Here is a Hiriya
ಹೀಗೊಬ್ಬ ಹಿರಿಯ
ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ
ನಾನೀಗ ಹೇಳಹೊರಟಿರುವುದು ನಮ್ಮೂರಿನ ಹಿರಿಯನ ಬಗ್ಗೆ. ಹೌದು ಅವನ ಹೆಸರೇ ಹಿರಿಯ.
ಆತ ದೊಡ್ಡ ಮನುಷ್ಯನೇ, ಕಾಯದಲ್ಲಿಯೂ, ವಯಸ್ಸಿನಲ್ಲಿಯೂ, ಗುಣದಲ್ಲಿಯೂ. ಜಾತಿಯಲ್ಲಿ ಮಾತ್ರ ದೊಡ್ಡವನಲ್ಲ. ಆತ ಹೊಲೆಯರ ಜಾತಿಗೆ ಸೇರಿದವನು.
ನಾನು ಚಿಕ್ಕವನಿದ್ದಾಗ ಅಮ್ಮನೊಡನೆ ಈ ಹಿರಿಯನಿಗೆ ವಯಸ್ಸೆಷ್ಟು ಎಂದು ಕೇಳಿದಾಗ ಆಕೆ ಅಂದಿದ್ದಳು - ಗೊತ್ತಿಲ್ಲಪ್ಪ, ನಾನು ಚಿಕ್ಕವಳಿದ್ದಾಗಲೂ ಆತ ಹೀಗೇ ಇದ್ದ. ಈತ ಎಲ್ಲೋ 'ಸಂಜೀವಿನಿ' ಸೇವಿಸಿರಬೇಕು ಅಂದುಕೊಳ್ಳುತ್ತಿದ್ದೆ !
ನನ್ನ ಕಾಲಕ್ಕೆ ಈ 'ಒಕ್ಕಲುತನ ಅಥವಾ ಜೀತ' ಎನ್ನುವುದು ಕಡಿಮೆಯಾಗುತ್ತ ಬಂದಿತ್ತು. ಈ ಭೂಸುಧಾರಣೆ ಕಾಯಿದೆ ಬಂದ ಮೇಲೆ ಒಕ್ಕಲು ಅನ್ನಿಸಿಕೊಂಡವರಿಗೆಲ್ಲ ಒಂದಿಷ್ಟು ಭೂಮಿಯ ಒಡೆತನ ಸಿಕ್ಕಿ ಅವರೆಲ್ಲ ಯಾರೋ ಒಬ್ಬ ಧಣಿಯ ಅಡಿಯಾಳಾಗಿ ಜೀವಮಾನ ಸವೆಸಬೇಕಾಗಿರಲಿಲ್ಲ. ಆದರೆ ಹೊಲೆಯರಿಗೆ ಮಾತ್ರ ಭೂಮಿಯ ಭಾಗ್ಯ ದಕ್ಕಿದ್ದು ಕಡಿಮೆ. ಯಾಕೆಂದರೆ ಅವರಿಗೆ ಉಳುವ ಭೂಮಿಯನ್ನು ಗೇಣಿಗೆ ಕೊಡುತ್ತಿರಲಿಲ್ಲ. ಗೇಣಿಗೆ ಕೊಂಡವರಿಗೆ ಮಾತ್ರ ಭೂಮಿ ಒಡೆತನ ದಕ್ಕುತ್ತಿತ್ತು. ಈ ಹಿರಿಯ ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ. ಇನ್ನೊಬ್ಬರ ಹೊಲಗಳಲ್ಲಿ ದುಡಿಯುತ್ತಿದ್ದ. ನಮ್ಮ ಮನೆಗೂ ಕೆಲಸಕ್ಕೆ ಬರುತ್ತಿದ್ದ. ಅದೇಕೋ ನನ್ನಜ್ಜನ ಬಗ್ಗೆ ಗೌರವವಿರುವುದರಿಂದ ನಮ್ಮ ಮನೆಯನ್ನು ಸ್ವಲ್ಪ ಹೆಚ್ಚಾಗಿ ಹಚ್ಚಿಕೊಂಡಿದ್ದ.
