇಕು ಎಂದು. ಅವರ ಇನ್ನೊಂದು ಪದ್ಧತಿ - ದೊಡ್ಡವರಿಗೆ ಬಗ್ಗಿ ಬಗ್ಗಿ ನಮಸ್ಕರಿಸುವುದು. ಅವರ ಬೆನ್ನುಹುರಿ ಮುರಿದು ಹೋಗುವುದೋ ಅನ್ನಿಸುತ್ತಿತ್ತು. ಬಹುಶಃ ಇದನ್ನು ಭಾರತೀಯರಿಂದಲೇ ಕಲಿತಿರಬೇಕು.
ಹೆಚ್ಚಿನ ಜಪಾನೀ ಗಂಡಸರು ಸಾಮಾನ್ಯವಾಗಿ ತಮ್ಮ ವಾರವಿಡೀ ಮಾಡುವ ಅತೀವ ದುಡಿತದ ದಣಿವು ಮರೆಯಲು ಶುಕ್ರವಾರ ಸಂಜೆ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ದಾಳಿ ಇಡುತ್ತಾರೆ. ಕೆಲವರು ಕರಾವೋಕೆ ಸೆಂಟರ್ಗಳಿಗೆ ನುಗ್ಗಿ ಹಿನ್ನೆಲೆ ಸಂಗೀತಕ್ಕೆ ದನಿಕೂಡಿಸಿ ಒಂದಷ್ಟು ಕಿರುಚಾಡಿ ಮನ ತಣಿಸಿಕೊಳ್ಳುತ್ತಾರೆ. ಅಲ್ಲಿ ಇಂಗ್ಲಿಷ್ ಪಾಪ್ ಸಂಗೀತಕ್ಕೆ ಹೆಚ್ಚು ಮನ್ನಣೆ. ಬಾರ್ ಗಳಲ್ಲಿ ತಿಂಡಿ ಪಾನೀಯಗಳ ಸಮಾರಾಧನೆ ನಡುರಾತ್ರಿ ದಾಟುವವರೆಗೂ ನಡೆಯುತ್ತದೆ. ಒಂದು ರೆಸ್ಟೋರಾಂಟ್ನಲ್ಲಿ ಸಮಾರಾಧನೆ ಮುಗಿಸಿ ಇನ್ನೊಂದಕ್ಕೆ ನುಗ್ಗುವವರೂ ಇದ್ದಾರೆ! ಬಳಿಕ ಸದ್ದಿಲ್ಲದೆ ರಸ್ತೆಯ ಉದ್ದಗಲ ಅಳೆಯುತ್ತಾ ಮನೆಗೆ ಸಾಗುತ್ತಾರೆ!
ಜಪಾನೀಯರ ಭಾಷಾಪ್ರೇಮ ಎಷ್ಟು ಅತೀ ಎಂದರೆ ಅವರು ತಮ್ಮ ಎಲ್ಲ ವ್ಯವಹಾರಗಳಲ್ಲಿಯೂ ಜಪಾನೀ ಭಾಷೆಯನ್ನೇ ಬಳಸುತ್ತಾರೆ, ಮೊಬೈಲ್, ಕಂಪ್ಯೂಟರ್ ಗಳಲ್ಲಿ ಕೂಡಾ. ಶಾಲೆಯಲ್ಲಿ ಇಂಗ್ಲಿಶ್ ಕಲಿತಿದ್ದರೂ, ಬಳಕೆ ಕಡಿಮೆಯಾಗಿರುವುದರಿಂದ ಅನ್ಯಭಾಷಿಕರೊಂದಿಗೆ ಸಂಭಾಷಿಸಲು ಒದ್ದಾಡುತ್ತಾರೆ! ನಾನು ವಿಶ್ವನೊಡನೆ 'ನೋಡು, ತೆಪ್ಪಗೆ ಇಂಗ್ಲಿಶ್ ಕಲಿತು ಸಾಫ್ಟ್ ವೇರ್ ಅದು ಇದ್ದ ಹಾಗೇ ಇಂಗ್ಲಿಶ್ನಲ್ಲಿ ಬಳಸುತ್ತಿದ್ದಿದ್ರೆ ಪರದೇಶಗಳೊಂದಿಗೆ ವ್ಯವಹರಿಸಲು ಎಷ್ಟು ಸುಲಭವಾಗಿರುತ್ತಿತ್ತು? ಭಾಷಾಂತರದ ಖರ್ಚು ಉಳೀತಿತ್ತು' ಅಂದೆ.
