A Gentleman Officer

ಕೆಚ್ಛೆದೆಯ ದಂಡನಾಯಕರು 
ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ

ಸೇನೆಯವರೊಡನೆ ಒಡನಾಟ ಜನಸಾಮಾನ್ಯರಿಗೆ  ಸ್ವಲ್ಪ ಕಷ್ಟ.  ಸೋಮಾರಿತನ, ಮನಸ್ಸಿಗೆ ಬಂದ ಹಾಗೆ ಕೆಲಸ ಮಾಡುವುದು, ಬೇಕೆನಿಸಿದಾಗ ರಜದ ಮೇಲೆ ಹೋಗುವುದು, ಅರ್ಧಂಬದ್ದ ಕೆಲಸ ಮಾಡಿ ಹಾಗೆ ಬಿಟ್ಟು ಇನ್ನೊಂದು ಕೆಲಸ ಎತ್ತಿಕೊಳ್ಳುವುದು - ಇಂತಹ ಅಭ್ಯಾಸವಿರುವವರಿಗೆ ಸೇನೆಯ ಅಧಿಕಾರಿಗಳೊಡನೆ ಕೆಲಸ ಮಾಡುವುದು ಕಷ್ಟ. ಎಲ್ಲೋ ಕೆಲವು ಅಧಿಕಾರಿಗಳು  ಇಂತವರನ್ನು ಸಹಿಸಿಕೊಳ್ಳುತ್ತಾರೆ. ಇನ್ನು ಕೆಲವರು ಇಂತಹವರನ್ನು ಓಡಿಸಿಯೇ  ಬಿಡುತ್ತಾರೆ. ಕೆಲವರು ಇಂತಹವರನ್ನು ಸುಧಾರಿಸಿ ಒಳ್ಳೇ  ಕೆಲಸಗಾರರನ್ನಾಗಿ ಪರಿವರ್ತಿಸುತ್ತಾರೆ. ಕೆಲವರು ಬೆದರಿಸಿ ಬದಲಾಯಿಸುತ್ತಾರೆ. ಅಪರೂಪಕ್ಕೆ ಇನ್ನು ಕೆಲವರ ವ್ಯಕ್ತಿತ್ವವನ್ನು ನೋಡಿಯೇ ಜನ ಬದಲಾಗುತ್ತಾರೆ.

ತಂತ್ರಜ್ಞನಾಗಿ ಸೇನೆಯ ಅಧಿಕಾರಿಗಳೊಂದಿಗೆ ಒಡನಾಡುವ ಅವಕಾಶ ನನಗೆ ದೊರಕಿತ್ತು. ಆಗ ಹಲವಾರು ಅಧಿಕಾರಿಗಳೊಡನೆ ಕೆಲಸ ಮಾಡಿದ್ದೆ.  ಅವರಲ್ಲೊಬ್ಬರ ಹೆಸರು ಕರ್ನಲ್ ಠಾಕೂರ್. ಮಧ್ಯವಯಸ್ಸಿನ ದಪ್ಪ ಮೀಸೆಯ ದೃಢಕಾಯದ ಸುಮಾರು ೫ ಮುಕ್ಕಾಲು ಅಡಿ ಎತ್ತರದ ಸ್ವಲ್ಪ ಒರಟು ಚರ್ಮದ  ಗೌರವರ್ಣದ ಮನುಷ್ಯ. ಅಮರೀಶಪುರಿಯಷ್ಟು ಅಲ್ಲದಿದ್ದರೂ  ಸ್ವಲ್ಪ ಗಡುಸಾಗಿಯೇ  ಗಂಭೀರವಾಗಿ ಕಾಣುವ ಮನುಷ್ಯ.  ಅವರು ನಗುವುದನ್ನು ಕಂಡವರು ಬಹಳ ಕಡಿಮೆ ಜನವಿರಬೇಕು. ನಕ್ಕರೂ ದಪ್ಪ ಮೀಸೆಯಿಂದ ಆದು ಹೊರಗೆ ಇಣುಕಿ ಕಾಣುತ್ತಿದ್ದುದು ಕಡಿಮೆ. 