ನಾನು ಬಹಳ ಚಿಕ್ಕವನಿದ್ದಾಗ, ಅಸ್ಪ್ರಶ್ಯತೆ ಆಚರಣೆ ಸ್ವಲ್ಪ ಜಾಸ್ತಿ ಇದ್ದಾಗ ಆತ, ನಮ್ಮ ಮನೆಯೊಳಗೆ ಬರುತ್ತಿರಲಿಲ್ಲ. ಕೊಟ್ಟಿಗೆಗೆ ಮಾತ್ರ ಪ್ರವೇಶವಿತ್ತು ಅವನಿಗೆ. ನಮ್ಮ ಉಳುವ ಎತ್ತುಗಳು, ಹೋರಿಗಳು ಅವನ ಸುಪರ್ದಿಯಲ್ಲಿದ್ದು ಅವನ ಆರೈಕೆಯ ಮಹಿಮೆಯಿಂದ ನಳನಳಿಸುತ್ತಿದ್ದವು. ಅವುಗಳನ್ನು ಉಳಲು ಕೊಂಡೊಯ್ಯುವುದು, ಬಂಡಿ ಹೂಡುವುದೂ ಅವನ ಕೆಲಸವೇ ಆಗಿತ್ತು. ಆತ ಎಂಥಾ ಕೆಲಸಗಾರನೆಂದರೆ ನಮ್ಮೂರಲ್ಲಿ ಅವನನ್ನು ಬಿಟ್ಟರೆ ಇನ್ನೊಬ್ಬನಿಲ್ಲ ಎಂಬಷ್ಟು. ಆತ ಗುಡಿಕೈಗಾರಿಕೆಯಲ್ಲೂ ನಿಪುಣ. ಕಾಡಿಗೆ ಹೋಗಿ ಬೀಳಲುಗಳನ್ನು ತಂದು ಸೊಗಸಾದ ಬುಟ್ಟಿ ಹೆಣೆಯುತ್ತಿದ್ದ. ಅವು ವಿವಿಧ ಬಗೆಯವು, ಅಕ್ಕಿ ತುಂಬುವ ಬುಟ್ಟಿ, ತರಗೆಲೆ ತುಂಬುವ ಬ್ರಹತ್ ಮೊಟ್ಟೆಯಾಕಾರದ ಗೂಡು, ಗೊಬ್ಬರ ಹೊರುವ ಹೆಡಿಗೆ, ವೀಳ್ಯ ಸಾಮಗ್ರಿಗಾಗಿ ಬೆತ್ತದ ಸಂಚಿ, ಒಂದೇ ಎರಡೇ, ಗ್ರಾಮೀಣ ಬದುಕಿನಲ್ಲಿ ಜನಪದರು ಬಳಸುವ ಸಕಲ ಸಾಮಗ್ರಿಗಳ ತಯಾರಿಯ ಗುಟ್ಟನರಿತವನು ಎನ್ನಬಹುದು.
ನಸುಕಿನಲ್ಲಿಯೇ ಎದ್ದು ಹೊಲ ಉಳಲು ಹೋಗುವ ಹಿರಿಯ ಹೊಲದಲ್ಲಿ ಉಳುತ್ತ ಹಾಡುವ ಹಾಡುಗಳು ನಮಗೆ ಸುಪ್ರಭಾತವಾಗಿದ್ದವು. ಎತ್ತುಗಳಾದ ಕಾಳ ಮತ್ತು ಬೆಳ್ಳ ಆ ಹಾಡುಗಳಲ್ಲಿ ಪಾತ್ರಧಾರಿಗಳು ಆಗಿರುತ್ತಿದ್ದವು. ಅವುಗಳ ಗುಣಗಾನ, ಅವುಗಳು ಮಾಡುವ ಸಾಹಸಗಳ ವರ್ಣನೆ ಅವೇ ಆ ಹಾಡುಗಳಲ್ಲಿ ತುಂಬಿರುತ್ತಿದ್ದವು. ಎತ್ತುಗಳನ್ನು ಮೇಯಿಸಲಿಕ್ಕಾಗಲೀ, ಮೀಯಿಸಲಿಕಾಗಲೀ ಕೊಂಡೊಯ್ಯುವಾಗ ಹಿರಿಯ ಒಮ್ಮೊಮ್ಮೆ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದ. ಒಮ್ಮೊಮ್ಮೆ ನನ್ನನ್ನು ಎತ್ತಿನ ಮೇಲೆ ಕುಳ್ಳಿರಿಸಿಕೊಂಡು ಸಾಗುತ್ತಿದ್ದ. ಆಗ ನನ್ನ ಮುಖದಲ್ಲಿ ಹೊಮ್ಮುತ್ತಿದ್ದುದು