ಆತ - 'ನೀನು ಪದೇ ಪದೇ ರಾಜರತ್ನ್ಂರ ಪದ್ಯದ ಸಾಲು - ನರ್ಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲ್ಸಾಕಿದ್ರೂನೂ ಮೂಗ್ನಲ್ಲ್ ಕನ್ನಡ ಪದವಾಡ್ತೀನಿ - ಅಂತ ಹೇಳ್ತಿರ್ತಿದ್ದೆಯಲ್ಲ , ಅವರಿಗೂ ಹಾಗೆ, ಅವರ ಭಾಷೆಯ ಮೇಲೆ ಅಭಿಮಾನ ಇರಬಾರದೇ?' ಅಂದ.
ಜಪಾನಿನಲ್ಲಿ ಕೆಲವರು ಮಾತ್ರ ಆಸಕ್ತಿಯಿಂದ ಶ್ರಮವಹಿಸಿ ಇಂಗ್ಲಿಶ್ ಕಲಿತು ಕಚೇರಿಗಳಲ್ಲಿ ದುಭಾಷಿಯ ಪಾತ್ರ ವಹಿಸುತ್ತಾರೆ. ಅಂತಹ ದುಭಾಷಿಗಳಲ್ಲೊಬ್ಬಳು ಸಕುರಾ. ಇಂಜಿನಿಯರ್ ಆದ ಆಕೆ ನಾನು ಕೆಲಸದ ನಿಮಿತ್ತ ಸಂದರ್ಶಿಸಿದ ಕಂಪನಿಯಲ್ಲಿ ಅಲ್ಲಿನ ಮ್ಯಾನೇಜರ್ಗೆ ಸಹಾಯಕಳಾಗಿ ನಮ್ಮೊಡನೆ ವ್ಯವಹರಿಸುತ್ತಿದ್ದಳು. ತೆಳ್ಳಗಿನ, ಶ್ವೇತವರ್ಣದ ಚೆಲುವೆ, ಸುಮಾರಾಗಿ ನನ್ನ ಪ್ರಾಯದವಳೇ. ನಾನು ಜಪಾನಿಗೆ ಹೋಗುವ ಮೊದಲೇ ಅವರ ಕಂಪನಿಯ ಕೆಲಸವನ್ನು ಭಾರತದಿಂದಲೇ ನಾವು ಮಾಡುತ್ತಿದ್ದುದರಿಂದ, ಈಮೇಯ್ಲ್ ಮೂಲಕ ಆಕೆಯೊಂದಿಗೆ ವ್ಯವಹರಿಸುತ್ತಿದ್ದುದರಿಂದ, ನಮ್ಮ ಕೆಲಸ ಸಾಮರ್ಥ್ಯದ ಬಗ್ಗೆ ಅರಿವು ಇರುವುದರಿಂದ ಅವಳಿಗೆ ನಮ್ಮ ಬಗ್ಗೆ ಮೊದಲೇ ಒಂದು ಬಗೆಯ ಆಪ್ತತೆ ಮೂಡಿತ್ತು.
ಜಪಾನಿಗೆ ಹೋಗುವಾಗ ನಾನು ಆಕೆಗೆ ಒಂದು ತಲೆಗೆ ಮುಡಿಯುವ ಶ್ರೀಗಂಧದ ಚಿಟ್ಟೆಯನ್ನು ಮತ್ತು ನಮ್ಮ ಭಾರತದ ಶೇಕ್ಸ್ ಪಿಯರ್ ಎಂದು ಕರೆಯಲ್ಪಡುವ ಕಾಳೀದಾಸನ ಕೃತಿಯ ಇಂಗ್ಲಿಶ್ ಅನುವಾದವನ್ನು ಕೊಂಡುಹೋಗಿದ್ದೆ. ಆಕೆ ಅದರಿಂದ ಖುಷಿಗೊಂಡಿದ್ದಳು. ಅಲ್ಲಿಯ ಕಂಪನಿಯ ಮ್ಯಾನೇಜರ್ ಮತ್ತು ಅವರ ತಂಡ ನಮ್ಮೊಡನೆ ಮೀಟಿಂಗ್ ಮಾಡುವಾಗ ಸಕುರಾ ದುಭಾಷಿಯಾಗಿ ಇರಲೇಬೇಕಿತ್ತು. ಅವಳಿಲ್ಲದ ಹೊತ್ತಿನಲ್ಲಿ ನಮ್ಮೊಡನೆ ಇಂಗ್ಲಿಶ್ ನಲ್ಲಿ ಮಾತಾಡಲು ಉಳಿದವರು ತಿಣುಕಾಡುತ್ತಿದ್ದರು. ಅಲ್ಲಿನ ಮ್ಯಾನೇಜರ್ ಹೊಸೊಕಾವ ಸ್ವಲ್ಪ ವಯಸ್ಸಿನಲ್ಲಿ ಹಿರಿಯವನಾಗಿದ್ದರು, ನಮ್ಮ ಬಗ್ಗೆ ಪ್ರೀತಿತೋರುತ್ತಿದ್ದರು, ನಮ್ಮ ಸಂಸ್ಕ್ರತಿಯ ಬಗ್ಗೆ ಗೌರವ, ಕುತೂಹಲ ಇದ್ದವರು. ಸಕುರಾ ಕೂಡ ನಮ್ಮ ಬಗ್ಗೆ ಗೌರವ, ಆದರ ತೋರುತ್ತಿದ್ದಳು. ಭಾರತದಲ್ಲಿ ಕೂತು ಜಪಾನಿನ ಅವರ ಕಂಪ್ಯೂಟರ್ಗಳಲ್ಲಿನ ಸಾಫ಼್ಟ್ವೇರ್ ಗಳಲ್ಲಿನ ತೊಡಕುಗಳನ್ನು ಪರಿಹರಿಸುವ ಉಪಾಯಗಳನ್ನು ಸೂಚಿಸುವ ನಮ್ಮ ಕುಶಲತೆಗೆ ಬೆರಗಾಗುತ್ತಿದ್ದಳು. ನಾವುಗಳು ಐನ್ ಸ್ಟೈನ್ ಸಂತಾನವೇನೋ ಎಂಬಂತೆ ಪ್ರಶಂಸಿಸುತ್ತಿದ್ದಳು.
ಒಮ್ಮೆ ನನ್ನನ್ನು ಕುತೂಹಲದಿಂದ ಕೇಳಿದಳು. - ' ನಾನೊಂದು ಟೀವಿ ಪ್ರೋಗ್ರಾಂ ನಲ್ಲಿ ಹೇಳಿದ್ದು ಕೇಳಿದೆ - ಭಾರತದಲ್ಲಿ ಮಗ್ಗಿಯನ್ನು ಶಾಲೆಗಳಲ್ಲಿ ೨೦*೨೦ ವರೆಗೂ ಕಲಿಸುತ್ತಾರಂತೆ, ಆದ್ದರಿಂದ ಅಲ್ಲಿನವರು ಗಣಿತದಲ್ಲಿ ಮುಂದೆ ಇರುತ್ತಾರಂತೆ ! ಅದು ನಿಜವೇ?'
ನಾನು ಹೇಳಿದೆ 'ನಾನು ಕಲಿಯುವಾಗ ಶಾಲೆಗಳಲ್ಲಿ ಹಾಗೆ ಇತ್ತು. ಆದರೆ ಈಗ ಹಾಗಿಲ್ಲ, ಹುಡುಗರು ಬರೀ ೧೦*೧೦ ರಷ್ಟು ಮಾತ್ರ ಮಗ್ಗಿ ಕಲಿಯುತ್ತಿದ್ದಾರೆ, ಕಾಲವೇ ಹೇಳಬೇಕು ನಮ್ಮ ಮುಂದಿನ ತಲೆಮಾರು ಗಣಿತದಲ್ಲಿ ಹಿಂದುಳಿಯುತ್ತಾರೆಯೋ ಎಂದು'. ಹೀಗೆ ನಮ್ಮ ಸಂಸ್ಕ್ರತಿಯ ಬಗ್ಗೆ ಹಲವು ವಿಷಯಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು. ಮಾತನಾಡುತ್ತಾ ಒಮ್ಮೆ 'ನಮ್ಮ ಸಮಾಜದಲ್ಲಿ ಧೂಮಪಾನ, ಮದ್ಯಪಾನ ಮಾಡುವವ್ರನ್ನು ಲಂಪಟರನ್ನು ದೂರ ಇಡುತ್ತಾರೆ, ಅಂತವರಿಗೆ ಹೆಣ್ಣುಕೊಡಲು ಹಿಂದೆ ನೋಡುತ್ತಾರೆ' ಎಂದೆಲ್ಲ ಭಾಷಣ ಕೊಟ್ಟಿದ್ದೆ. ಒಮ್ಮೆ ಸಕುರಾ ಕರಾವೋಕೆ ಬಾರ್ ಗೆ ನನ್ನನ್ನು ಕೂಡಾ ಕರೆದೊಯ್ದಿದ್ದಳು.ಇನ್ನೊಮ್ಮೆ ಬೆಳದಿಂಗಳ ನೌಕಾವಿಹಾರಕ್ಕೆ ಕರೆದೊಯ್ದಿದ್ದಳು. ನನ್ನಜಪಾನ್ ವಿಹಾರಕ್ಕೆಲ್ಲ ಆಕೆಯೇ ನಾವಿಕೆ.