ಸೇನೆಯವರು ಬಳಸುವ ಉಪಕರಣವೊಂದರಲ್ಲಿರುವ ವಿಶಿಷ್ಟ ಕಂಪ್ಯೂಟರ್ ನೋಡಿಕೊಳ್ಳುವ  ಜವಾಬ್ದಾರಿ ನನ್ನದಾಗಿತ್ತು.  ಮೊದಮೊದಲು ನನ್ನ ಪರಿಚಯವಾದ ಪ್ರಾರಂಭದಲ್ಲಿ  ಕರ್ನಲ್ ಠಾಕೂರ್ 'ಕೆಲಸ ಆಯಿತೇ, ಇಲ್ಲವೇ' ಎಂದಷ್ಟೇ ಕೇಳುತ್ತಿದ್ದರು.  ಬಳಿಕ ಹಲವು ಬಾರಿ ಆ ಉಪಕರಣಗಳ ಪರೀಕ್ಷಾರ್ಥವಾಗಿ ಹಲವು ಸ್ಥಳಗಳಿಗೆ ಹೋಗಬೇಕಾಗಿ ಬರುತ್ತಿತ್ತು ಮತ್ತು ಆ ಕೆಲಸಗಳ ಜವಾಬ್ದಾರಿ ಮತ್ತು ಮೇಲ್ವಿಚಾರಣೆ ಕರ್ನಲ್ ದಾಗಿರುತ್ತಿತ್ತು. ಒಮ್ಮೆ ಕಡಲ ತೀರದರಲ್ಲಿ, ಇನ್ನೊಮ್ಮೆ ಮರುಭೂಮಿಯಲ್ಲಿ, ಹೀಗೆ ಹಲವು ಕಡೆಗಳಲ್ಲಿ ಕ್ಯಾಂಪ್ ಮಾಡಿ ಇದ್ದು ಕಾರ್ಯಾಚರಣೆ ನಡೆಸಬೇಕಾಗಿ ಬರುತ್ತಿತ್ತು. ಹಲವು ಕಡೆ ಅವರು ಹೋಗುವ ಜೀಪಿನಲ್ಲಿ ನಮ್ಮನ್ನೂ ಕೂರಿಸಿಕೊಂಡು ಹೋಗುತ್ತಿದ್ದರು. ಕೆಲಸವನ್ನು ಶಿಸ್ತಿನಿಂದ ಯೋಜಿಸಿ ನಡೆಸುತ್ತಿದ್ದರು. ಟೀಮ್ ಸ್ಪಿರಿಟ್ ನಿಂದ ತಂಡ ಕೆಲಸ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರು. ಯುವಕರನ್ನು ಅದರಲ್ಲೂ ಸ್ವಲ್ಪ ಚುರುಕಾಗಿ ಕೆಲಸ ಮಾಡುವವರನ್ನು  ಕಂಡರೆ ಅವರಿಗೆ ಸ್ವಲ್ಪ  ಅಕ್ಕರೆ. ಆದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ.  ನಾನು ಸ್ವಲ್ಪ ಬಿಸಿಲು ಮಳೆಗೆ ಲೆಕ್ಕಿಸುವವನಲ್ಲ.  ಮಧ್ಯಾಹ್ನದ ಉರಿಬಿಸಿಲಿನಲ್ಲೂ ಉಪಕರಣಗಳ ಬಳಿ ಕುಳಿತು ಕೆಲಸಮಾಡುವುದನ್ನು ಕಂಡು ಅವರಿಗೆ ಮೆಚ್ಚಿಗೆಯಾಗುತ್ತಿತ್ತು.  ಹಾಗಾಗಿ ಅವರು ಮುಖ್ಯ ಕೆಲಸವಿದ್ದಾಗಲೆಲ್ಲ ನನ್ನನ್ನೂ ಕೊಂಡೊಯ್ಯುತ್ತಿದ್ದರು, ಅದು ನನ್ನ ಕಂಪ್ಯೂಟರ್ ಗೆ ಸಂಬಂಧ ಪಟ್ಟಿಲ್ಲದಿದ್ದರೂ.  