ಗಜಸವಾರಿಯ ಗರ್ವದ ಗತ್ತು! ಎತ್ತುಗಳನ್ನು ಕೆರೆಯಲ್ಲಿ ಮೀಯಿಸುತ್ತಲೇ ಹಿರಿಯ ನನಗೆ ಈಜು ಕಲಿಸಿದ್ದ. ಕೆರೆಯಲ್ಲಿಯ ತಾವರೆಗಳನ್ನು ದಂಟು ಸಮೇತ ಕಿತ್ತು ಹಾರ ಮಾಡಿ ತೊಳೆದ ಎತ್ತುಗಳನ್ನು ಸಿಂಗರಿಸಿ ಖುಷಿಗೊಳ್ಳುವ ಹವ್ಯಾಸ ಹಿರಿಯನದ್ದು. ಅದರಲ್ಲಿ ಒಮ್ಮೊಮ್ಮೆ ಪಾಲ್ಗೊಂಡು ಸಂಭ್ರಮಿಸುವ ಭಾಗ್ಯ ನನ್ನದು. ಹಿರಿಯ ಪರಿಣತ ಈಜುಗಾರನೂ ಆಗಿದ್ದ. ಒಮ್ಮೊಮ್ಮೆ ಎತ್ತರದ ದಂಡೆಯಿಂದ ಕೆರೆಗೆ ಧುಮುಕಿ ನೀರೊಳಗೆ ಮಾಯವಾಗುತ್ತಿದ್ದ. ನನ್ನ ಎದೆ ಢವಗುಟ್ಟಲು ಕಾರಣವಾಗುತ್ತಿದ್ದ. ಕೆಲವು ನಿಮಿಷಗಳ ಬಳಿಕ ಕೆರೆಯ ಇನ್ನೊಂದು ಮೂಲೆಯಿಂದ ಮೇಲೇಳುತ್ತಿದ್ದ. ಎಲ್ಹೋಗಿದ್ದೆ ಎಂದರೆ - ಪಾತಾಳ ಲೋಕಕ್ಕೆ ಎಂದು ಯಾವುದೋ ಗಡ್ಡೆಗಳನ್ನು ನನ್ನ ಕೈಯಲ್ಲಿಟ್ಟು ಇದನ್ನು ಅಲ್ಲಿನ ಬಲಿ ಮಹಾರಾಜನಿಂದ ತಂದಿದ್ದು ಎಂದು ಕುಶಾಲು ಮಾಡಿ ನನ್ನನ್ನು ಬೆರಗಾಗಿಸುತ್ತಿದ್ದ. ಒಮ್ಮೊಮ್ಮೆ ಅವನ ಮರ ಹತ್ತುವ ವೇಗವನ್ನು ನೋಡಿ,ಹಿರಿಯ, ವಾನರ ವಂಶದವನೇ ಎಂಬ ಸಂಶಯಕ್ಕೆ ನಾನು ಬಂದದ್ದುಂಟು. ತೆಂಗು, ಕಂಗು, ತಾಳೆ ಮರಗಳನ್ನು ಲೀಲಾಜಾಲವಾಗಿ ಹತ್ತಿ ಇಳಿಯುತ್ತಿದ್ದ. ಅವನನ್ನು ಅನುಕರಿಸಿ ನಾನೂ ಹತ್ತಲು ಹೋಗಿ ಕೆಲವು ಸಾರಿ ಎದೆ ಅರಚಿಸಿಕೊಂಡಿದ್ದೆ. ಗಾಳ ಹಾಕಿ ಮೀನು ಹಿಡಿಯುವುದರಲ್ಲಿಯೂ ಆತ ನಿಸ್ಸೀಮ. ಆದಾವ ಮೋಡಿಯೋ, ಒಂದರ್ಧ ಗಂಟೆಯಲ್ಲಿ ನಾಲ್ಕಾರು ಉದ್ದದ ಮೀನುಗಳನ್ನು ಸಣ್ಣ ಕೋಲಿಗೆ ಸಿಕ್ಕಿಸಿಕೊಂಡು ಕೆರೆಯ ದಂಡೆಯಿಂದ ಹೊರಹೊಮ್ಮುವುದನ್ನು ನೋಡಿ ನಾನು ಬೆಕ್ಕಸ ಬೆರಗಾಗುತ್ತಿದ್ದೆ. ನಾವು ಹುಡುಗರು ಕೆರೆಯ ಬಳಿ ಸದ್ದು ಮಾಡಿದರೆ 'ಶ್ಶ್' ಎಂದು ಸುಮ್ಮನಿರಿಸುತ್ತಿದ್ದ, ಶಬ್ದ ಮಾಡಿದರೆ ಮೀನು ಗಾಳ ಕಚ್ಚುವುದಿಲ್ಲ ಅನ್ನುತ್ತಿದ್ದ.
ನಾವು ಬೆಳಗಿನ ತಿಂಡಿಗೆ ಕೂರುವ ಮೊದಲೇ ಹಿರಿಯ ಒಂದು ಮುಡಿ ಗದ್ದೆಯನ್ನು ಎರಡು ಸಾಲು ಉತ್ತು ಬಿಟ್ಟಿರುತ್ತಿದ್ದ! ಅದೇನು ಚುರುಕು ನಡಿಗೆಯೋ ಅವನದ್ದು, ಅವನನ್ನು ನೊಡಿದರೆ ನಮ್ಮ ಎತ್ತುಗಳು ಕೂಡಾ ಚುರುಕಾಗಿ ನಡೆಯುತ್ತವೆ. ಹಾಗಂತ ಆತ ಬಾರುಕೋಲು ಹಿಡಿದುಕೊಂಡರೂ ಎತ್ತುಗಳ ಬೆನ್ನಿಗೆ ತಾಗಿಸುವವನಲ್ಲ. ಬಹುಶ: ಅವನ ಬಾರುಕೋಲುಗಳು ನಮ್ಮ ಎತ್ತುಗಳಿಗೆ ಮೋಹನ ಮುರಳಿಯಂತೆ ಮೋಡಿಮಾಡುತ್ತವೆಯೋ ಎನ್ನಿಸುತ್ತಿತ್ತು. ನಾನು ಉಳುಮೆಯ ಪಾಠವನ್ನು ಕಲಿತದ್ದು ಹಿರಿಯನಿಂದಲೇ. ಮೊದಮೊದಲು ನೇಗಿಲನ್ನು ಸಂಭಾಳಿಸಲು ಕಷ್ಟವಾಗಿ ಅದರ ಚೂಪಾದ ತುದಿಯನ್ನು ಎತ್ತುಗಳ ಕಾಲಿಗೆ ತಾಗಿಸಿ ಗಾಯ ಮಾಡಿದ್ದೂ ಉಂಟು. ಒಮ್ಮೆ ಎತ್ತುಗಳು ಸಿಟ್ಟುಗೊಂಡು ನನ್ನ ಮಾತು ಕೇಳದೇ ಓಡಲು ಸುರು ಮಾಡಿ ಗದ್ದೆಯ ಅಂಚು ಹಾರಿದಾಗ ನೇಗಿಲನ್ನು ಸಂಭಾಳಿಸಲಾಗದೇ ಒದ್ದಾಡಿ ಇನ್ನೇನು ಬೀಳುತ್ತಿರುವಾಗ ಹಿರಿಯ ಓಡಿ ಬಂದು ನೇಗಿಲು ಹಿಡಿದುಕೊಂಡು ಎತ್ತುಗಳನ್ನು ಸಂತೈಸಿ ನನ್ನನ್ನು ಬಚಾವು ಮಾಡಿದ್ದ. ಕ್ರಮೇಣ ಉಳುಮೆಯ ಜಾಣ್ಮೆ ನನಗೆ ಕರಗತವಾದರೂ, ಹಿರಿಯ ಗದ್ದೆಯನ್ನು ಎರಡು ಸಾರಿ ಉತ್ತು ಬರುವ ಸಮಯದಲ್ಲಿ ನನ್ನಿಂದಾಗುತ್ತಿದ್ದದ್ದು ಒಂದು ಸಾರಿಯ ಉಳುಮೆ ಮಾತ್ರ. ಬೇಸಾಯದ ಗುಟ್ಟನ್ನು ಬಲ್ಲವನಾಗಿದ್ದ ಹಿರಿಯ. ಎಷ್ಟು ಸಾರಿ ಉತ್ತು, ಎಷ್ಟು ಗೊಬ್ಬರ ಹಾಕಬೇಕು, ಯಾವಾಗ ನಾಟಿ ಮಾಡಬೇಕು, ಹೇಗೆ ನಾಟಿ ಮಾಡಬೇಕು, ಗದ್ದೆಯಲ್ಲಿ ಎಷ್ಟು ನೀರು ನಿಂತಿರಬೇಕು - ಇವೆಲ್ಲ ಅವನಲ್ಲಿ ಕೇಳಿಯೇ ತಿಳಿದುಕೊಳ್ಳಬೇಕು. ಭರಪೂರ ಫಸಲು ಕಂಡು - ಅವನ ಕೈಗುಣ ಚೆನ್ನಾಗಿದೆ ಎನ್ನುತ್ತಿದ್ದರು ನಮ್ಮೂರಿನ ಜನ.
ತಿಂಗಳಿಗೊಮ್ಮೆ ಶನಿವಾರದ ಕುಂದಾಪುರದ ಸಂತೆಗೆ ಬಂಡಿ ಹೂಡಿಕೊಂಡು ಧವಸಧಾನ್ಯಗಳನ್ನು ಹೇರಿಕೊಂಡು ಹೋಗಿ ಮಾರಿಕೊಂಡು ಬೆಲ್ಲ, ಮೆಣಸು, ಚಾಪುಡಿ, ಪಾತ್ರೆ ಪಗಡು ಇತ್ಯಾದಿಗಳನ್ನು ಕೊಂಡು ತರುವ ಕೆಲಸವನ್ನೂ ಮಾಡುವ ಪರಿಪಾಟ ಅವನದಾಗಿತ್ತು. ರಾತ್ರಿಗೇ ಹೊರಟು ಬೆಳಗಿನ ಜಾವಕ್ಕೆ ಸಂತೆಗೆ ತಲಪುವುದು ನಮ್ಮೂರ ಕಡೆಯ ಹಲವರಿಗೆ ವಾಡಿಕೆಯಾಗಿತ್ತು. ಹಲವಾರು ಬಂಡಿಗಳು ಲಾಟೀನು ಕಟ್ಟಿಕೊಂಡು ಸಾಲಾಗಿ ತಿಂಗಳ ಬೆಳಕಲ್ಲಿ ಸಾಗುವ ದ್ರಶ್ಯ ಅಲೌಕಿಕ ಸೌಂದರ್ಯದ ಭ್ರಾಮಕ ಬಿಂಬದಂತೆ ಮನಸ್ಸಿನಲ್ಲಿ ಅಚ್ಚೊತ್ತುತ್ತಿತ್ತು. ಎತ್ತುಗಳ ಕೊರಳಗಂಟೆಗಳು, ಅವುಗಳ ಗೊರಸುಗಳ ಲಾಳಗಳು ಮತ್ತು ಗಾಡಿಗಳ ಚಕ್ರಗಳು - ಇವೆಲ್ಲವು ಸೇರಿ ಹೊರಡಿಸುವ ಮಿಶ್ರ ಸಂಗೀತವು ಅದರ ವಿಶಿಷ್ಠ ಲಯದಿಂದ ನಮ್ಮ ಮನಸ್ಸನ್ನು ಗಾಢವಾಗಿ ಆವರಿಸಿಕೊಂಡು ಅದ್ಯಾವುದೋ ಕನಸಿನ ಲೋಕಕ್ಕೆ ಕೊಂಡೊಯ್ಯುವ ಪರಿ ಅನನ್ಯವಾದದ್ದು. ವಿಶಿಷ್ಟ ಭಾವಾನುಭೂತಿಯದ್ದು. ನೆನಸಿಕೊಂಡಾಗಲೆಲ್ಲ ನನ್ನನ್ನು ವಿವಶಗೊಳಿಸುವಂತದ್ದು.
