Lame Dreams

 ಹೆಳವನೋರ್ವನೂರ ಮುಂದೆ … 

ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ









ಡಾರ್ವಿನ್ ನ ವಿಕಾಸವಾದದಂತೆ ಸೃಷ್ಠಿಯ ಜೀವಿಗಳು ವಿಕಾಸಗೊಳ್ಳುತ್ತ ಬಂದಂತೆಮನುಷ್ಯಜೀವಿಯ ಅಂಗಾಂಗಗಳೂ ಬದಲಾಗುತ್ತ ಬಂದು ಎರಡು ಕಾಲುಗಳಲ್ಲಿ ನಡೆಯಬಲ್ಲವನಾಗಿ ಇನ್ನೆರಡು ಕಾಲುಗಳು ಕೈಗಳೆಂದು ಕರೆಯಲ್ಪಟ್ಟು ಬೇರೆ ಕಾರ್ಯಗಳಿಗೆ ಬಳಸಲಾರಂಭಿಸಲಾಯಿತು. ಇದರಿಂದ ಆದ ಮೊದಲ ಲಾಭವೆಂದರೆ ಹೊಟ್ಟೆತುಂಬಿಸಿಕೂಳ್ಳುವುದು ಸುಲಭವಾಗುತ್ತ ಬಂತು.  ಬೇಟೆ, ವ್ಯವಸಾಯ, ಪಾಲನೆ, ಪೋಷಣೆ ಹೀಗೆಲ್ಲ ಕಾರ್ಯಗಳಿಗೆ ಕೈಗಳನ್ನು ಸಮರ್ಥವಾಗಿ ಬಳಸುವುದನ್ನು ಕಲಿತ - ಮಾನವ ಸಮೂಹ, ಪ್ರಗತಿ ಹೊಂದುತ್ತ ಸಾಗುತ್ತ ಇಂದಿನ ಸ್ಥಿತಿಯವರೆಗೆ ತಲುಪಿದೆ. ಹುಟ್ಟುವ ಎಲ್ಲ ಮನುಷ್ಯರಲ್ಲೂ ಎಲ್ಲ ಅಂಗಾಂಗಗಳು ಪರಿಪೂರ್ಣವಾಗಿ ಬೆಳೆದು ಹುಟ್ಟುವುದಿಲ್ಲ. ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಸುಮಾರು ಶೇಕಡಾ ೧೫ರಷ್ಟು ಜನ ಒಂದಲ್ಲ ಒಂದು ಅಂಗನ್ಯೂನತೆಯಿಂದ ಬಳಲುತ್ತಿರುತ್ತಾರೆ. ನ್ಯೂನತೆಯಿಲ್ಲದವರು ಆ ಬಗ್ಗೆ ಯೋಚಿಸುವುದು ಕಡಿಮೆ. ಅವರ ಹತ್ತಿರದ ಒಡನಾಡಿಗಳು ಬಳಲುತ್ತಿದ್ದರೆ ಮಾತ್ರ ಆ ಬಗ್ಗೆ ಸ್ವಲ್ಪ ಗಮನ ಹರಿಸಬಹುದು. ಕೆಲವರು ತಮ್ಮ ಜೀವಿತದ ಮಧ್ಯದಲ್ಲಿ ನ್ಯೂನತೆಗೆ ಒಳಗಾಗುತ್ತಾರೆ. ಆಗ ಕೆಲವರಿಗಂತೂ ಆಕಾಶ ಕಳಚಿ ಬಿದ್ದಂತಾಗುತ್ತದೆ. ಜೀವನದ ದಿಕ್ಕೇ ಬದಲಾಗುತ್ತದೆ. ಬದುಕು ದುಸ್ತರವೆನಿಸುತ್ತದೆ.  
ಅಮೆರಿಕೆಯ ಜಾರ್ಜಿಯಾ ರಾಜ್ಯದ ಅಟ್ಲಾಂಟಾ ನಗರದ ಈಶಾನ್ಯ ದಿಕ್ಕಿನ ಹೊರಭಾಗದಲ್ಲಿದ್ದ ಗ್ವಿನೆಟ್ ಆಸ್ಪತ್ರೆಯಲ್ಲಿ ಮಲಗಿದ್ದ ನನಗೆ ಹಾಗೆ ಬದುಕು ದುಸ್ತರ ಅನ್ನಿಸುತ್ತಿತ್ತು. ಕಾರು ಅಪಘಾತದಲ್ಲಿ ನನ್ನೆರಡೂ ತೊಡೆಗಳನ್ನು ಮುರಿದುಕೊಂಡು ಆಸ್ಪತ್ರೆಯಲ್ಲಿ ಬಿದ್ದಿದ್ದೆ. ನಿಮಗೆ ದುರ್ಯೋಧನನ ನೆನಪಾಗಬಹುದು. ವಸ್ತ್ರಾಪಹರಣದ ನೆನಪಾಗಬಹುದು. ನಾನು ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಯಾವ ಮಾನಿನಿಯ ವಸ್ತ್ರಾಪಹರಣವನ್ನೂ ಮಾಡಿರಲಿಲ್ಲ. ಜೂಜನ್ನೂ ಆಡಿದವನಲ್ಲ. ಛಲವಂತನೂ ಅಲ್ಲ. ದುರ್ಯೋಧನನದ್ದಾದರೂ ಒಂದು ತೊಡೆ ಮುರಿದಿತ್ತು. ನನ್ನದೋ ಎರಡೂ ತೊಡೆಗಳು ಮುರಿದ್ದವು! ಅದಕ್ಕೆ ಕಾರಣ ಭೀಮನ ಗದಾಪ್ರಹಾರವಲ್ಲ, ಕೃಷ್ಣಗಾರುಡಿಯೂ ಅಲ್ಲ. ಅದಕ್ಕೆ ನಿಮಿತ್ತವಾದದ್ದು ಒಂದು ಮಾನಿನಿಯ ಕಾರಂತೆ. ಅಂತೆ ಎಂದು ಯಾಕೆ ಹೇಳುತ್ತಿದ್ದೇನೆ ಎಂದರೆ ಆ ಕಾರನ್ನು ನಾನು ನೋಡಿರಲಿಲ್ಲ. ನಾನು ನೋಡಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ. ಅಲ್ಲೊಂದು ಸಿಗ್ನಲ್ ಇರುವ ವೃತ್ತದಲ್ಲಿ ನಾನು ನನ್ನ ಕಾರನ್ನು ಎಡಕ್ಕೆ ತಿರುಗಿಸುತ್ತಿದ್ದೆ. ಎದುರಿನಿಂದ ಬರುತ್ತಿದ್ದ ಆ ಮಾನಿನಿಯ ಕಾರನ್ನು ನಾನು ಗಮನಿಸಿರಲಿಲ್ಲ. ವೇಗವಾಗಿ ಬಂದ ಆ ಕಾರು ನನ್ನ ಕಾರಿನ ಮುಂಭಾಗಕ್ಕೆ ರಪ್ಪನೆ ಗುದ್ದಿ ಮುಂದೆ ಹೋಯಿತಂತೆ.  ಆ ರಭಸಕ್ಕೆ ನನ್ನ ಸಣ್ಣ ಕಾರು ಅರ್ಧವೃತ್ತ ತಿರುಗಿ ನಿಂತಿತು. ಪುಣ್ಯಕ್ಕೆ ಸೀಟ್ ಬೆಲ್ಟ್ ಹಾಕಿದ್ದುದರಿಂದ ತಲೆ ಒಡೆಯಲಿಲ್ಲ. ನಾನು ನನ್ನ ಕಾರು ರಸ್ತೆಯ ಅಂಚಿಗೆ ಢಿಕ್ಕಿಯಾಯಿತೇ, ಹೇಗೆ? ಎಂದು ಯೋಚಿಸುತ್ತ ಸ್ಟಿಯರಿಂಗ್ ಹಿಡಿದುಕೊಂಡೇ ಗರಬಡಿದವನಂತೆ ಕೂತಿದ್ದೆ!  ಆಂಬ್ಯುಲೆನ್ಸನವನು ಬಂದು ಕಾರು ಬಾಗಿಲು ತೆಗೆದು 'ಅಯ್ಯೋ ಎರಡೂ ತೊಡೆಗಳು ಮುರಿದಿವೆ' ಎಂದಾಗಲೇ ನನಗೆ ತಿಳಿದದ್ದು! ಸ್ಟಿಯರಿಂಗ್ ಗೆ ತೊಡೆಗಳು ಬಡಿದು ಮುರಿದಿದ್ದವು. ಕಾಲುಗಳು ಮುಂಗಾಲುಗಂಟಿಗಿಂತ ಮುಂಚೆಯೇ ಕೆಳಗೆ ಬಾಗಿದ್ದವು. 'ಅಕಟಕಟಾ' ಎಂದುಕೊಳ್ಳುತ್ತಿರುವಂತೆಯೇ ಆಂಬುಲೆನ್ಸ್ ನವನು ನನ್ನನ್ನು ಎತ್ತಿ ಸ್ಟ್ರೆಚರ್ನಲ್ಲಿ ಮಲಗಿಸಿಕೊಂಡು ವ್ಯಾನಿಗೆ ತುಂಬಿಸಿಕೊಂಡು ನೋವುನಿವಾರಕ ಇಂಜೆಕ್ಷನ್ ಕೊಡುತ್ತಲೇ ಆಸ್ಪತ್ರೆಗೆ ತಂದು ಹಾಕಿದ.
