Those who can manage
ಪ್ರಜೆಯಂ ಪಾಲಿಸಬಲ್ಲೊಡೆ …
ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ
ಪಾಲನೆ, ನಿರ್ವಹಣೆ, ನಿಭಾಯಿಸುವುದು, ಆಡಳಿತ ಮಾಡು, ಮಾರ್ಗದರ್ಶನ ಮಾಡು ಇವೆಲ್ಲ ಇಂಗ್ಲಿಷ್ ನ 'manage' ಶಬ್ದಕ್ಕೆ ಬದಲಾಗಿ ಬಳಸಲ್ಪಡುವ ಪದಗಳು.
ಪಶುಪಾಲನೆಯು ನಮ್ಮ ನಾಗರಿಕತೆಯಲ್ಲಿ ಅನಾದಿಕಾಲದಿಂದ ಬಂದ ಉದ್ಯೋಗ. ಈ ಪಶುಪಾಲನೆಯ ಕೆಲಸ ಎಷ್ಟು ಕಷ್ಟ ಎಂದು ಅರಿವಾದದ್ದು ನನ್ನ ಬಾಲ್ಯದಲ್ಲೇ. ನಾನು ಸುಮಾರು ಐದಾರನೇ ತರಗತಿಯಲ್ಲಿದ್ದಾಗ ನನ್ನ ಅಜ್ಜಿಮನೆಗೆ ಹೋದಾಗ ಈ ಪಶುಪಾಲನೆಯ ಕೆಲಸಕ್ಕೆ ಹಚ್ಚಿದರು. ಒಂದು ಮುದಿ ದನವನ್ನು ಒಂದು ಹಸಿರುಹುಲ್ಲು ತುಂಬಿದ್ದ ಗದ್ದೆಗೆ ಕೊಂಡು ಹೋಗಿ ಮೇಯಿಸಿಕೊಂಡು ಬರಲು ಕಳಿಸಿದರು. ಅದು ಪಕ್ಕದಲ್ಲಿದ್ದ ಭತ್ತದ ಸಸಿ ನೆಟ್ಟಿದ್ದ ಗದ್ದೆಗೆ ಬಾಯಿ ಹಾಕದಂತೆ ನೋಡಿಕೊಳ್ಳಬೇಕಾಗಿತ್ತು. ನಾನು ದನದ ಮುಖಕ್ಕೆ ಎದುರಾಗಿ ನಿಂತುಕೊಂಡಾಗ ಆ ದನಕ್ಕೆ ಕಸಿವಿಸಿಯಾಗಿ ಒಂದೆರಡು ಕ್ಷಣ ಹುಲ್ಲು ತಿಂದು ಥಟ್ಟನೆ ಇನ್ನೊಂದು ಕಡೆ ತಪ್ಪಿಸಿಕೊಂಡು ಓಡುತ್ತಿತ್ತು. ಅದನ್ನು ಅಡ್ಡಗಟ್ಟಿ ಮತ್ತೆ ಎದುರು ನಿಂತರೆ ಮತ್ತೆ ಇನ್ನೊಂದು ಕಡೆ ಓಡುತ್ತಿತ್ತು. ನಾನು ಅದರ ಹಿಂದೆ ಓಡಿ ಓಡಿ ಸುಸ್ತಾದೆ. ಈ ದನವನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯವಿಲ್ಲ ಅನ್ನಿಸಿ ಅಜ್ಜಿಗೆ ದೂರುಕೊಟ್ಟೆ. ಅಜ್ಜಿ ಬಂದು ನನ್ನ ಪಶುಪಾಲನೆಯ ವೈಖರಿ ನೋಡಿ ನಕ್ಕು 'ಅಯ್ಯೋ ಮಗುವೆ! ನೀನು ಅಷ್ಟು ಹತ್ತಿರ ಆ ದನ ಉಸಿರಾಡಲೂ ಜಾಗಬಿಡದಂತೆ ನಿಂತರೆ ಅದು ಮೇಯುವುದಾದರೂ ಹೇಗೆ. ಅದಕ್ಕೆ ಸ್ವಲ್ಪ ಅಲೆದಾಡಿಕೊಂಡು ಮೇಯಲು ಸ್ವಾತಂತ್ರ್ಯ ಕೊಡು. ದೂರದಲ್ಲಿ ನಿಂತು ಅದು ಭತ್ತದ ಗದ್ದೆಗೆ ಹಾರದಂತೆ ನೋಡಿಕೋ' ಎಂದಳು. ಇದು ನಾನು ಅಜ್ಜಿಯಿಂದ ಪಾಲನೆಯ ಬಗ್ಗೆ ಕಲಿತ ಮೊದಲಪಾಠ!
ಶಿಶುಪಾಲನೆಯ ಕಷ್ಟದ ಬಗ್ಗೆ ತೆನಾಲಿರಾಮ ಕೃಷ್ಣದೇವರಾಯನಿಗೆ ಮನವರಿಕೆ ಮಾಡಿಕೊಟ್ಟ ಕತೆಯನ್ನು ಕೇಳಿದ್ದೀರಷ್ಟೆ? ಅರಸ ಕೃಷ್ಣದೇವರಾಯನಿಗೆ ಅತ್ಯಂತ ಕಷ್ಟದ ಕೆಲಸ ಯಾವುದೆಂದರೆ ಮಕ್ಕಳನ್ನು ಖುಷಿಪಡಿಸುವುದು ಎಂದು ತೆನಾಲಿರಾಮ ಹೇಳಿದಾಗ, ಅದನ್ನು ಒಪ್ಪದೆ, ಸಾಬೀತುಪಡಿಸಲು ಕೇಳುತ್ತಾನೆ. ಚಿಕ್ಕ ಮಗುವನ್ನು ತಂದು ಅರಸನೊಡನೆ ಸಂಭಾಳಿಸಲು ಹೇಳಿದಾಗ ಆ ಮಗು ಅರಸನೊಡನೆ ಒಂದು ಆನೆ ಬೇಕೆಂದು ಕೇಳುತ್ತದೆ. ಅರಸ ತರಿಸಿಕೊಟ್ಟಾಗ, ಅದನ್ನು ತನ್ನ ಕೈಯಲ್ಲಿರುವ ಬುಟ್ಟಿಯೊಳಗೆ ಕೂರಿಸಬೇಕೆಂದು ಅಳುತ್ತಾ ಹಠಹಿಡಿಯುತ್ತದೆ. ಅದನ್ನು ಸಮಾಧಾನಪಡಿಸಲು ಸಾಧ್ಯವಾಗದೆ ಅರಸ ಸೋಲೊಪ್ಪಿಕೊಳ್ಳಬೇಕಾಗುತ್ತದೆ.