ನನಗೆ ಹಿರಿಯನ ಹೆಂಡತಿಯ ನೋಡಿದ ನೆನಪಿಲ್ಲ. ನನಗೆ ತಿಳುವಳಿಕೆ ಮೂಡುವ ಮೊದಲೇ ಆಕೆಗೆ ಅದೇನೋ ಜಡವಾಗಿ ತೀರಿಕೊಂಡಿದ್ದಳಂತೆ. ಆಕೆ ಇದ್ದ ಕುರುಹಾಗಿ ಮಗನೊಬ್ಬನನ್ನು ಬಿಟ್ಟುಹೋಗಿದ್ದಳು. ಆಕೆ ಹೆತ್ತದ್ದು ಹಲವು, ಉಳಿದದ್ದು ಒಂದೇ. 'ಕೊಟ್ಟ ಶಿವ ಕಿತ್ತುಕೊಂಡ' ಎಂದು ನಿರ್ಲಿಪ್ತತೆಯಿಂದ ಹೇಳುತ್ತಿದ್ದ ಹಿರಿಯ. ಹೆಂಡತಿ ಹೋದ ಮೇಲೆ ತಾನೇ ಅಡುಗೆ ಮಾಡಿಕೊಂಡು ಜತನದಿಂದ ಮಗನನ್ನು ಸಾಕಿದ್ದ ಹಿರಿಯ, ಮಗನಿಗೆ ಹರೆಯ ಬಂದಾಗ ಹೆಣ್ಣು ಹುಡುಕಿ ತಂದು ಮದುವೆ ಮಾಡಿಸಿ, ಸ್ವತಂತ್ರವಾಗಿರಲಿ ಎಂದು ಪಕ್ಕದಲ್ಲೇ ಇನ್ನೊಂದು ಗುಡಿಸಲು ಹಾಕಿಕೊಟ್ಟು ಬೇರೆ ಒಲೆಯನ್ನೂ ಹಾಕಿಕೊಟ್ಟ. ಸೊಸೆಯ ಒಲೆಯ ಹಂಗಿಗೆ ಒಳಗಾಗುವ ಇಷ್ಟವಿರಲಿಲ್ಲ ಅವನಿಗೆ. ಮುಂದೊಂದು ದಿನ ಈ ಮುದಿಕೊರಡು ಭಾರ ಎಂದು ತಾತ್ಸಾರದಿಂದ ಗೊಣಗದಿರಲಿ ಎಂಬ ದೂರಾಲೋಚನೆ. ಸ್ವಾವಲಂಬಿ ಮನುಷ್ಯ, ಹಾಗೆಯೇ ಶಿಸ್ತಿನ ಮನುಷ್ಯ ಕೂಡಾ. ಹಲವು ವರ್ಷಗಳ ಬಳಿಕ ಮಗ ಸರಕಾರದ 'ಆಶ್ರಯ ಯೋಜನೆ'ಯ ಲಾಭ ಪಡೆದು ಒಂದು ಪಕ್ಕಾ ಮನೆಯನ್ನು ಕಟ್ಟಿಸಿಕೊಂಡು ಕರೆದರೂ, ಹಿರಿಯ ತನ್ನ ಹುಲ್ಲಿನ ಮಾಡಿನ ಗುಡಿಸಲಲ್ಲೇ ಉಳಿದ. ಆತ ಬಿಸಿಲು ಗಾಳಿ ಮಳೆಗೆ ಬೆದರುವವನಾಗಿರಲಿಲ್ಲ.