ಒಮ್ಮೆ ಅಕಿರಾ ಕುರೋಸಾವ-ನ ಸಿನಿಮಾಗಳ ಬಗ್ಗೆ ಚರ್ಚಿಸುತ್ತಾ ಆತನ ಸೆವೆನ್ ಸಮುರಾಯ್ ಮತ್ತು ರಶೋಮನ್ ಸಿನಿಮಾ ನನಗೆ ಬಹಳ ಇಷ್ಟವಾದ ಸಿನಿಮಾಗಳು, ರಶೋಮನ್ ಸಿನಿಮಾದಲ್ಲಿ ತೋರಿಸುವ 'ಹಲವು ದ್ರಷ್ಟಿಕೋನ ದಲ್ಲಿ ಕಾಣಿಸುವ ಘಟನೆ, ನಮ್ಮ ವಚನಗಳಲ್ಲಿ ಹೇಳುವ 'ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ' ಎಂಬ ತತ್ವದ ರೀತಿಯಲ್ಲಿ ಕಾಣುತ್ತದೆ- ಎಂದು ಹೇಳುತ್ತಾ ವಚನಗಳ ಕಿರು ಪರಿಚಯ ಮಾಡಿಕೊಟ್ಟೆ ಆಕೆಗೆ. ನಾನು ಕೊಟ್ಟ ಕಾಳಿದಾಸನ ಪುಸ್ತಕದಿಂದ ಆಕೆ ಪ್ರಭಾವಿತಳಾಗಿದ್ದಳು, ಕಾಳಿದಾಸನ ವರ್ಣನೆಗಳಿಗೆ ಮಾರುಹೋಗಿದ್ದಳು. ಒಮ್ಮೊಮ್ಮೆ ನಾನು ಮತ್ತು ಆಕೆ ಉದ್ಯಾನವನದಲ್ಲಿ ಹೂಬಿಟ್ಟ ಚೆರ್ರಿ ಮರದ ಕೆಳಗೆ ಕುಳಿತು ದೂರದಲ್ಲಿ ಮುಗಿಲು ಚುಂಬಿಸುವ ಫ್ಯುಜಿ ಪರ್ವತವನ್ನು ದಿಟ್ಟಿಸುತ್ತಾ ಹರಟುತ್ತಿದ್ದೆವು. ಒಮ್ಮೆ ಫ್ಯುಜಿಯ ತುದಿ ಮುಟ್ಟಿ ಬರಬೇಕೆನ್ನುವ ನನ್ನ ಬಯಕೆಯನ್ನು ಸಕುರಾಳೊಂದಿಗೆ ತೋಡಿಕೊಂಡಾಗ, ತಾನು ಜೊತೆಗೂಡುವುದಾಗಿ ಭರವಸೆಕೊಟ್ಟಳು.
ಒಮ್ಮೆ ಮ್ಯಾನೇಜರ್ ಹೊಸೊಕಾವ ಆತನ ತಂಡದೊಂದಿಗೆ, ಸಕುರಾಳನ್ನೂ ಸೇರಿಸಿ, ನಮ್ಮನ್ನು ಒಂದು ಬಾರ್ ಮತ್ತು ರೆಸ್ಟೋರೆಂಟ್ಗೆ ಕರೆದೊಯ್ದು ಪಾರ್ಟಿ ಕೊಟ್ಟಿದ್ದ.