ವಿದ್ಯಾರ್ಥಿಗಳನ್ನು ಸಂಭಾಳಿಸುವುದು (ಅರ್ಥಾತ್ ಶಿಷ್ಯಪಾಲನೆ) ಕೂಡ ಕಠಿಣವೇ! ಒಮ್ಮೆ ನಮ್ಮ ಮೇಷ್ಟ್ರೊಬ್ಬರು ಪಾಠ ಮಾಡುವಾಗ ಕೀಟಲೆ ಮಾಡುವ ಹುಡುಗನೊಬ್ಬನನ್ನು ನೋಡಿ ಬೇಸರಪಟ್ಟು "ಬ್ರಹ್ಮ ಬುದ್ದಿ ಹಂಚುತ್ತಿದ್ದಾಗ ಆ ಸಾಲಿನಲ್ಲಿ ನೀನು ಕೊನೆಯಲ್ಲಿ ನಿಂತಿದ್ದಿರಬೇಕು. ಅದಕ್ಕೆ ನಿನಗೆ ಬುದ್ದಿಕಡಿಮೆಯಾಗಿದೆ" ಅಂದರೆ ತಕ್ಷಣವೇ " ಹೌದು ಸಾರ್, ಆ ಸಾಲಿನ ಕೊನೆಯಲ್ಲಿ ನಿಮ್ಮ ಮುಂದೆಯೇ ನಿಂತಿದ್ದೆ" ಎಂದು ತಿರುಗೇಟು ಕೊಟ್ಟಿದ್ದ!
ದೊಡ್ಡವರನ್ನು ಸಂಭಾಳಿಸುವುದು ಕೂಡ ಸುಲಭವಲ್ಲ. ಮುದುಕರನ್ನು ಸಂಭಾಳಿಸುವುದು ಕಷ್ಟವೇ. ಹಿಂದಿನ ಕಾಲದಲ್ಲಿ ಮದುಕರನ್ನು ಮದುವೆಯಾಗಿ ಒದ್ದಾಡುತ್ತಿದ್ದ ಮಾನಿನಿಯರ ಬವಣೆಗಳ ಬಗ್ಗೆ ಮನಕರಗಿ ಪುರಂದರದಾಸರು 'ಮುಪ್ಪಿನ ಗಂಡನು ಬೇಡಕ್ಕ, ತಪ್ಪದೆ ಪರಿಪಾಠ ಪಡಲಾರೆನಕ್ಕ. ಗೋಣಿ ಹಾಸಲು ಬೇಕು ಬೆನ್ನ ಗುದ್ದಲುಬೇಕು, ಗೋಣು ಹಿಡಿದು ಮೇಲಕ್ಕೆತ್ತಲುಬೇಕು, ಶ್ರೀನಿಧಿ ಪುರಂದರ ವಿಟ್ಠಲನ ನೆನೆಯುತ್ತ ನಾನೊಂದು ಮೂಲೇಲಿ ಒರಗಬೇಕಕ್ಕ, ಮುಪ್ಪಿನ ಗಂಡನು ಬೇಡಕ್ಕ' ಎಂದು ಹಾಡಿದ್ದಾರೆ.