ಇಷ್ಟು ವರ್ಷ ಮೂರು ದಶಕಗಳ ಕಾಲ ಗುಡ್ಡ ಬೆಟ್ಟ ಹತ್ತಿ ಇಳಿದು, ಕಾಡು-ಮೇಡು ಅಲೆದು, ಹಿಮಾಲಯವನ್ನೂ ಹತ್ತಿ ಇಳಿದು, ದೇಶ-ವಿದೇಶ ಸುತ್ತಿದವನು, ಈಗ ಅಚಾನಕ್ಕಾಗಿ ತೆವಳುವ ಹೆಳವನಾಗುವ ಸ್ಥಿತಿಗೆ ತಲುಪುವುದನ್ನು ಯಾರಿಗೆ ಅರಗಿಸಿಕೊಳ್ಳಲಾಗುವುದು ಹೇಳಿ?  ಆಸ್ಪತ್ರೆಯ ತುರ್ತುನಿಗಾಘಟಕದಲ್ಲಿ ಮಲಗಿರುವ ನನ್ನ ಹಳಹಳಿಕೆ ಬರೀ ಅರಣ್ಯರೋಧನವಷ್ಟೇ ಸರಿ. ನೋವುನಿವಾರಕಗಳ ಪ್ರಭಾವದಲ್ಲಿ ಪವಡಿಸಿರುವ ನನ್ನ ಅರ್ಧ ಮಂಪರಿನ ಸ್ಥಿತಿಯಲ್ಲಿ ಕಾಲದ ಓಟ ಹಳಿತಪ್ಪಿದಂತೆ ಭಾಸವಾಗುತ್ತಿತ್ತು.  
ಸಮುದ್ರಮಥನದಲ್ಲಿ ಏನೇನೋ ಹೊರಚಿಮ್ಮುವಂತೆ ಏನೇನೋ ನೆನಪುಗಳು, ಯೋಚನೆಗಳು ಹೊರಬರುತ್ತಿದ್ದವು ...
*ಗ್ವಿನೆಟ್ ಮಾಲ್ ಬಳಿಯಿರುವ ಬಯಲು ರಂಗಮಂದಿರದಲ್ಲಿ ನಡೆಯುತ್ತಿದ್ದ ಜಾಝ್ ಸಂಗೀತ ಸಂಜೆಯಲ್ಲಿ ಸಂಗೀತವನ್ನು ಆಸ್ವಾದಿಸುತ್ತ ಕುಳಿತಿದ್ದೆ.  ನನ್ನ ಪಕ್ಕದಲ್ಲಿ ಕ್ರಷ್ಣಸುಂದರಿಯೊಬ್ಬಳು ತನ್ಮಯಳಾಗಿ ಸಂಗೀತ ಕೇಳುತ್ತಿದ್ದಳು. ಸಂಗೀತ ಮುಗಿದಾಗ ಅವಳೇ ನನ್ನನ್ನು ಮಾತನಾಡಿಸಿದಳು. ನಾನು ಸಿಂಡರೆಲಾ, ಗ್ವಿನೆಟ್ ಆಸ್ಪತ್ರೆಯ ಬಳಿಯಿರುವ ಲಿಝರ್ಡ್ಏನಿಯಾ ಮೆಡಿಕಲ್ ರಿಸರ್ಚ್ ಸೆಂಟರ್ ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುವೆನೆಂದು ಪರಿಚಯಿಸಿಕೊಂಡಳು ಅವಳು ಅಂಗಾಂಗಗಳ ಪುನರುತ್ಪತ್ತಿಯ ಸಂಶೋಧನಾ ವಿಭಾಗದಲ್ಲಿ ಕೆಲಸಮಾಡುತ್ತಿರುವುದಾಗಿ ಹೇಳಿದ್ದಳು. ಅವಳು ಸುಮಾರು ನನ್ನದೇ ವಯಸ್ಸಿನವಳು. ಒಂದೇ ವಯಸ್ಸಿನವರಲ್ಲಿ ಆಪ್ತತೆ ಹೆಚ್ಚುವುದು ಸಹಜವಲ್ಲವೇ.  