ವಿಶ್ವ ಹೇಳಿದ್ದ - ನಾವು ಅತಿಥಿಗಳಾಗಿ ಹೋದವರು ಪಾರ್ಟಿಯಲ್ಲಿ ಮ್ಯಾನೇಜರ್ ಪಕ್ಕ ಕುಳಿತುಕೊಂಡರೆ ಮ್ಯಾನೇಜರಿನ ಬಿಯರ್ ಗ್ಲಾಸ್ ಖಾಲಿಯಾದಾಗಲೆಲ್ಲ ತುಂಬಿಸುತ್ತಾ ಕೂರಬೇಕು, ಅದು ಅಲ್ಲಿನ ಪದ್ಧತಿ ಅಂದ. ನಾನು ಕುಡಿಯದಿದ್ದಾಗ ಇನ್ನೊಬ್ಬರಿಗೆ ಕುಡಿಸುವ ಕೆಲಸ ನನ್ನಿಂದಾಗದು, ಬೇಕಾದರೆ ನೀನೆ ಮಾಡು, ಹೇಗಿದ್ದರೂ ನೀನು ಕುಡಿಯುವವನು - ಎಂದೆ. ವಿಶ್ವ - ನೀನೊಬ್ಬ ಸಾತ್ವಿಕ ಬರಡು ಮನುಷ್ಯ. ಬಿಎಂಶ್ರೀ ಹೇಳಿಲ್ಲವೇ - 'ಏನು ಸುಖಿಯೋ ತಾನು ಹುಟ್ಟಿನಲಿ ಕಲಿಕೆಯಲಿ ಇನ್ನೊಬ್ಬನಿಚ್ಛೆಯನು ದುಡಿಯದಿರುವವನು' ಅಂತ - ಅಂದ. "ಹೌದಪ್ಪ, 'ತನ್ನಂತೆ ಪರರ ಬಗೆ'ಯುವುದು ನಿನಗೆ ಮಾತ್ರ ಸಾಧ್ಯ, ನೀನೇ ಆ ಕೆಲಸ ಮಾಡು" -ಎಂದೆ. ಆತ ಒಪ್ಪಿಕೊಂಡ.
ಹೊಸೊಕಾವ ಪಾರ್ಟಿಯಲ್ಲಿ ಲೋಕಾಭಿರಾಮ ಮಾತನಾಡುತ್ತ ನನ್ನ ಹೆಸರಿನ ಅರ್ಥದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳುತ್ತಿದ್ದ. ನಾನು ಯಾಕೆ ಕುಡಿಯುದಿಲ್ಲವೆಂದೂ ಕೇಳಿದ. ನಾನು - ನಮ್ಮಲ್ಲಿ ಕುಡಿಯುವುದು ಕೆಟ್ಟ ಅಭ್ಯಾಸವೆನ್ನುತ್ತಾರೆ -ಅಂದೆ. ಪಾರ್ಟಿ ಮುಗಿಯುವಾಗ ಆತನು ನಮ್ಮ ಭೇಟಿಯಿಂದ ಆತ ಸಂತುಷ್ಟನಾಗಿರುವುದಾಗಿಯೂ ನಮ್ಮ ಕೆಲಸದ ವೈಖರಿಗೆ ಮತ್ತು ಗುಣಮಟ್ಟಕ್ಕೆ ಮಾರು ಹೋಗಿರುವುದಾಗಿಯೂ ಉದ್ದ ಭಾಷಣ ಕೊಟ್ಟ. ಸಾಮಾನ್ಯವಾಗಿ ಜಪಾನೀಯರು ಹೊರಗಿನವರನ್ನು ಸುಲಭವಾಗಿ ನಂಬುವುದಿಲ್ಲ. ಅವರಿಗೆ ಸುಳ್ಳು ಹೇಳುವವರ ಬಗ್ಗೆ ಅಪಾರ ಕೋಪ. ಅಂತಹವರೊಡನೆ ವ್ಯವಹಾರ ನಿಲ್ಲಿಸಿಬಿಡುತ್ತಾರೆ. ಹೊಸೊಕಾವ ಕ್ರಮೇಣ ನಮ್ಮ ಬಗ್ಗೆ ವಿಶ್ವಾಸ, ನಂಬಿಕೆ ಬೆಳೆಸಿಕೊಂಡಿದ್ದ. ಒಮ್ಮೆ, ನಾನಿನ್ನೂ ಅವಿವಾಹಿತ ಎಂದು ತಿಳಿದ ಹೊಸೊಕಾವ, ನನ್ನೊಡನೆ ಅಂದ - 'ನೋಡು- ಸಕುರಾ ಕೂಡ ಅವಿವಾಹಿತೆ, ನೀನ್ಯಾಕೆ ಆಕೆಯನ್ನು ಮಾತಾಡಿಸಿ ನೋಡಬಾರದು' ಎಂದ! ಆವಾಕ್ಕಾದೆ! ಈ ಮನುಷ್ಯ ಪರದೇಸಿಯಾದ ನನ್ನೊಡನೆ ಇಷ್ಟು ನೇರವಾಗಿ ಮುಜುಗರವಿಲ್ಲದೆ ಅವನ ಸಹಾಯಕಿಯನ್ನು ಪಟಾಯಿಸು ಅನ್ನುತ್ತಾನಲ್ಲ ಅಂದುಕೊಂಡೆ! ಮುಜುಗರಗೊಂಡು ಸುಮ್ಮನಾದೆ.