ಸಂಸ್ಥೆಗಳಲ್ಲಿ ಕಾರ್ಯನಿರ್ವಾಹಕ ಹುದ್ದೆಗಳಲ್ಲಿರುವವರು ಸಮರ್ಥರಾಗಿರಬೇಕು. ಇಲ್ಲದಿದ್ದರೆ ಸಂಸ್ಥೆ ಸರಿಯಾಗಿ ಮುನ್ನಡೆಯಲು ಕಷ್ಟವಾಗುತ್ತದೆ; ಅಲ್ಲಿ ಕೆಲಸಮಾಡುವವರ ಬದುಕಿನ ಮೇಲೆ ಕೆಟ್ಟ ಪರಿಣಾಮವುಂಟುಮಾಡುತ್ತದೆ. ಒಂದು ಕಾಲದಲ್ಲಿ ಬಹುತೇಕ ಸಂಸ್ಥೆಗಳಲ್ಲಿ ನುರಿತ ಅನುಭವಿ ಹಿರಿಯರನ್ನು ಮಾತ್ರ ಈ ನಿರ್ವಾಹಕ ಹುದ್ದೆಗಳಿಗೆ ನೇಮಿಸಲಾಗುತ್ತಿತ್ತು. ಆಧುನಿಕ ಕಾಲದಲ್ಲಿ ತರುಣರನ್ನು ಆ ಹುದ್ದೆಗಳಿಗೆ ನೇಮಿಸಲಾಗುತ್ತಿದೆ. ಈ ನಿರ್ವಾಹಕರುಗಳ ವೈಯಕ್ತಿಕ ಖಯಾಲಿಗಳು ಸಂಸ್ಥೆಯ ಆಡಳಿತದ ಮೇಲೂ ಪ್ರಭಾವ ಬೀರುವುದುಂಟು. ವಶೀಲಿಬಾಜಿ, ಲಂಚಕೋರತನ, ತಾರತಮ್ಯ ತೋರುವುದು, ಕಿರುಕುಳ ಕೊಡುವುದು ಇವುಗಳಿಂದ ಕಚೇರಿಗಳ ಪರಿಸರ ಕಲುಷಿತಕೊಳ್ಳುವುದುಂಟು. ಯಾವ ನೀತಿವಂತ ಯುವಕ-ಯುವತಿಯರೂ ಅಂತಹ ಕಡೆ ಕೆಲಸ ಮಾಡಲು ಬಯಸುವುದಿಲ್ಲ. ನಾನು ಮೊದಲು ಸರಕಾರಿ ಕೆಲಸಕ್ಕೆ ಸೇರಿದಾಗ ಆ ಕಚೇರಿಯಲ್ಲಿ ಅಂತಹ ಕೆಟ್ಟ ಪರಿಸ್ಥಿತಿ ಇಲ್ಲದಿದ್ದರೂ ಒಮ್ಮೆ ಒಂದು ಮುಜುಗರದ ಸನ್ನಿವೇಶ ಒದಗಿತ್ತು. ನನ್ನ ಹಿರಿಯ ಅಧಿಕಾರಿ(ಬಾಸ್)ಯೊಡನೆ ಒಮ್ಮೆ ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದೆ. ನನ್ನ ಬಾಸ್, ನಮ್ಮ ಸಂಸ್ಥೆಗೆ ಕೆಲವು ಉಪಕರಣಗಳನ್ನು ಆಮದು ಮಾಡಿ ಸರಬರಾಜು ಮಾಡುವ ಕಂಪನಿಯ ಮಾಲೀಕನೊಬ್ಬನ ಕಚೇರಿಗೆ ನನ್ನನ್ನೂ ಕರೆದೊಯ್ದಿದ್ದರು. ಆ ಮಾಲಿಕ ನನ್ನ ಬಾಸ್ ಮತ್ತು ನನಗೆ ಉಡುಗೊರೆಯಾಗಿ ಒಂದೊಂದು nonstick frying pan ನೀಡಿದ. ನಾನು ಕಸಿವಿಸಿಗೊಂಡು ನಿರಾಕರಿಸಿದೆ. ಆಗಲೇ ಅದನ್ನು ಸ್ವೀಕರಿಸಿದ್ದ ನನ್ನ ಬಾಸ್ ಗೆ ಮುಜುಗರವಾಯಿತು. ಅವರ ಮುಜುಗರ ಕಡಿಮೆ ಮಾಡಲೆಂದು 'ನಾನು ಬ್ರಹ್ಮಚಾರಿ, ಇದರಿಂದ ನನಗೆ ಉಪಯೋಗವಿಲ್ಲ, ನನಗೆ ದೂರದ ಪ್ರಯಾಣಕ್ಕೆ ಹೆಚ್ಚು ಲಗೇಜ್ ಕೊಂಡೊಯ್ಯಲೂ ಆಗದು' ಎಂದು ಸಮಜಾಯಿಸಿಕೊಟ್ಟೆ. ಆಗ ಒಂದು ಪೆನ್ನನ್ನಾದರೂ ಸ್ವೀಕರಿಸಬೇಕೆಂದು ಆತ ಒತ್ತಾಯಿಸಿದ ಇಂತಹ ಕತೆಗಳನ್ನು ದಾಖಲಿಸಲು ಪೆನ್ನು ಸಹಾಯವಾಗುವುದೆಂದು ಸ್ವೀಕರಿಸಿದೆ. ಇಂತಹ ಸನ್ನಿವೇಶಗಳು ದೊಡ್ಡವರ ಸಣ್ಣತನದ ಪರಿಚಯ ಮಾಡಿಕೊಡುತ್ತವೆ.
ಮುಂದೆ ಬಹುತೇಕ ಎಳೆಯರಿಂದಲೇ ತುಂಬಿರುವ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸಮಾಡುವಾಗ ನಮಗೆ ಸಿಗುತ್ತಿದ್ದುದು ಸರಿಸುಮಾರು ನಮ್ಮದೇ ವಯಸ್ಸಿನ ತರುಣ ಮ್ಯಾನೇಜರ್ ಗಳು! ಕೆಲವು ಮ್ಯಾನೇಜರ್-ಗಳು ತರುಣಿಯರ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿ ತೋರುವವರು. ಅದು ಉಳಿದ ತರುಣರಿಗೆ ಅಸಮಾಧಾನ ತರುತ್ತಿತ್ತು. ಒಮ್ಮೆ ನನ್ನೆದುರೇ ತರುಣಿಯೊಬ್ಬಳು ಮ್ಯಾನೇಜರ್-ಗೆ 'ನೀನೊಬ್ಬ ಮೊರೊನ್' ಎಂದರೆ ಆತ ಆಕೆಯೆದುರು ಹಲ್ಲುಕಿರಿಯುತ್ತ ನಿಂತಿದ್ದ! ನನಗೆ ಆಗ ಸ್ವಲ್ಪವೂ ಆತ್ಮಗೌರವವಿಲ್ಲದ ಇಂತಹವರೂ ಇರುವರೇ ಎಂದು ಕಸಿವಿಸಿಯಾಗಿತ್ತು! ಇನ್ನು ಕೆಲವು ಮ್ಯಾನೇಜರ್-ಗಳು ಶ್ರದ್ದೆಯಿಂದ ಕೆಲಸಮಾಡುವವರನ್ನು ಬಿಟ್ಟು ಮಾತಿನಮಂಟಪ ಕಟ್ಟುವವರಿಗೇ ಮಣೆ ಹಾಕುತ್ತಾರೆ.