ಕೆಲವೊಮ್ಮೆ ಬೇರೆ ಬೇರೆ ಉಪಕರಣಗಳನ್ನು ಅದು ಆನ್ ಆಗಿದೆಯೋ ಆಫ್ ಆಗಿದೆಯೋ ವೈರ್ ಗಳೇನಾದರೂ ಕಳಚಿ ಬಿದ್ದಿದೆಯೋ, ಸ್ವಲ್ಪ ಅಲ್ಲಾಡಿಸಿದರೆ ಸರಿಯಾಗುವುದೋ  ಎಂದೆಲ್ಲ ಪರೀಕ್ಷಿಸಿ ವರದಿ ಕೊಡುತ್ತಿದ್ದೆ. ಹಲವು ಬಾರಿ, ನಮ್ಮ ಕಾಮನ್ ಸೆನ್ಸ್ ಉಪಯೋಗಿಸಿಯೇ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು ಎನ್ನುದನ್ನು ಅಲ್ಲಿ ಕಂಡುಕೊಂಡಿದ್ದೆ. 
ಹಿರಿಯರಾದ, ತಂದೆ ಸಮಾನರಾಗಿ ಕಾಣುತ್ತಿದ್ದ  ಕರ್ನಲ್ ರನ್ನು ಗೌರವದಿಂದಲೇ ಕಾಣುತ್ತಿದ್ದೆ.  ಒಮ್ಮೊಮ್ಮೆ ಅನ್ನಿಸುತ್ತಿತ್ತು ಇವರು ನನ್ನನ್ನೇ ದುಡಿಸಿಕೊಳ್ಳುವರಲ್ಲ ಅಂತ. ಆಮೇಲೆ ಅನ್ನಿಸುತ್ತಿತ್ತು ಇದೇನು ಅವರ ಮನೆಯ ಕೆಲಸವಲ್ಲವಷ್ಟೆ?   ಈ ಕೆಲಸಕ್ಕೊಂದು ಗುರಿ ಇದೆ. ದೇಶಕ್ಕಾಗಿ ಎನ್ನುವ ಮಹತ್ತರವಾದ ಗುರಿ. ಅವರವರಿಂದಾಗುವ ಕಾರ್ಯ ಮಾಡುವುದರಿಂದ ಅವರವರ ಆತ್ಮತೃಪ್ತಿಯಾದರೂ ಅದು ಸಾರ್ಥಕವಲ್ಲವೇ ಅನ್ನಿಸುತ್ತಿತ್ತು.  ಹಲವು ಸಮಯ ಕರ್ನಲ್ ರೊಂದಿಗೆ ಕೆಲಸ ಮಾಡಿದರೂ ಅವರು ನನ್ನೊಡನೆ ಲಘುವಾಗಿ ಮಾತನಾಡುತ್ತಿರಲಿಲ್ಲ. ಮನಸ್ಸಿನಲ್ಲಿ ಪ್ರೀತಿಯಿದ್ದರೂ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ತಂಡದಲ್ಲಿ ಕೆಲವು ಮೈಗಳ್ಳರಿದ್ದರೂ ಕೆಲವರು ಬರೀ ಮಾತಿನಲ್ಲೇ ಅರಮನೆ ಕಟ್ಟುವವರಿದ್ದರೂ  ಕರ್ನಲ್ ಅವರನ್ನು ಸ್ವಲ್ಪ ಸಹಿಸಿಕೊಳ್ಳುತ್ತಿದ್ದರು. ಅವರು ಕೊಟ್ಟ ಕುದುರೆಯನೇರುವುದನ್ನು ಬಲ್ಲವರಾಗಿದ್ದರು. ಕೆಲವರಿಂದ ಸಣ್ಣಪುಟ್ಟ ಕೆಲಸಗಳನ್ನಾದರೂ ಮಾಡಿಸುತ್ತಿದ್ದರು. 