ಅವಳ ಸಂಶೋಧನಾ ವಿಷಯಗಳ ಕುರಿತು ಒಂದಿಷ್ಟು ಹರಟೆ ಹೊಡೆದು ಅವಳ ಸಂಪರ್ಕ ವಿವರ ತಿಳಿದುಕೊಂಡು ಬೀಳ್ಕೊಟ್ಟಿದ್ದೆ. ಬಳಿಕ ಹಲವು ಬಾರಿ ಅವಳ ಭೇಟಿ, ನಮ್ಮ ಹರಟೆಗಳು ನಡೆದಿದ್ದವು. ಮೇಲಕ್ಕೆ ಬಿಟ್ಟ ಸಿಗರೇಟಿನ ಹೊಗೆಯ ಸುರುಳಿಯೊಡನೆ ಆಟವಾಡುತ್ತ ಸಿಂಡರೆಲಾ ಅವಳ ಸಂಶೋಧನಾ ಕ್ಷೇತ್ರದಲ್ಲಿ ನಡೆಯುತ್ತಿರುವ ಹಲವು ಮುನ್ನಡೆಗಳ ಕುರಿತು, ಮನುಕುಲಕ್ಕೆ ಅದರಿಂದಾಗುವ ಅಸಂಖ್ಯ ಲಾಭಗಳ ಕುರಿತು ಅಪಾರ ಭರವಸೆಯ ಮಾತುಗಳನ್ನಾಡುತ್ತಿದ್ದಳು. ನೀನು 'ಜೀಮೂತವಾಹನೆ ' ಎಂದೆ. ಹಾಗೇಕೆನ್ನುತ್ತೀಯಾ ಎಂದಳು. ಅಂದರೆ ನೀನು ನೆಲದಲ್ಲಿ ನಡೆಯುವವಳಲ್ಲ. ಮೋಡಗಳ ಮೇಲೆ ಸವಾರಿ ಮಾಡುವವಳು, ಕನಸುಗಾತಿ ಎಂದೆ.   ಅವಳ ಉತ್ಸಾಹ ಲವಲವಿಕೆ ನನಗೆ ಅಚ್ಚರಿಯುಂಟು ಮಾಡುತ್ತಿತ್ತು. 
*ಟಿವಿ ಯಲ್ಲಿ ಅಂಗವಿಕಲ ಬಾಲಕರ ಕಸರತ್ತುಗಳ ಕುರಿತಾದ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿದ್ದುದನ್ನು ನೋಡಿದ್ದುದು ನೆನಪಾಯಿತು. ಹಲವು ಬಾಲಕರು ಮಲ್ಲಗಂಬವನ್ನೇರಿ ಹಲವಾರು ಕಸರತ್ತುಗಳನ್ನು ಪ್ರದರ್ಶಿಸುತ್ತಿದ್ದರು. ಕೆಲವು ಹುಡುಗರಿಗೆ ಕಾಲ್ಗಳಿರದಿದ್ದರೆ, ಕೆಲವರಿಗೆ ಕೈಯಿರಲಿಲ್ಲ. ಆದರೂ ಇರುವ ಅಂಗಾಂಗಗಳನ್ನೇ ಬಳಸಿ ನಾನಾ ವಿಧದ ಕಸರತ್ತುಗಳನ್ನು ಮೈನವಿರೇಳಿಸುವಂತೆ ಪ್ರದರ್ಶಿಸುತ್ತಿದ್ದರು. ಅವರ್ಯಾರ ಮುಖಗಳಲ್ಲೂ ವಿಷಾದದ ಛಾಯೆಯಾಗಲೀ ಹತಾಶೆಯಾಗಲೀ ಕಾಣಿಸುತ್ತಿರಲಿಲ್ಲ. ಅವರೆಲ್ಲ ಜೀವನೋತ್ಸಾಹ ಚಿಮ್ಮುವ ಬುಗ್ಗೆಗಳಾಗಿ ಕಾಣುತ್ತಿದ್ದರು. ಜಯಂತ ಕಾಯ್ಕಿಣಿಯವರ 'ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ’ ಎಂಬ ಹಾಡು ನೆನಪಾಗಿ ಗುನುಗುನಿಸತೊಡಗಿದೆ.
*ಕಣ್ಣೆದರು ಸಿಂಡರೆಲಾ   ನಿಂತಿದ್ದಳು.  ಸ್ಟ್ರೆಚರ್ ತಂದಿದ್ದಳು. ನನ್ನ ಮುಖವ ನೇವರಿಸಿ ನಿನ್ನ ಸ್ಥಿತಿ ತಿಳಿಯಿತು. ನಿನ್ನನ್ನು ನನ್ನ ರೆಸರ್ಚ್ ಸೆಂಟರ್ ಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದಳು.  