ಆದರೆ ಕೆಲವು ಸಜ್ಜನ ಮ್ಯಾನೇಜರ್ ಗಳ ಸಹವಾಸದ ಅನುಭವವಾಗಿತ್ತು. ಓರ್ವ ಅಮೆರಿಕದಲ್ಲಿನ ಮ್ಯಾನೇಜರ್ ನಮ್ಮನ್ನೆಲ್ಲ ತನ್ನ ಮಕ್ಕಳಂತೆ ಆತ್ಮೀಯತೆಯಿಂದ ನಡೆಸಿಕೊಳ್ಳುತ್ತಿದ್ದ. ನಾವು ಅಲ್ಲಿಗೆ ಹೋದಾಗ ನಮ್ಮನ್ನು ತನ್ನ ಹಾಯಿದೋಣಿಯಲ್ಲಿ ಬಲುದೂರ ವಿಹಾರಕ್ಕೆ ಕೊಂಡೊಯ್ಯುತ್ತಿದ್ದ. ಗಾಲ್ಫ್ ಆಡಲೂ ಕೊಂಡೊಯ್ಯುತ್ತಿದ್ದ. ಕಚೇರಿಯ ಒಳಗೂ, ಹೊರಗೂ ಬೇಕಾದ ಸಹಾಯವನ್ನೆಲ್ಲ ಮಾಡುತ್ತಿದ್ದ. ಜಪಾನ್-ನ ಮ್ಯಾನೇಜರ್ ಒಬ್ಬ ನಮ್ಮನ್ನು ಆತ್ಮೀಯತೆಯಿಂದ ನಡೆಸಿಕೊಳ್ಳುತ್ತಿದ್ದ. ನಮ್ಮ ಬಗ್ಗೆ ವಿಶ್ವಾಸ ಬೆಳೆಸಿಕೊಂಡಿದ್ದ. ನಮ್ಮ ಕೆಲಸದ ಬಗ್ಗೆ ಮೆಚ್ಚುಗೆ ತೋರುತ್ತಿದ್ದ, ಸಲಹೆ ಕೇಳುತ್ತಿದ್ದ. ಜಪಾನ್-ಗೆ ಭೇಟಿ ನೀಡಿದಾಗ ಸತ್ಕರಿಸಿ ಸುಖದುಃಖ ವಿಚಾರಿಸಿಕೊಳ್ಳುತ್ತಿದ್ದ.
ಮುಂದೊಂದು ದಿನ ನನ್ನನ್ನು ಮ್ಯಾನೇಜರ್ ಮಾಡಿದಾಗ ನಾನು ನಮ್ಮ ತಂಡದಲ್ಲಿ ಶಿಸ್ತಿಗೇ ಪ್ರಾಧಾನ್ಯತೆ, ಕಠಿಣ ಶ್ರಮಜೀವಿಗಳಿಗೆ ಆದ್ಯತೆ ಎಂದೆಲ್ಲ ಸಂಕಲ್ಪ ಮಾಡಿಕೊಂಡೆ. ತಂಡದ ಪ್ರತಿಯೊಬ್ಬರ ಮೇಲೂ ಹದ್ದಿನಕಣ್ಣಿಟ್ಟು ಪ್ರತೀದಿನವೂ ಕಾರ್ಯಪ್ರಗತಿಯನ್ನು ಪರಿಶೀಲಿಸುತ್ತಿದ್ದೆ. ಕಾಲಹರಣ ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳತೊಡಗಿದೆ. ಇದರಿಂದ ತಂಡದ ಹಲವರಲ್ಲಿ ನನ್ನ ಬಗ್ಗೆ ಸ್ವಲ್ಪ ಭಯ ಮೂಡುವಂತಾಗಿತ್ತು ಎಂದು ನನಗೆ ತಿಳಿದದ್ದು -ಒಂದು ದಿನ ನಾನು ನನ್ನ ತಂಡದವಳೊಬ್ಬಳಿಗೆ ಫೋನ್ ಮಾಡಿ ಆಕೆಯ ಕಾರ್ಯಪ್ರಗತಿಯ ಬಗ್ಗೆ ಪರಿಶೀಲನೆಗೆ ನನ್ನ ಕ್ಯಾಬಿನ್-ಗೆ ಕರೆದಾಗ. ಆಕೆ ಫೋನ್ ಕೆಳಗಿಡುವ ಮೊದಲು ತನ್ನ ಸಹೋದ್ಯೋಗಿಯೊಡನೆ 'ಅಯ್ಯೋ, ಕಷ್ಟ, ಕಷ್ಟ! ಮ್ಯಾನೇಜರ್ ಕೆಲಸದ ಬಗ್ಗೆ ವಿಚಾರಿಸಲು ಕರೆಯುತ್ತಿದ್ದಾರೆ, ಎದೆಬಡಿತ ಹೆಚ್ಚಾಗುತ್ತಿದೆ!' ಎಂದುದು ನನಗೆ ಕೇಳಿಸಿದಾಗ. ಇಂತಹ ನನ್ನ ಬಗೆಗಿನ ಅಭಿಪ್ರಾಯಗಳು ಮುಂದೆ ನನ್ನ ಕುಟುಂಬದವರನ್ನೂ ತಲುಪಿತ್ತು. ಒಮ್ಮೆ ನನ್ನ ತಂಡದವಳೊಬ್ಬಳು ಕ್ಯಾಲಿಫೋರ್ನಿಯಾ ದಲ್ಲಿ ನನ್ನ ಸಹೋದರನನ್ನು ಭೇಟಿಯಾದಾಗ ಆತ 'ದಿನೇಶ ಗೊತ್ತೆ' ಎಂದು ಕೇಳಿದಾಗ ಆಕೆ ' ಅಬ್ಬಾ!, ಬಹಳ ಕಠಿಣ ಮನುಷ್ಯ' ಎಂದಿದ್ದಳಂತೆ!