ನಾನು ಕೇಳಿದಂತೆ ಜಪಾನಿನಲ್ಲಿ ಹುಡುಗಿಯರು ಸಾಮಾನ್ಯವಾಗಿ ಕಾಲೇಜಿನಲ್ಲಿಯೇ ಯಾರಾದರೂ ಒಬ್ಬ ಬಾಯ್ಫ್ರೆಂಡ್ ಹುಡುಕಿಕೊಳ್ಳುತ್ತಾರಂತೆ. ಅವನೊಡನೆ ಪ್ರೇಮ ಬೆಳೆಸಿಕೊಂಡು ಮುಂದೆ ಮದುವೆಯಾಗುತ್ತಾರಂತೆ. ಹಾಗೆ ಮಾಡಲಾಗದಿದ್ದರೆ ಮುಂದೆ ಹುಡುಕಿಕೊಳ್ಳುವುದು ಕಷ್ಟವಾಗುವುದಂತೆ. ಬಹುಶಃ ಸಕುರಾ ಓದಿನ ಬಗ್ಗೆ ಮಾತ್ರ ಗಮನ ಕೊಟ್ಟು, ಹುಡುಗರ ಬಗ್ಗೆ ಗಮನ ಕೊಡದೇ ಹಾಗೆ ಉಳಿದುಕೊಳ್ಳುವಂತಾಗಿರಬೇಕು ಅಂದುಕೊಂಡೆ.
ಮತ್ತೆ ಇನ್ನೆರಡು ತಿಂಗಳಲ್ಲಿ ಕೆಲಸ ಮುಗಿಸಿ ನಾವು ಭಾರತಕ್ಕೆ ಹೊರಡುವ ಮೊದಲು ಹೊಸೊಕಾವ ಒಂದು ಬೀಳ್ಕೊಡುಗೆ ಪಾರ್ಟಿ ಕೊಟ್ಟ. ಆ ದಿನ ಸಕುರಾ ಮುತ್ತಿನ ಹಾರ ಧರಿಸಿ ಸಿಂಗರಿಸಿಕೊಂಡು ಬಂದಿದ್ದಳು. ನಳನಳಿಸುತ್ತಿದ್ದಳು. ನನ್ನ ಸಮೀಪ ನಿಂತು ಫೋಟೋ ತೆಗಿಸಿಕೊಂಡಳು. “ಫ್ಯುಜಿಯ ಯಾತ್ರೆ ಬಾಕಿಯಾಗಿದೆ, ಮರಳಿ ಬನ್ನಿ ಆದಷ್ಟು ಬೇಗ” - ಎಂದಳು. ಆಕೆ ತಯಾರಿಸಿದ್ದ ಸುಂದರ ಕಸೂತಿಯ ಬೀಸಣಿಕೆಯನ್ನು ಉಡುಗೊರೆಯಾಗಿ ಕೊಟ್ಟಳು. ಆಕೆಗೆ 'ಸಯನೋರಾ' ಹೇಳಿ ಭಾರತಕ್ಕೆ ಹೊರಟು ಬಂದೆ.
ಒಮ್ಮೊಮ್ಮೆ ಬೇಸಗೆಯ ಬಿಸಿಲಿಗೆ ಸಕುರಾಳ ಬೀಸಣಿಗೆ ಯಿಂದ ಬೀಸುವ ತಂಗಾಳಿ ಮುದಕೊಡುತ್ತಿರುತ್ತದೆ, ಹಿತವೆನ್ನಿಸುತ್ತದೆ.
ಹಲವು ಬೇಸಿಗೆಗಳು ಕಳೆದ ಮೇಲೆ, ಮೊನ್ನೆ ಸ್ವಪ್ನದಲ್ಲಿ ಸುಂದರಿಯೊಬ್ಬಳು ಬಂದು ನನ್ನೆದುರು ನಿಂತು ಕೇಳಿದಂತಾಯಿತು - ನನ್ನ ಗುರುತಾಗಲಿಲ್ಲವೇ? ಎಂದು. 'ಇಲ್ಲ' ಎಂದೆ. "ಅಯ್ಯೋ! ನಾನು ಸಕುರಾ, ನನ್ನ ಗುರುತಾಗಲಿಲ್ಲವೇ? ನೀನೂ ದುಷ್ಯಂತನಂತಾದೆಯೋ!" ಎಂದು ರೋಧಿಸಿ ಕೂಗಿದಳು.