ಸರಿ, ಎಂದೆ. ದಷ್ಟಪುಷ್ಟವಾಗಿದ್ದ ಆಕೆ ಒಮ್ಮೆಲೇ ನನ್ನನ್ನು ಎತ್ತಿ ಸ್ಟ್ರೆಚರ್ಗೆ ವರ್ಗಾಯಿಸಿ, ತಳ್ಳಿಕೊಂಡು ಹೋಗಿ ಅಲ್ಲಿ ಕೊಠಡಿಯೊಂದರಲ್ಲಿ ನನ್ನನ್ನು ಮಲಗಿಸಿ ನಿನ್ನನ್ನು ಜೀನ್ಸ್ ತಿದ್ದುವ 'CRISPR-CAS9 ' ಥೆರಪಿಗೆ ಒಳಪಡಿಸುತ್ತಿದ್ದೇವೆ. ನಮ್ಮಲ್ಲಿ ಹಲ್ಲಿಗಳಲ್ಲಿ ಬಾಲ ಮತ್ತೆ ಬೆಳೆಯುವಂತೆ ಮಾಡುವ ಜೀನ್ ಯಾವುದೆಂದು ಕಂಡುಹಿಡಿದು ಪ್ರತ್ಯೇಕಿಸಿದ್ದಾರೆ. ಅದನ್ನು ನಮ್ಮ ದೇಹದ ಅಂಗಗಳಿಗೆ ಸೇರಿಸಿ ಆ ಅಂಗಾಂಗಗಳು ಪುನಃ ಬೆಳೆಯುವಂತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಹೀಗಾಗಿ ನಿನ್ನ ಕಾಲುಗಳು ಮತ್ತೆ ಮೊದಲಿನಂತಾಗಲು ಸಾಧ್ಯ ಎಂದಳು. ನನಗೇನೋ ಇವಳು ಇಂದ್ರಜಾಲವನ್ನು ಮಾಡುವವಳ ಹಾಗೆ ಕಂಡಳು. ಈ ಜೀನ್ಸ್ ತಿದ್ದುವ ಕೆಲಸ ಹೇಗೆ ಮಾಡುತ್ತೀರಿ ಎಂದು ಕೇಳಿದರೆ CRISPR ಎನ್ನುವುದು ಕೆಲವು ಬ್ಯಾಕ್ಟೀರಿಯಾ ಗಳಲ್ಲಿ ಸಿಗುವ ಡಿಎನ್ಎ ಸರಪಳಿ ತುಂಡುಗಳು. CAS9 ಎನ್ನುವುದು CRISPER ಸರಪಳಿ ತುಂಡುಗಳನ್ನು ಕತ್ತರಿಸಿ ಪುನರ್ಜೋಡಿಸಬಲ್ಲ ಸಾಮರ್ಥ್ಯವಿರುವ ಕಿಣ್ವ (enzyme). ಈ ತಂತ್ರಜ್ಞಾನದ ಮೂಲಕ ಡಿಎನ್ಎ ಸರಪಳಿಯ ತುಂಡುಗಳನ್ನು ನಮಗೆ ಬೇಕಾದಂತೆ ಪುನರ್ಜೋಡಿಸಿಕೊಳ್ಳಬಹುದು. ಡಿಎನ್ಎ ಸರಪಳಿಯ ತುಂಡುಗಳನ್ನು ಬದಲಾಯಿಸಿ ಮತ್ತೆ ಜೋಡಿಸಿಕೊಂಡರೆ ಜೀನ್ ಬದಲಾಯಿಸಿದಂತೆ. ಹೀಗೆ ನಮ್ಮ ದೇಹದ ಜೀವಕೋಶಗಳ ಜೀನ್ಗಳನ್ನು ಬದಲಾಯಿಸಬಹುದು. ನಮ್ಮ ಅಂಗಾಂಗ ಬೆಳವಣಿಗೆ ಪ್ರಚೋದಿಸುವ ಜೀನ್ ಸೇರಿಸಿ ಅವು ಬೆಳೆಯುವಂತೆ ಮಾಡಬಹುದು - ಎಂದಳು.
 ಮತ್ತೆ ಅಲ್ಲೊಂದು ದೊಡ್ಡ ಪರದೆಯ ಕಂಪ್ಯೂಟರ್ ಮುಂದೆ ನನ್ನನ್ನೊಯ್ದು - ನೋಡು ಇಲ್ಲಿ ನಿನ್ನ ಕಾಲುಗಳ ಡಿಸೈನ್ ಮಾಡುತ್ತೇವೆ. ನಿನಗೆ ಬೇಕಾದ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಹಲವಾರು ಮಾದರಿಗಳಿವೆ. ಒಂದನ್ನು ಆಯ್ಕೆ ಮಾಡಿಕೋ, ಕಾನೂನಿನ ತೊಡಕಿನಿಂದ ಉದ್ದ ಬದಲಿಸಲು ಸಾಧ್ಯವಿಲ್ಲ, ಅಕಾರ ಮಾತ್ರ ಬದಲಿಸಬಹುದು ಎಂದಳು. ನನ್ನ 'ದೊಡ್ಡ ಮನುಷ್ಯ'ನಾಗುವ ಆಶೆಗೆ ತಣ್ಣೀರೆರೆಚಿದಳು!  