ಮುಂದೊಂದು ದಿನ ನನ್ನ ಬಾಸ್ ನನಗೆ ಸಲಹೆಕೊಟ್ಟಿದ್ದರು- ನೀನು ನಿನ್ನ ತಂಡದವರು ಸುಖದುಃಖ ತೋಡಿಕೊಳ್ಳುವುದಕ್ಕೆ ನಿನ್ನ ಬಳಿ ಬರುವಂತಹ ಆತ್ಮೀಯತೆಯನ್ನು ಅವರಲ್ಲಿ ಹುಟ್ಟಿಸಬೇಕು ' ಎಂದು. ತಂಡದ ಮುಂದೆ ಒಂದೆರಡು ಕವನ ಕಟ್ಟಿ ವಾಚಿಸಿ ವಾತಾವರಣ ತಿಳಿಗೊಳಿಸಲು ಯತ್ನಿಸಿದ್ದೆ. ನನ್ನ ತಂಡ ಬಿಟ್ಟು ಹೋಗುವ ಸದಸ್ಯರಿಗೆ ವಿದಾಯಕೂಟಗಳನ್ನು ಏರ್ಪಡಿಸತೊಡಗಿದೆ. ಒಂದಿಷ್ಟು ಹೊಗಳಿ ಸ್ಮರಣಿಕೆ ಕೊಟ್ಟು ಕಳುಹಿಸತೊಡಗಿದೆ. ಇದರಿಂದ ಕಹಿತನ ಕಡಿಮೆಯಾಗಿ ಹಲವರು ಮುಂದೆಯೂ ಸಂಪರ್ಕ ಇರಿಸಿಕೊಂಡರು.
ನನ್ನ ತಂಡದಲ್ಲಿ ಒಬ್ಬ ವಿಶಿಷ್ಟ ಹುಡುಗ ಸೇರಿದ್ದ, ಹೆಸರು ಎಚ್ . ಹನುಮೇಶ. ಆತ ಸ್ವಲ್ಪ ಮಂದಬುದ್ಧಿಯವನು ಅಂದುಕೊಂಡಿದ್ದೆ. ಕೆಲಸವನ್ನು ಕಲಿಯಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದ. ಸ್ವಲ್ಪ ಅಮಾಯಕನ ಹಾಗೆ ಕಾಣುತ್ತಿದ್ದ. ಆತನ ಆಲೋಚನಾಲಹರಿಗಳು ನನಗೆ ವಿಚಿತ್ರವೆನಿಸುತ್ತಿತ್ತು. ಅದೇ ಸಮಯದಲ್ಲಿ ಇನ್ನೊಬ್ಬಳು ಹುಡುಗಿಯೂ ಸೇರಿದ್ದಳು. ಅವರಿಬ್ಬರ ಸೀಟ್ ಅಕ್ಕಪಕ್ಕದಲ್ಲಿತ್ತು. ಹಾಗಾಗಿ ಒಟ್ಟಿಗೆ ಮಾತನಾಡಿಕೊಳ್ಳುತ್ತ ಕೆಲಸ ಮಾಡುತ್ತಿದ್ದರು. ಆಕೆಯೂ ಕೆಲಸದಲ್ಲಿ ಸ್ವಲ್ಪ ನಿಧಾನವೇ. ಅವರಿಬ್ಬರ ನಡುವೆ ಸ್ವಲ್ಪ ಆತ್ಮೀಯತೆ ಬೆಳೆದಿತ್ತು ಅಂತ ಕಾಣುತ್ತದೆ. ಕೆಲಸಮಯದ ನಂತರ ಆ ಹುಡುಗಿಗೆ ಮದುವೆ ನಿಶ್ಚಯವಾಗಿ ನನ್ನ ತಂಡ ಬಿಟ್ಟು ಬೇರೆ ವಿಭಾಗಕ್ಕೆ ವರ್ಗ ಮಾಡಿಸಿಕೊಂಡು ಹೋದಳು. ಒಂದಾರು ತಿಂಗಳ ಬಳಿಕ ನೋಡುತ್ತೇನೆ ಆ ಹುಡುಗಿ ಹನುಮೇಶನ ಸೀಟ್ ಬಳಿ ಬಂದು ಆತನಿಗೆ ವಾಚಾಮಗೋಚರ ಬಯ್ಯುತ್ತಿದ್ದಳು. ಆತ ತೆಪ್ಪಗೆ ಮಾತನಾಡದೆ ಕೂತಿದ್ದ. ಒಂದಷ್ಟು ಹೊತ್ತು ಬಯ್ದು ಆಕೆ ಹೊರಟು ಹೋದಳು. ಬಳಿಕ ವಿಚಾ ರಿಸಲಾಗಿ ತಿಳಿಯಿತು, ಹನುಮೇಶ ಆಕೆಯ ಗಂಡನಿಗೆ ಒಂದು ಕಾಗದ ಬರೆದಿದ್ದನಂತೆ. ಅದರ ಪರಿಣಾಮವೇ ಆಕೆಯ ಮಂಗಳಾರತಿ ಕಾರ್ಯಕ್ರಮ. ಹನುಮೇಶನ ಆಕೆಯ ಬಗೆಗಿನ ಕಾಳಜಿ ಆಕೆಯ ಗಂಡನ ಬಗೆಗೆ ಗೂಢಚರ್ಯೆ ನಡೆಸುವಂತೆ ಮಾಡಿ ಅದು ಹೇಗೋ ಆಕೆಯ ಗಂಡ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೆಂಬ ಕಪೋಲಕಲ್ಪಿತ ಸುದ್ದಿ ಹನುಮೇಶನಿಗೆ ಸಿಕ್ಕಿ ಅವನು ಅದರಿಂದ ಚಡಪಡಿಸಿ, ಆಕೆಯ ಉದ್ದಾರಕ್ಕೆ ತಾನೇ ಸಮರ್ಥನು ಎಂದು ಭಾವಿಸಿಕೊಂಡು -ಆಕೆಯ ಗಂಡ ಚೆನ್ನಾಗಿ ಆಕೆಯನ್ನು