ತೀರಾ ವಯಸ್ಸಾದ ಮೇಲೆ ಹಿರಿಯ ಒಂದು ಒಪ್ಪತ್ತು ಮಾತ್ರ ಕೆಲಸಕ್ಕೆ ಹೋಗುತ್ತಿದ್ದ. ಕೆಲಸದ ಪ್ರತಿಫಲಕ್ಕೆ ದೊರೆತ ಅಕ್ಕಿಯನ್ನು ಸ್ವತಃ ಬೇಯಿಸಿಕೊಂಡು, ಅವನ ಹಿತ್ತಲಿನಲ್ಲಿ ಬೆಳೆದ ತರಕಾರಿ ಅಥವಾ ಕೆರೆಯಲ್ಲಿ ಹಿಡಿದ ಮೀನಿನಿಂದಲೋ ಒಂದಿಷ್ಟು ಮೇಲೋಗರವನ್ನು ಮಾಡಿಕೊಂಡು ಹೊಟ್ಟೆ ತಣ್ಣಗಾಗಿಸಿಕೊಳ್ಳುತ್ತಿದ್ದ. ಕೆಲವೊಮ್ಮೆ ಬರೀ ಗಂಜಿ, ಉಪ್ಪಿನಕಾಯಿ. ಮತ್ತೆ ಹೆಚ್ಚಿನದನ್ನು ಬಯಸಿದವನಲ್ಲ. ಯಾವ ದುಶ್ಚಟಗಳನ್ನೂ ಬೆಳೆಸಿಕೊಂಡವನಲ್ಲ. ಸಂತನ ಬದುಕು ಬಾಳಿದವನು. ಒಮ್ಮೆ ಅವನನ್ನು - ನಿನಗೆ ಮಹಾತ್ಮಾ ಗಾಂಧಿ ಗೊತ್ತೆ? - ಎಂದು ಕೇಳಿದ್ದೆ ಅವನು ಅದಕ್ಕೆ ಅಂದಿದ್ದ - ಅವರು ದೇವ್ರಂತವ್ರು!
ನಾನು ಓದಿನ ಮೇಲೆ, ಆಮೇಲೆ ಕೆಲಸದ ಸಲುವಾಗಿ ಊರು ಬಿಟ್ಟ ಮೇಲೆ ಹಿರಿಯನ ಭೆಟ್ಟಿ ಅಪರೂಪವಾಗಿತ್ತು. ನನಗೆ ಅನ್ನಿಸುತ್ತಿತ್ತು - ನಾನು ಹಿರಿಯನಿಂದ ಕಲಿತ ಬದುಕಿನ ಪಾಠಗಳು ಯಾವ ಪ್ರೊಫೆಸ್ಸರ್ ಗಳಿಂದ ಕಲಿತದ್ದಕ್ಕಿಂತಕಿಂತಲೂ ಕಡಿಮೆಯದ್ದಲ್ಲ ಎಂದು.ಹಿರಿಯನಿಂದಾಗಿ ನಾನು ಈಜು ಬಾರದ ಪಂಡಿತನಾಗುವುದು ತಪ್ಪಿತ್ತು.
ಒಮ್ಮೆ ವಿದೇಶದಿಂದ ಬರುವಾಗ ಒಂದು ಪಾಕೇಟು ರೇಡಿಯೋ ತಂದು ಕೊಟ್ಟಿದ್ದೆ ಹಿರಿಯನಿಗೆ. ಅದರಲ್ಲಿ ಬರುತ್ತಿದ್ದ 'ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು...' ಹಾಡು ಕೇಳಿ ಖುಷಿಪಟ್ಟಿದ್ದ. ಕೆಲವು ವರ್ಷಗಳ ಹಿಂದೆ ನಾನು ಕ್ಯಾಲಿಫೋರ್ನಿಯಾಗೆ ಹೋಗಿದ್ದಾಗ ಹಿರಿಯ ತೀರಿಕೊಂಡ ಸುದ್ದಿ ಬಂತು. ರಾತ್ರಿ ಅಡುಗೆ ಮಾಡಿ ಉಂಡು ಮಲಗಿದವನು ಬೆಳಿಗ್ಗೆ ಏಳಲಿಲ್ಲವಂತೆ, ಸುಖದ ಸಾವು ಎಂದರು. ಯಾರ ಚಾಕರಿಯ ಹಂಗಿಗೂ ಬೀಳದೆ ನಿರುಮ್ಮಳನಾಗಿ ಹೋದನಲ್ಲ, ಎಷ್ಟು ಪುಣ್ಯವಂತ' - ಎಂದರು.