ಇದನ್ನು ಹೇಗೆ ಮಾಡುತ್ತೀರಿ ಎಂದು ಕೇಳಿದರೆ, ನೀನು ಸೂಚಿಸಿದ ಆಕಾರವನ್ನು ಕಂಪ್ಯೂಟರ್ ಒಂದು ತ್ರೀಡಿ ಪ್ರಿಂಟರ್ಗೆ ಕಳಿಸುತ್ತದೆ. ಅದು ಆ ಆಕಾರದ ಅಚ್ಚನ್ನು ತಯಾರು ಮಾಡುತ್ತದೆ. ಅದನ್ನು ಅಳವಡಿಸಿದರೆ ನಿನ್ನ ಕಾಲುಗಳು ಬೆಳೆಯುವಾಗ ಆ ಆಕಾರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತ ಬೆಳೆಯುತ್ತವೆ - ಎಂದಳು. ನನಗೆ ತುಂಬಾ ಖುಷಿಯಾಯಿತು. ಮೊದಲಿಗಿಂತ ಸ್ವಲ್ಪ ದಪ್ಪನಾದ ಆಕಾರವನ್ನೇ ಆಯ್ಕೆ ಮಾಡಿದೆ. ಮನೆಗೆ ಹೋದಮೇಲೆ ಒಂದು ಸುರುಳಿಯಾಕಾರದ ಅಚ್ಚನ್ನು ತಯಾರಿಸಿ ಹಲ್ಲಿಯ ಬಾಲಕ್ಕೆ ಕಟ್ಟಲು ಸಂಚು ಮಾಡಬೇಕೆಂದುಕೊಂಡೆ.
  ಎಷ್ಟು ಸಮಯ ಬೇಕಾಗುತ್ತದೆ ಈ ಥೆರಪಿ ಮುಗಿಯಲು ಎಂದು ಕೇಳಿದಾಗ ಒಂಭತ್ತು ತಿಂಗಳು ಎಂದಳು. ಇದು ಗರ್ಭಾಶಯದೊಳಗಿನ ಸೃಷ್ಟಿಯಂತಾಯಿತಲ್ಲ ಎಂದುಕೊಂಡೆ. ಸರಿ, ‘ದೀಪವು ನಿನ್ನದೇ, ಗಾಳಿಯೂ ನಿನ್ನದೇ' ಥೆರಪಿ ಆರಂಭಿಸಿ ಎಂದೆ.  ಥೆರಪಿ ಆರಂಭವಾಯಿತು. 
ಈ ಒಂಭತ್ತು ತಿಂಗಳು ಕಳೆಯುವುದು ಹೇಗೆ? ಎಂದರೆ ಸಿಂಡರೆಲಾ – ‘ಜಗತ್ತಿನ ತಾಯಂದಿರೆಲ್ಲ ಕಾಯುತ್ತಾರಲ್ಲ, ನಿನಗೇನು ಧಾಡಿ’ ಎಂದಳು. ನಾನು -ಬೆಳಕಿನ ವೇಗಕ್ಕೆ ಸಮೀಪದಲ್ಲಿ ಹೋಗಬಲ್ಲ ಟೈಮ್ ಮಷೀನ್ ಒಂದರಲ್ಲಿ ಬಾಹ್ಯಾಕಾಶ ಸುತ್ತಿಬರಲೇ? ಎಂದೆ. ಆ ಸಾಹಸಕ್ಕೆ ಇಳಿಯುವುದು ತರವಲ್ಲ, ನೀನು ಒಂದು ವೇಳೆ ಹಿಂದಣ ಶತಮಾನಕ್ಕೆ ತಲುಪಿದರೆ ಏನು ಮಾಡುತ್ತೀಯ ಎಂದಳು. ಹೌದಲ್ಲ ಎಂದು ಬೆಚ್ಚಿ ಬಿದ್ದೆ!
ಮಂಪರಿನಲ್ಲಿ ಕಣ್ಣು ತೆರೆದರೆ ಹತ್ತಿರದಲ್ಲಿ ನಿಂತಿದ್ದ ನರ್ಸ್ ಇನ್ನೊಬ್ಬರೊಡನೆ ಮೆಲುದಲಿಯಲ್ಲಿ ಹೇಳುತ್ತಿದ್ದುದು ಕೇಳಿಸಿತು - 'ಅಯ್ಯೋ ಪಾಪ! ಏನೋ ತನ್ನಷ್ಟಕ್ಕೆ ಅಸಂಬದ್ಧ ಬಡಬಡಿಸುತ್ತಿರುತ್ತಾನೆ, ಒಮ್ಮೊಮ್ಮೆ ನಗುತ್ತಿರುತ್ತಾನೆ. ನೋವಿನಲ್ಲೂ ನಗುವ ಪೇಶಂಟ್ ಬಹಳ ಅಪರೂಪ’!