ನೋಡಿಕೊಳ್ಳಲಾಗದಿದ್ದರೆ ತಾನು ಆಕೆಯನ್ನು ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ಆಕೆಯ ಗಂಡನಿಗೆ ಪತ್ರವನ್ನು ಬರೆದಿದ್ದನಂತೆ. ಅದರಿಂದ ಸಿಡಿಮಿಡಿಗೊಂಡ ಆಕೆ ಬಂದು - ತನ್ನ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸಿದರೆ ಪರಿಣಾಮ ನೆಟ್ಟಗಾಗಿರದೆಂದು -ಬೈದು ಹೋದಳಂತೆ. ಇದೇನೋ ಪೊಲೀಸ್ ಕಂಪ್ಲೇಂಟ್ ಎಂತೆಲ್ಲ ಹೋದರೆ ಹನುಮೇಶನ ಭವಿಷ್ಯ ಹಾಳಾಗುವುದಲ್ಲ ಎಂದು ನನಗೆ ಗಾಬರಿಯಾಗಿ ಆತನಿಗೆ ರಾವಣನಂತೆ ವರ್ತಿಸಬೇಡ ಎಂದು ಬುದ್ದಿ ಹೇಳಿದೆ. ಅದು ಆತನ ತಲೆಗೆ ಇಳಿದ ಹಾಗೆ ಕಾಣಲಿಲ್ಲ. ಆತನ ಕುಟುಂಬದವರು ಆತನ ಉದ್ಯೋಗದ ಸಂಪಾದನೆಯ ಮೇಲೆಯೇ ಅವಲಂಬಿತರು ಎಂದು ತಿಳಿದಿತ್ತು. ಮುಂದೆ ಹನುಮೇಶನ ಪತ್ರ ಚಳುವಳಿ ಮುಂದುವರಿದುದು ತಿಳಿದು ನಮಗೆ ರೋಸಿಹೋಯಿತು. ಎಲ್ಲಾದರೋ ಆಕೆಯ ಗಂಡ ತನ್ನ ಸಂಸಾರದಲ್ಲಿ ಈತ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಕೋಪಗೊಂಡು ಈತನ ಸೊಂಟ ಮುರಿದರೆ ಈತನನ್ನು ನಂಬಿಕೊಂಡವರ ಗತಿಯೇನು ಎನಿಸಿತು. ಅಂತೂ ಹನುಮೇಶ ದೊಡ್ಡ ತಲೆನೋವಾಗಿ ಮುಂದುವರಿದ. ಈ ಮಧ್ಯೆ ಒಮ್ಮೆ ಹನುಮೇಶನಿಗೆ ಜ್ವರ ಜೋರಾಗಿ ಆಸ್ಪತ್ರೆಗೆ ಸೇರಿಸುವಂತಾಯಿತು. ನಾನೂ ನಮ್ಮ ತಂಡದ ಹುಡುಗರು ಕೆಲವು ಹಗಲು ರಾತ್ರಿ ಆತನ ತಲೆಗೆ ತಣ್ಣೀರುಪಟ್ಟಿ ಕಟ್ಟುತ್ತಾ, ಆತನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳಬೇಕಾಯಿತು.
ಕೆಲವು ತಿಂಗಳ ಬಳಿಕ ಇನ್ನೊಂದು ಕಂಪನಿಯ ಮ್ಯಾನೇಜರ್- ಒಬ್ಬ ನನಗೆ ಫೋನ್ ಮಾಡಿ ನಿಮ್ಮಲ್ಲಿ ಹನುಮೇಶ ಎಂಬವನಿದ್ದಾನಂತಲ್ಲ, ಅವನು ನಮ್ಮಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾನೆ, ಅವನು ಹೇಗೆ? - ಎಂದು ಕೇಳಿದ. ನಾನು ಹೇಳಿದೆ - ಆತನ ಬಗ್ಗೆ ಹೆಚ್ಚು ಹೇಳುವುದಕ್ಕಾಗುವುದಿಲ್ಲ. ಒಳ್ಳೆ ಹುಡುಗ. ನಾವು ನಿಮ್ಮ ಕಂಪನಿಗೆ ಸಹಾಯ ಮಾಡಲಿಕ್ಕಿರುವವರಲ್ಲ -ಎಂದೆ. ಒಳಗೊಳಗೇ ಖುಷಿಯಾಗಿತ್ತು, ಅವರೆಲ್ಲಾದರೂ ಇವನನ್ನು ಸೇರಿಸಿಕೊಂಡರೆ ನಮ್ಮ ತಲೆನೋವು ಕಡಿಮೆಯಾಗುವುದಲ್ಲ ಎಂದು. ಹಾಗೇ ಆಯಿತು. ಅವನು ಆ ಕಂಪನಿಗೆ ಸೇರಿಕೊಂಡ. ನಾನು ನಿಟ್ಟುಸಿರು ಬಿಟ್ಟೆ. ನಾಣ್ಣುಡಿಯೊಂದಿದೆಯಲ್ಲ ಕೆಲವರು ಬರುವಾಗ ಖುಷಿ ತರುತ್ತಾರೆ. ಇನ್ನು ಕೆಲವರು ಹೋದಾಗ ಖುಷಿಯಾಗುತ್ತದೆ!