ನಾನು ಬೆಚ್ಚಿಬಿದ್ದು ಧಿಗ್ಗನೆ ಎದ್ದು ಕುಳಿತೆ. ಯಾಕೋ ಬೆರಳು ತುರಿಸುತ್ತಿತ್ತು! ದಿಟ್ಟಿಸಿ ನೋಡಿದೆ, ಶಕುಂತಲೆಯ ಉಂಗುರವಿರಲಿಲ್ಲ!

_______________________________________________________________
Sakura and Shakuntala
(Author: Dinesh K Shetty T.)
Dinakara,
Dinesha are synonyms for Sun God. Japan is called the land of rising
Sun. Sun God is born there some people describe.
When I visited Japan along with my team, my Friend Vishwanatha said 'Welcome Dinesha, you have visited your birthplace now! ‘I asked him -'So, will they give citizenship for me?'. He paused and said, 'perhaps if you stay for a long time here and marry a Japanese girl!'
My friend Vishwantha is a large-hearted person. A man who thinks that the whole world is his family. He is good at making friends, was staying in Japan since a couple of years. He is in a 'live-in relationship' with a Japanese girl now.
Japan looked like a strange country to me. It looks to me as if the people here think that people are born only to work hard - like our folks used to think that donkeys are born only to serve them. I wondered why they are so obsessed with work! If they do hard-work all along their life, when will they get time to enjoy their life? If they cannot enjoy the fruits of their hard work, then what's the point of working hard? When I saw the serious faces in the offices there, when I saw people reaching office much before the scheduled time, that too their eagerness to reach office before the manager reaches office, working so hard till late in the evening, the custom of staying in office till manager leaves office - I used to pity them!
In the office I visited, I used to see people sitting straight gazing computer screen from morning to evening, not even looking at or talking with nearby people! I thought these are strange creatures, not human beings like us. Maybe that Brahma created especially for Japan these human look-a-like robots! A working place without any chitchats or some laughs or jokes or some noise! How can people spend a whole day in that environment? Any hell in my country looked better for me. Another strange system I found there is - manager sits perpendicular to the rows in which his subordinates sit. The idea is that the manager will be able to oversee what the workers are doing! They often bend to greet others. If the other person's age is much more, you need to bend even more(one may break his back by often greeting elders) I guess this custom must have been borrowed from India. Japanese men throng to Bar & Restaurants on Friday evening - just to get rid of their weariness caused by the prolonged week-long hard-work. Some rush to Karaoke bars to vent out their frustrations by singing along the background music tapes in loud voice! English pop songs are popular there. In the Bar & Restaurants, the eating & drinking continues even after midnight. Some even throng to another one after finishing an installment in one restaurant. After that, they quietly walk towards their home balancing themselves with difficulty and walk as if measuring the width & breadth of the road!
Japanese are obsessed with the Japanese language I felt. They use Japanese everywhere, even in mobile & computers. Though many learn English in schools, since they don't use much English in daily life, they struggle to communicate with outside people. I told Vishwa 'If they had put some more effort in learning English and used computers and it's applications as it is in English, they would have been in better position to do business with others. They would have saved money on translation costs too"
Vishwa said - "You are also so proud of your mother tongue. You used to quote a Kannada poet Rajaratnam saying Even if I was pushed into hell, with my tongue cut & mouth stitched, I will utter Kannada through my nose! Similarly, what's wrong when the Japanese take pride in their language?"
Few people in Japan take interest in learning English and put more effort. They end up as interpreters for others in offices. One such interpreter is Sakura an engineer working in the company to which we were working from India. I was on a visit to that company.She was assistant to the manager there helping them to communicate with us.
She was lean, fair beautiful lady, of my age approximately. We used to communicate through email with her when we were working in India for them. She knew our work capability through our frequent interactions, hence she had developed a bit of intimacy with us.
When I went to Japan, I had carried a butterfly-shaped hair-clip made of sandalwood and a book for Sakura. The book is an English version of Kalidasa's (India's Shakespeare) writings. Sakura gladly accepted them.