ಅದಾಗಿ ಕೆಲವು ತಿಂಗಳ ಬಳಿಕ ನಾನು ಊರಿಗೆ ಹೋದಾಗ ಹಿರಿಯನ ಗುಡಿಸಲ ಬಳಿ ಹೋದೆ. ಚಿಗುರು ಮೀಸೆಯ ಹುಡುಗ - ಹಿರಿಯನ ಮೊಮ್ಮಗ - ಪಾಕೇಟು ರೇಡಿಯೋದಿಂದ ಹಾಡು ಕೇಳುತ್ತಿದ್ದ. ಆ ಹಾಡು ಸ್ವಲ್ಪ ಹೀಗೆ ಸಾಗುತಿತ್ತು- 'ತಲೆ ಬಾಚ್ಕಳ್ಳೋ, ಪೌಡರ್ ಹಾಕ್ಕಳ್ಳೋ, ಬರದಿದ್ರೂನು ಡುಯೆಟ್ಟು ಹಾಡ್ಕಳ್ಳೋ .." ಹಿರಿಯನ ಮಗನನ್ನು ಮಾತನಾಡಿಸಿದೆ. ಆತ ಬೆರಳಿಂದ ತೋರಿಸಿದ - ಓ ಅಲ್ಲಿಯೇ, ಹಿರಿಯನನ್ನು ಸುಟ್ಟಿದ್ದು. ಆತನ ಬೂದಿಯ ರಾಶಿಯ ಮೇಲೆಯೇ ತಾನು ಬಸಲೆ ಚಪ್ಪರ ಹಾಕಿದ್ದು - ಎಂದ. ಅದರ ಒಂದು ಕುಡಿಯನ್ನು ಅವನಿಂದ ಬೇಡಿ ತಂದೆ. ನಮ್ಮ ಹಿತ್ತಿಲಲ್ಲಿ ಅದನ್ನು ಊರಿದೆ. ಮತ್ತೆರಡು ಮೂರು ತಿಂಗಳಲ್ಲಿ ಚಪ್ಪರದ ತುಂಬ ಹಬ್ಬಿತ್ತು ಆ ಬಸಲೆಯ ಕುಡಿ, ಟಿಸಿಲೊಡೆದು ಕಡುಹಸಿರ ದಪ್ಪನೆಯ ಎಲೆಗಳಿಂದ ತುಂಬಿಕೊಂಡು ನಳನಳಿಸುತ್ತಿತ್ತು. ಅದರ ಎದುರು ಕುಳಿತು ಆಗಾಗ ಆ ಹಿರಿಯನ ಮ್ರದು- ನೆನಪ ಜಗಿಯುತ್ತಿರುತ್ತೇನೆ, ಅತನ ರಸಬಳ್ಳಿ ಜಗದ ತುಂಬೆಲ್ಲ ಹಬ್ಬಲಿ ಎಂದು ಹಾರೈಸುತ್ತಾ.
(A version of this was told to limited audience at Minnimane Kathaavali Edition 6)

______________________________________________________________________________________
Here is a Hiriya
(Author: Dinesh K Shetty T.)
Here I am going to tell you about Hiriya. Yes, his name is Hiriya (which means elder or large)
He was a big man in terms of built, elderly and a man of character. But he wasn't from upper caste. He belonged to Dalit caste. When I was small, I asked my mother whether she know his age. She said she doesn't know and said since her childhood he looked same! I thought he might have taken 'Sanjeevini' medicine(there is a belief in India which says the one who takes that medicine doesn't age!)
During my time, slavery had come down which was prevalent earlier. There came the land reform act due to which many involved in agricultural activities became landowners. But Dalits couldn't benefit from that since they weren't given land on lease for agriculture, they were mere workers. Those who leased the land could only become landowners due to that act.
Hiriya had built a hut on some government land and was living with his family. He used work as agricultural labor in a few places. He used to come to work at our house too. He was a bit fond of our house due to his respect for my grandfather.
When I was a small kid, there was still some untouchability practice in the village. Hence, he wasn't allowed inside our house. But he was permitted to cattle shed. Our oxen and buffalos were under his care and were in good health due to him. It was his duty to take them for plowing and to use them in a bullock cart. He was a fantastic worker better than anyone else in our village. he was an expert in handicrafts too. He used to bring canes from the forest and make different types of containers woven from the canes. it may be a container for storing rise, large oven shaped container to bring dry leaves, a container for carrying manure or small container for storing betel leaves. He knew the secret of manufacturing most of those items used in our villages.
He used to start plowing using our oxen early in the morning. The songs he used to sing while plowing, were our 'Suprabhata's. His songs were about our oxen 'kaaLa'(means Black one) and 'beLLa'(means white one) praising their good behaviors, their adventurism, etc. When he takes them for grazing or for bathing, he sometimes used to take me too. Sometimes he used to put me on their back to ride on them. I used to feel elated as if I am riding an elephant.
During these oxen bathing exercises in our village ponds, he taught me swimming. After bathing the oxen, he used to pluck lotus along with their long stem from the pond, make a garland and decorate the oxen with those. He finds joy in this work. I too used to enjoy participating in that. Hiriya was an expert swimmer too. Sometimes he used to jump to the large pond from a tall mount and disappear in the water causing my heartbeat to go up. He used to surface at the other end of the pond after a couple of minutes. When I ask him where he had gone for so long, he used to put few taproots in my hand from the pond & jokingly says he had gone to underworld 'Paataala' and king Bali gave this to me! I used to get flabbergasted!