ಎರಡು ದಶಕಗಳ ಬಳಿಕ ಮೊನ್ನೆ ಎಂ. ಜಿ. ರೋಡಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಪಕ್ಕ ಬೆಂಜ್ ಕಾರೊಂದು ಸಿಗ್ನಲ್ ಬಳಿ ಬಂದು ನಿಂತಿತು. ಅದರೊಳಗಿಂದ ದನಿಯೊಂದು ಬಂತು. "Mr. ದಿನೇಶ್!" ತಿರುಗಿ ನೋಡಿದೆ. ಕೂಲಿಂಗ್ ಗ್ಲಾಸ್ ಹಿಂದಿನ ಮುಖ ಪರಿಚಯವಾಗಲಿಲ್ಲ. ಆತನೇ ಹೇಳಿದ - ನಾನು ಹನುಮೇಶ. ಈಗ ಕ್ಯಾಲಿಫೋರ್ನಿಯಾದ Triumph Technosoft ಕಂಪನಿಯ ಸಿಇಒ ಆಗಿದ್ದೇನೆ. ನಮ್ಮ ಕಂಪನಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಫೀಲ್ಡ್ ನಲ್ಲಿ ಕೆಲಸ ಮಾಡುತ್ತದೆ. ಬೆಂಗಳೂರಿಗೆ business ಮೀಟಿಂಗ್ ಗೆ ಬಂದಿದ್ದೆ. ನಿಮ್ಮನ್ನು ಬೆಟ್ಟಿಯಾಗಿದ್ದು ಖುಷಿಯಾಯಿತು. ಕ್ಯಾಲಿಫೋರ್ನಿಯಾಗೆ ಬಂದರೆ ಖಂಡಿತ ನನ್ನನು ಬೆಟ್ಟಿಯಾಗಿ - ಎಂದು ವಿಸಿಟಿಂಗ್ ಕಾರ್ಡ್ ಕೊಟ್ಟ. "ಸಂತೋಷ, ನಿನಗೆ ಶುಭವಾಗಲಿ, ಅಲ್ಲಿಗೆ ಬಂದರೆ ಖಂಡಿತ ಬೆಟ್ಟಿಯಾಗುತ್ತೇನೆ" ಎಂದು ಬೀಳ್ಕೊಟ್ಟೆ. ಇತ್ತೀಚಿಗೆ ಅಮೆರಿಕನ್ ಕಂಪನಿಗಳಿಗೆ ಭಾರತೀಯ ಮೂಲದ ಸಿಇಓ ಗಳ ಬಗ್ಗೆ ವ್ಯಾಮೋಹ ಜಾಸ್ತಿಯಾಗಿದೆಯೆಂದು ಕೇಳಿದ್ದೆ. ಪಕ್ಕದಲ್ಲಿದ್ದ ಗಾಂಧೀ ಪ್ರತಿಮೆಯ ಮುಖದ ಮೇಲಿದ್ದ ಮುಗುಳ್ನಗೆ ನನ್ನ ಮುಖಕ್ಕೂ ಹಬ್ಬಿತು.
(A version of this was told to limited audience at Minnimane Kathaavali Edition 12)
______________________________________________________________________________________
Those who can mange
(Author: Dinesh K Shetty T.)
Take care of, conduct, handle, govern, guide are the synonyms for the word 'manage'.
Taking care of domesticated animals, that is - Animal husbandry - is one of the oldest professions in our civilization. This profession has its own challenges. I became aware of it during my childhood itself. When I was in 5-6 standard, when I went to my grandmother's home, I was put into that job. I was told to rear an old cow. I was told to take the cow to a field filled with green grass and I was told to make sure that it should not barge into paddy fields.
I stood right in front of it while it was grazing the grass. The cow grazed for a couple of minutes & started running in another direction. I blocked it, but it started running in another direction. This continued for a while, and I got tired and felt that this cow is uncontrollable. I complained about it to my grandmother. She came & saw the way I was rearing the cow and exclaimed "Oh! My poor boy! If you stand so close to the cow, not even allowing it to breathe freely, how will it graze the grass? Give some freedom to the cow. You need to stand far and observe. Only when it tries to barge into a paddy field, do you need to interfere". That was the first lesson I was taught by my grandmother about managing the cows!
Taking care of kids is neither an easy job. You must have heard about the story in which Tenali Rama convinced Krishnadevaraya about it. Let me briefly explain it. Once, when Tenali Rama told Krishnadevaraya that looking after kids is the most difficult job. King Krishnadevaraya was not convinced. Tenali Rama brought a kid & asked the king to look after him. When the kid demanded that an elephant should be brought, he brought it. Then the kid asks him to put the elephant into the basket in his hand. King tried to convince the kid that it is not possible, but the kid started crying demanding the task to be done. King ultimately had to concede that taking care of kids is indeed a difficult job.
Handling pupils is also a difficult job. Once when my teacher was teaching in a classroom. One naughty student was irritating him. He scolded the boy saying that "When Brahma (the creator god) was distributing intelligence to the people you were standing last in the queue, hence you got so little". The boy retorted immediately "Yes sir, I was standing last in the queue but just before you"!
Taking care of grown ups is again a difficult job, especially the elders. Several decades back, young women were married off to old people. The saint 'Purandara Dasa' had written about it, feeling pity about the dire status of those women. His poem goes like this
"Oh, beloved Sisters, I can't be living with an aged husband, I cannot suffer constantly!
Routinely, I need to make bed for him, massage his back, need to lift him holding his neck and in the night, I need to sleep in a corner praying to God!"