Whenever the manager conducts a meeting with us & his team in the office, Sakura's presence was the must. Else, the team used to struggle to communicate with us. The manager Hosokawa was an aged person. he used to show affection and respect towards us and used show curiosity & respect for our culture. Sakura was kind to us & used to show respect. She used to say that she is amazed seeing the way we analyze the problems of Software running on their computers by sitting in India and suggesting solutions! She used to praise us as if we are Einstein descendants!
Once she asked me with curiosity - "I saw a TV program in which they said in Indian Education system they teach 20x20 tables in primary classes. That is why Indians are good in mathematics. Is that true?"
I told her - "When I studied, we used to learn 20x20 table. But nowadays kids are learning only 10x10 table. only the time will tell whether the next generation will be bad in mathematics or not".
Like this, she used to learn more about our culture. I gave a lecture once to her saying "In our society, people who smoke, drink & who have illicit relationships are looked down upon. Parents refuse to give their daughters to such persons in marriage"! I discussed Akira Kurosawa's movies with her and mentioned that 'Seven Samurai' & 'Rashomon' are my favorites. What I like in Rashomon was the depiction that truth will have different interpretations which is similar to the concept given in our Vachana's in the Kannada language like the -God will appear in different forms according to the feelings & devotion of his devotees and gave her an introduction to Vachana literature in Kannada. Sakura was impressed with the Book of Kalidasa. She was so fond of Kalidasa's description of beauty and love in his writings. Sakura had taken me to Karaoke bar. She had taken me on a boat ride on a moonlit night too. She was the navigator for me on my Japan trip almost!
Sometimes we used to sit in a garden & chat gazing the distant Fuji mountain which was often kissing the clouds. Once, when I told her about my desire to climb Fuji mountain, she offered to accompany me.
Once Manager Hosokawa gave the party to us along with his team including Sakura in a Bar & Restaurant.
Vishwa told me that -when you go as a guest to the party as a guest, if you sit with the manager, then you need to keep filling the manager's beer glass, that's the custom here he said. When I am not drinking beer, I don't like to feed drinks to others, I said. Anyway, since you drink beer, why don't you do that job? I asked.
Vishwa said - You are a boring inflexible tasteless man. Haven't you heard poet Henry Wotton who says in his poem 'Character of a happy life' like this - 'How happy is he born or taught that serveth not another's will'.
I told him - 'Yes. Only you can have the philosophy of treating others like you. It’s better if you serve them at the party'. He agreed.
Hosokawa started chatting with me at the party with his curious questions about the meaning of my name, about our culture and traditions, etc. He asked me why I don't take alcoholic drinks. I told him that it's considered as taboo in our tradition. At the end of the party, Hosokawa gave a long speech saying that he was very happy with our visit to his office and praised our work capability and quality of our work. Generally Japanese won't trust outsiders easily. They don't like people who lie. if someone lies to them, they will stop doing business with them. Gradually, Hosokawa had developed trust in us. He started liking us. When he came to know that I am unmarried, he told me once - 'Look! Even Sakura is unmarried. Why don't you talk to her!" I was aghast! Wondered how he can talk like this with a foreigner without any hesitation! He was persuading me to woo his assistant! Felt embarrassed and kept quiet.
I was told that in Japan, generally, girls make boyfriends during their college days. They gradually strengthen their relationship with them and marry them later. If a girl can't get hooked on to a boy during studies, it becomes difficult to get hooked up later it seems. So, I thought Sakura would have concentrated more on studies rather than on boys and hence couldn't get hooked up till now.
After a month or so when we were finishing our work in Japan, Hosokawa gave us a send-off party. Sakura came to the party dressed up beautifully wearing a pearl necklace. She was looking like a beautiful doll. She stood near me for a photo session too. She asked me to come back to Japan and reminded me that our Fuji mountain trip is pending. She gave a nicely crafted handmade Japanese silk hand fan as a gift to me. I bid 'Sayanora' and returned to India.
During summer, I do feel nice due to the cool breeze from Sakura's hand-fan. I do ruminate on the nice time I spent in Japan.
Several summers have passed. Recently when I was sleeping in the night, in my dream a beautiful lady appeared in front of me and asked me - 'Don't you recognize me?'. I told her 'No'. She started weeping and cried aloud " Alas! You have forgotten me. I am Sakura. Can't you recognize me? Have you too become a Dushyanta?"
I felt a jolt and woke up suddenly. My ring finger was itching. Gazed at it. Couldn't find Shakuntala's ring!

The End.
Comments
Post a Comment