When I see the speed with which Hiriya climbs a tree I suspected that he has some monkey genes! He could climb, coconut, areca-nut & palm trees with ease. I tried imitating him which had resulted in me getting my chest bruised! He was good at angling too. Within half an hour we used to see him emerge from pond side holding a leaf stem on which four five fishes will be hanging from! When we go near the pond making noise when he sits angling, he used to say 'Shhh!' don't make noise. When they hear the noise, fish won't bite the hook!
In the mornings, by the time we finish breakfast, Hiriya would have already plowed half an acre land twice! He is quite fast in plowing work. due to his influence oxen walk fast. Though he holds a stick, he never beats them. Looks like the oxen are attracted to his stick like the way the cows were attracted to the flute of Lord Krishna! I learned the lessons of plowing from Hiriya. Initially, I used to find it difficult to handle the plow. Sometimes the plow used to touch the legs of oxen hurting them. once the oxen got angry with me & started running with the plow and jumped the boundary of the field. I couldn't control them & the plow & I was about to fall off. Just then Hiriya came running & controlled the oxen & rescued me too. Gradually I learned the trick of plowing & controlling the oxen. But still, by the time in which Hiriya plows a field twice, I could finish plowing once only.
Hiriya knew the secrets of agricultural work. He knew how many times one needs to plow the field, how much manure need to put, when to seed, when to replant, how dense one need to plant, how much water needs to be there in the field, etc. One need to take his advice on these. When bumper yield comes on the field he had worked, people used to say he has a lucky hand!
Once a month Hiriya used to visit the weekly market of Kundapura in our bullock cart carrying the grains & vegetables grown in the field. After selling those he used to buy things like jaggery, pepper, tea powder, utensils, etc. and bring them back in the cart. People in our villages used to start in the bullock cart in the night itself so that they can reach the Kundapura market early in the morning. They lit a lantern hanging them on the cart to enlighten the road. When they travel making a long beeline on the road in the moonlit night, it's a beautiful sight to watch. The combined music from the cartwheels, the bells hanging on oxen and the ox-shoes - evokes a dense feeling in our mind and takes us to a dream world. The memory of which often makes feel out of the world!
I don't remember seeing Hiriya's wife. Before I gained the age of remembering things, she had passed away it seems. She had passed away due to some illness. She has left a son which has proved her existence. Though she had delivered many kids only one survived. Hiriya used to say sounding detachedness - 'Lord Shiva gave and snatched away too!' After the death of his wife, Hiriya was cooking himself and brought up his son alone.
When his son became adult, Hiriya searched a bride for him, got him married, and built another hut for them and built a separate stove for his wife there. He didn't want to be indebted to his daughter-in-law for feeding him. His foresight was that one day she may start developing contempt on him if she has to cook for him too. He didn’t want to depend on anyone. a self-sufficient man, a disciplined guy too. After a few years, Hiriya's son got a proper house with bricks and cement built with the help of 'Ashraya' scheme of government. Though he called Hiriya to stay with him, Hiriya refused to join him and stayed in his old hut. He was not the one who used to be scared of the scorching sun, or rain or the blowing wind!
When he grew too old, Hiriya used to work only half a day. He brings home the rice given as the earnings for his work, cooks 'Ganji'(porridge), makes some gravy out of the vegetables from his yard or the fish he hooked and fills his stomach. Sometimes only the 'Ganji' and pickle will do. He doesn't aspire for anything more. He never developed any bad habits. Lived like a saint. Once, I asked him whether he knows about 'Mahatma Gandhi'? He said - he is a godlike person!
Due to study and later for work I had left my village. So the occasions of meeting Hiriya have become quite rare. I often felt that the life lessons I learned from Hiriya are nothing less than the ones I learned from the professors of my formal education. It's because of Hiriya, I didn't turn out as a scholar who can't swim.
Once while returning from a foreign trip I had brought a pocket radio for Hiriya. he has happy hearing the Kannada film song 'Baala bangaara neenu, Haneya singaara neenu …' (You are the gold of my life; you are the jewel of my crest ..) from it.
A few years back when I had gone to California on work, I heard the news that Hiriya passed away. It seems after cooking and had supper in the night he had slept & didn't wake up in the morning. It was a peaceful death they said. He never had to depend on anyone in his full life, a fortunate guy - they said. When I returned after a few months, I visited his hut. I saw Hiriya's grandson- a young boy with a budding mustache sitting nearby listening to the pocket radio. A song 'tale bachkollo, powder hakkollo, baradidroonu duet hadkollo' (Coomb your hair, put some talcum powder on your face, sing some duet song even if you don't know) was playing! I talked to Hiriya's son. He pointed his finger to the yard and said that's the place where Hiriya was cremated. On that ash mound I have grown the creeper 'Basale Soppu'(Malabar Spinach) he said. I requested a branch of it from him and brought and planted in my yard.
Within 3-4 months it has branched many times and fill up the mesh slab with its lush-green tender leaves looking so full of life! Sometimes I sit in front of it and ruminate the sweet tender memories of my interactions with Hiriya. I wish his fertile breed would grow all around the world.

The End.
Comments
Post a Comment