(A version of this  was told to limited audience at Minnimane Kathaavali Edition 11)

______________________________________________________________________________________




Lame Dreams
(Author: Dinesh K Shetty T.)


As per Darwin's evolution theory, as organisms kept evolving, even  human organs kept evolving. Humans started to walk using two legs; the other two legs were called hands, use of which were changed for other purposes than walking. The primary advantage humans had due to this was that humans were able to feed their stomach more easily. Humans could use the hands effectively for hunting, agriculture, rearing  pets and looking after offspring. The progress humans could achieve was tremendous and today we are in the current age of Hi-tech. All humans are not born with well-formed organs. According to the World Health Organization, around 15% of the population suffer from some form of disability. Most  people who don't have any organ disabilities, are not concerned about the people with disability. If, perhaps, they have someone among their close relatives who has a disabilities, they may show some concern. Some people develop disabilities during their lifetime. Sometimes the severity of the disability may make them worry as if heaven has fallen on them, as if their life has changed direction towards the worst possible state and they may feel as if they are unfit to live.

While lying down on an intensive care unit bed of Gwinnett Hospital, which is situated on the north-east side of the outskirts of Atlanta City, in Georgia state of USA, I was feeling as if I would be unfit to live. I broke both of my thighs in a car accident.
This situation may remind you of the state of prince Duryodhana (the main antagonist in the epic Mahabharata) during the last stage of the battle. It may remind you of the incident of 'pulling off Draupadi's saree'(which made Bhima take a pledge to break Duryodhana's thigh). I swear, I have never pulled the saree of any lady, nor do I gamble, nor am I highly egoistic like Duryodhana. 
At least Duryodhana's one thigh was intact. I had both my thighs broken. The reason for that was not Bheema's 'Gada', nor Lord Krishna's magic, it was due to a car driven by a lady, I was told. Yes, I was told, since I hadn't seen the lady's car hitting my car. If I had seen the car, I wouldn't have been in this situation. At a traffic signal junction, I was turning my car to the left. I didn't see the car coming from the opposite side. The car came in at high speed and hit the front side of my car at a perpendicular angle. Due to the high impact, my car turned half a circle in a flash. Luckily, I had my seat belt on. Hence, my head was saved. I was sitting in a shocked state, holding the steering in my hands. I was wondering whether I had hit the curb. An ambulance attendant came, opened my car door, looked down and exclaimed 'Oh! Both thighs have been broken'! I looked down and saw that both legs had bent at the middle of their thighs well before the knee joints! The steering wheel had broken my thighs. Alas! I exclaimed. The ambulance attendant lifted me from the seat and pushed me to a stretcher and loaded it onto the Ambulance. He kept injecting me with sedating drugs and then took me to the hospital. 