Executives in a company should be abled persons. Else, the company may not progress well, it may have ill-affect the life of the employees working there. Once upon a time, only the experienced, well-equipped elders were nominated for executive jobs. In recent times, young people are being put into those jobs. Lobbying, bribing, discrimination, harassment - these things spoil the working atmosphere in organizations. No youngsters who believe in idealism want to be working in those environments. When I joined a government job, though it wasn't a bad environment, I encountered an embarrassing incident. Once I had to visit Bangalore with my boss on a business trip. We went to the owner's office of a company which imports and supplies some items to our organization. The owner gave a 'non-stick frying pan' to both me & my boss as a gift. I felt uncomfortable accepting it & hence refused it. My boss, who had already accepted it, felt embarrassed. To reduce his embarrassment, I told the owner "I am bachelor, it's of no use to me. And also that it is cumbersome carrying such a large item on a long trip back home”. Then the owner requested me to accept at least a pen from him. I accepted it thinking that I can use it to write about these kinds of episodes. These kinds of incidents gave me glimpses of the immoral nature of 'big' people.
Later, when I started working in IT companies, I could mostly see young managers, many of them about my age. Some managers used to give more attention to young ladies which used to make the young gentlemen unhappy. Once, when I was witnessing, a young lady was slamming the manager “You are a moron!", the manager was grinning shamelessly. I was feeling uncomfortable and was thinking what kind of manager he is who doesn't have any self-respect.
Some managers used to encourage only the people who keep bragging without doing any work and ignore those who talk less and work hard.
I also had encountered a few good managers. One such manager who was in America, used to treat us affectionately as if we were his children. When we visit him, he used to take us in his sailboat on a vacation trip, He also used to take us to play golf. He used to help us both inside and outside of the office. A manager in Japan also used to look after us well. He used to trust us, appreciate us, ask for advice, and take us to parties and enquire about the wellbeing of our family.
Later when I became Manager, I resolved that I would give importance to discipline in work and favor only hard work, etc. I started observing the work of team members closely, daily monitoring their work progress. I started taking them to task those who were simply passing their time without doing any constructive work.
These things affected creating fear among some of my team members. I got the whiff of it when one day I phoned a lady member of my team to my cabin to discuss the status of the work assigned to her. I could accidentally hear her telling her colleague "Trouble! Trouble! Manager is calling to enquire about the work progress! My heartbeat is raising" before putting the phone down.
Similar opinions of my colleagues about me reached my family members too! Once, by chance one of my team members met my brother in California. When he asked her whether she knew Dinesh, she exclaimed "Oh! A tough man"!
Later my boss advised me that "I should be creating an atmosphere in the team such that the team members can come and tell their difficulties both personal & official without hesitation". I started writing some poems about the team and recited among team members trying to diffuse the situation. I started arranging sendoff parties to those who are leaving my team, started sending them off with gifts and praising them. This helped in reducing bitterness and some of them kept contact with me!
One special young man joined my team named H. Hanumesh. I thought he was a slow learner. He used to take a long time to learn about the work assigned to him. He used to look innocent too. I found his way of thinking strange. Same time another young lady joined my team. Their seats were nearby. The lady was also a little slow in the work. Looks like slowly some intimacy developed between them. After several months, the young lady got engaged to someone and got transferred to a different department. After around six months, one day I saw the young lady come near Hanumesh and started scolding him. Hunumesh was listening to her quietly without uttering a word! After some time, she left. When I inquired, I came to know that Hanumesh had written a letter to the young lady's husband, hence she came to scold him. The concern Hanumesh had about the young lady made him do some secret investigation about her husband and he got some concocted news that the lady's husband is ill-treating her. That news made Hanumesh uncomfortable. He thought he should help her and also that he is the only one who can look after her
well. Hence, he wrote a letter to her husband saying that if he cannot look after her well, he should divorce her so that Hanumesh can marry her and look after her well! The lady had warned him not to interfere in her personal life. I thought if Hanumesh's actions result in a police complaint by that young lady or her family members, Hanumesh's future will be spoiled. Hence, I counselled him not to act like 'Raavana' and advised him to correct his behavior. I don't think he took my advice. I was worried that Hanumesh's family members who are dependent on his earnings may also suffer. When I learned that Hanumesh has continued his letter writing spree, I was frustrated. I was worried what if the lady's husband gets wild due to the interference of Hanumesh in his personal life and breaks his legs!
Hanumesh had become a major headache for me.
In between these worries, Hanumesh fell ill with a high fever. We admitted him to a hospital. We, me & my team members had to keep a watch on him putting cold strips on his forehead for several days.
After a few months, I got a call from a manager from another company, asking me for my recommendation about Hanumesh. He said Hanumesh has applied for a job in their company. I told him that it is not ethical to give details about him, though Hanumesh is a good person, and we cannot be assisting another company in their recruiting process, though I felt a sense of relief that if they take him, my headache will be reduced. Luckily, the same thing happened. They took him! Hanumesh joined that company & I heaved a sigh of relief. There is a saying 'Some people bring happiness wherever they go. Some bring happiness whenever they go!'
After almost two decades, recently, I was walking on MG Road. A Benz car came and stopped near the signal next to me. A voice came from inside the car - "Mr. Dinesh!", When I looked inside, I couldn't recognize the face behind the sunglasses. The person said "I am Hunumesh. Currently I am CEO of Triumph Technosoft company based in California. We work in the field of Artificial Intelligence. I came to Bengaluru for a Business meeting. Please meet me if you come to California" and gave me his visiting card. I told him "Happy to meet you, Hanumesh. Good luck. I will surely meet you when I visit California" and sent him off.
I have heard that recently, there is a craze among the American companies to appoint Indian origin CEOs. I could see that the smile on the face of the nearby Gandhi statue gradually spreading to my face.
The End.
Comments
Post a Comment