For the past three decades I have often been roaming around forests, climbing mountains. I have even been to the Himalayas. I have travelled to many countries.  Now, suddenly, I have reached the state of a man who needs to crawl to get around! How can I digest the fact that I have become a crippled man now? My cries lying on the bed of an ICU were like a cry in the deep jungle!  Due to the influence of sedating drugs, I was losing my sense of time and space. I was in a half-conscious state. It is said in the story of 'Sumudra Mathana' that, during the churning of the sea, many things came out. Similarly, many thoughts and dreams started floating in my mind, making me feel I was reliving them. 

I was sitting in an open-air theatre near Gwinnett Mall enjoying listening to Jazz music. There was a Jazz Music Evening event organised there. There was a lady, who was a brown beauty, sitting next to me enjoying the music. When the event ended, she introduced herself to me, saying "I am Cinderella. I work as a research scientist at 'Lizardenia Medical Research Center' situated on Gwinnett Hospital premises". She also said that she works in the area of Organ Regeneration Research. She is the same age as me. It's natural that one develops more intimacy with people of a similar age. We continued chatting for a long time and she gave me her contact details. After that, I met her several times and discussed various topics with her.

While playing with swirling smoke clouds formed by the emissions from her cigarette, she used to talk with me positively about the recent developments happening in her research area and she was hopeful that our society will be immensely benefitting from those developments and said it's quite promising. I commented,'you are Jeemoothavaahane'. She asked - what does it mean? I said it means that you are a cloud-rider (Jeemootha -means cloud in Sanskrit), a dreamer. You don't seem to be walking on the ground. Her enthusiasm and bubbling nature were fascinating to me.

I was watching a program about handicapped children on television. They were climbing on a Mallakambha (wrestling pole) and exhibiting gymnastics. Few children didn't have legs, few didn't have arms. Even with the limitations, they were exhibiting extraordinary skills by hanging on a pole which made the audience stand on their toes. It was thrilling to watch them performing. There was no shade of sadness on their faces, nor any signs of dejected feelings. They were all exhibiting braveness, enthusiasm and were  full of life. I remembered the song by poet Jayanth Kaikini and started humming ' One who knows and understands the pain of others will succeed in life'.

Suddenly, Cinderella came & stood in front of me. I could see that she had brought a stretcher.
She gently spread her palm on my face and said I came to know about your sorry state, and I am shifting you to my research center. I said fine. Being quite well built, she lifted me and shifted to the stretcher and carried me to her research center and put me on a bed there and said "We will put you into a gene editing program called CRISPER-CAS9 therapy. In our laboratory, we have isolated the gene responsible for regrowth of lizard tails. We have developed technology to add that gene into the human body to regrow the body parts. Hence, it is possible to regrow your legs".  To me she looked like a wonderful magician!  I asked her how you perform this gene editing procedure? She explained to me that CRISPR is a piece of DNA strand typically found in some bacteria. CAS9 is an enzyme which can cut and rejoin the CRISPER DNA pieces. Using this technology, we can edit the DNA pieces as we like and that is like we are changing genes. Thus, we can edit the genes in our body cells. We can add the gene responsible for regrowth of the body parts to our body and make our body parts regrow.
Then she took me near to a big computer display and said - here we design the shapes of legs. You can choose a design of your choice here. There are many design model templates here. Due to legal constraints, we cannot change the length of your legs, we are allowed to change the shape, she said. She poured cold water on my wish to become a 'Big man'! I asked her how do you achieve the desired shape for my legs? She said the chosen design is fed to a 3D printer by the computer which in turn will print a mold of that shape. The mold will be fitted to your legs. When your legs start regrowing, they will fill the mold and take its shape. I was quite thrilled to learn about this. I selected a shape which was slightly thicker! I thought, after returning home, I would also try an experiment. I will make a mold of a spiral shape & tie it to a lizard's tail!
I asked Cinderella how long it would take for the therapy to conclude? She said - nine months! I thought it was like creation inside the womb!  Okay! I quoted from a poem 'The light is yours and the wind is yours too. Let the light not be diminished by the wind' and asked her to proceed with the therapy. They started the therapy.
When I told Cinderella that it's cumbersome to wait till nine months, she retorted - all the mothers in this world do wait for nine months patiently, what's your problem!
I said jokingly, I would catch a time machine and roam around in space for a while travelling at a speed close to the speed of light. She shot back and said -What would you do if you landed in the previous century? I was jolted.

When I slightly opened my eyes in my semi-conscious state, I could see the nurse standing next to my bed whispering to another person - "Poor fellow! He keeps muttering illegible words in his sleeping state. Sometimes he laughs. It's quite rare to find patients who can laugh even in pain!"




The End.

Comments

Popular posts from this blog

Sakura and Shakuntala

Here is a Hiriya

Bhootopakaara