ಒಮ್ಮೆ ಒಂದು ಹೊಸದಾಗಿ ತಯಾರಿಸಿದ ಉಪಕರಣದ ಕಾರ್ಯಶೀಲತೆಯನ್ನು  ಪರೀಕ್ಷಿಸಲು  ಮೇಲಧಿಕಾರಿಯಾದ ಲೆಫ್ಟಿನೆಂಟ್ ಜನರಲ್ ಒಬ್ಬರು  ಬರುವ ಕಾರ್ಯಕ್ರಮವಿತ್ತು. ಆ ದಿನ ನಾವೆಲ್ಲ ತಯಾರಾಗಿ ಉಪಕರಣವನ್ನು ಸಿದ್ದಗೊಳಿಸಿ ನಿಂತಿದ್ದೆವು. ಇನ್ನೇನು ಒಂದೈದು ನಿಮಿಷದಲ್ಲಿ ಜನರಲ್ ಬರುವವರಿದ್ದರು.  ಆಗ ನಮ್ಮ ತಂಡದಲ್ಲಿದ್ದ ಮಾತಿನಲ್ಲಿ ಅರಮನೆ ಕಟ್ಟುವವನೊಬ್ಬ  ಉಪಕರಣವನ್ನು ಆನ್ ಮಾಡಿ ಅದರ ಕೇಬಲ್ ಒಂದನ್ನು  ತೆಗೆದು ಇನ್ನೊಂದು ತಪ್ಪು ಕನೆಕ್ಟರ್ ಗೆ ಜೋಡಿಸಿದ. ಅದರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಒಂದು ಭಾಗ ಸುಟ್ಟು ಹೋಯಿತು. ಇಡೀ ಉಪಕರಣ ಸತ್ತಂತಾಯಿತು. ಅದರಿಂದ ಸದ್ಯಕ್ಕೆ ಏನೂ ಕಾರ್ಯ ಮಾಡಿಸಲಾಗದಂತಾಯಿತು. ಅದರ ರಿಪೇರಿಗೆ ಕನಿಷ್ಠ ಎರಡು ದಿನವಾದರೂ ಬೇಕಿತ್ತು.  ನಾವೆಲ್ಲ ಹೆದರಿದೆವು - ಜನರಲ್ ಬಂದರೆ ಏನು ಹೇಳುವುದು ಎಂದು. 
ಜನರಲ್ ಬಂದರು. ಅವರಿಗೆ ಪರಿಸ್ಥಿತಿ ವಿವರಿಸಲಾಯಿತು . ಅವರು ಕೆಂಡಾಮಂಡಲವಾದರು. 
ಅವರು  ತನ್ನ ಅಧಿಕಾರ ಬಲ ತೋರಿಸಿಕೊಡುವ ಹಟದಿಂದ ತಾನು ಈ ಪ್ರಕರಣದ ಬುಡವನ್ನೆಲ್ಲ ಜಾಲಾಡಿಸಿಬಿಡುತ್ತೇನೆಂದು ತನಿಖೆ ಶುರು ಮಾಡಿದರು. ಮೊದಲಿಗೆ ‘ಇದು ಹೇಗೆ ಕೆಟ್ಟಿತು ಹೇಳಿ’ ಎಂದರು. ಆಗ ‘ಶಾರ್ಟ್ ಸರ್ಕ್ಯೂಟ್ ನಿಂದ’ ಎಂಬ ಉತ್ತರ ಬಂತು. ‘ಅದು ಹೇಗಾಯಿತು’ ಎಂದಾಗ ‘ಕೇಬಲ್ ತಪ್ಪು ಕನೆಕ್ಟರ್ಗೆ ಜೋಡಿಸಿದ್ದರಿಂದ ಮತ್ತು ಉಪಕರಣ ಆನ್ ಆಗಿದ್ದರಿಂದ’ ಎಂಬ ಉತ್ತರ ಬಂತು.  ‘ಉಪಕರಣ ಆನ್ ಇದ್ದಾಗ ಕನೆಕ್ಷನ್ ಮಾಡಬಾರದು ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಕನೆಕ್ಟ್ ಮಾಡಲು ಹೊರಟ ಮುಟ್ಟಾಳ ಯಾರು?’ ಎಂದಾಗ ನಮ್ಮ ಮಾತಿನ ಮಲ್ಲ ಸಮಜಾಯಿಸಿಕೊಟ್ಟ –‘ಉಪಕರಣ ಆಫ್ ಆಗಿಯೇ ಇತ್ತು. ಕನೆಕ್ಟ್ ಮಾಡುವಾಗ ಡ್ರೈವರ್ ಬಂದು ಆನ್ ಮಾಡಿದ’ ಎಂದು ಸುಳ್ಳು ಹೇಳಿ ಜಾರಿಕೊಳ್ಳಲು ನೋಡಿದ. ಆಗ ‘ಡ್ರೈವರ್ಗೆ ಆನ್ ಮಾಡಲು ಯಾರು ಹೇಳಿದ್ದು’ ಎಂದು ಜನರಲ್ ಕೇಳಿದರು. ಇಷ್ಟು ಹೊತ್ತು ಸುಮ್ಮನಿದ್ದ ಕರ್ನಲ್  ಇದು ವಿಪರೀತಕ್ಕೆ ಹೋಗುತ್ತಿದೆ ಮತ್ತು ಯಾರನ್ನೋ ಬಲಿಪಶು ಮಾಡಲು ಹೊರಟಂತಿದೆ ಎನಿಸಿ ದೃಢ ದನಿಯಲ್ಲಿ ಹೇಳಿದರು 'ನಾನು'!
ಎಲ್ಲರೂ ಸ್ತಬ್ದರಾದರು. ಜನರಲ್ ಅವಾಕ್ಕಾಗಿ ಸಿಟ್ಟು ಕುದಿಯುತ್ತಿದ್ದರೂ ಸುಮ್ಮನಾದರು. ಅವರಿಗೆ ತಿಳಿಯಿತು ಕರ್ನಲ್ ಈ ಘಟನೆಯ ಜವಾಬ್ದಾರಿಯನ್ನು ತಾನೇ ಹೊತ್ತು ತಂಡವನ್ನು ಬಚಾವ್ ಮಾಡಲು ಹೊರಟಿದ್ದಾರೆ ಎಂದು. ಜನರಲ್ ಹಲ್ಲು ಕಚ್ಚಿಕೊಂಡು ತಿರುಗಿ ಹೊರಟುಹೋದರು. ಗರ ಬಡಿದಂತೆ ನಿಂತಿದ್ದ ನಾವೆಲ್ಲ ದೀರ್ಘವಾಗಿ ಉಸಿರು ಎಳೆದುಕೊಂಡೆವು. ಅಬ್ಬಾ ಎಂತಹ ಅನಾಹುತದಿಂದ ಬಚಾವಾದೆವಲ್ಲ ಎಂದು. ನಮ್ಮಲ್ಲಿ ಕೆಲವರಿಗೆ ನಿರಾಸೆಯಾಯಿತು - ನಮ್ಮ ಮಾತಿನಮಲ್ಲ ಸಿಕ್ಕಿಬಿದ್ದು ಶಿಕ್ಷೆಯಾಗುವ ಅವಕಾಶ ತಪ್ಪಿ ಹೋಯಿತಲ್ಲ - ಎಂದು. ಅಂದಿನಿಂದ ನಮಗೆ ಕರ್ನಲ್ ಮೇಲಿನ ಗೌರವ ಇಮ್ಮಡಿಯಾಯಿತು. ಗುಂಡಿಗೆ ಎದೆ ಕೊಡುವ ಗಂಡೆದೆ ಇರುವವರು ಎಂತಹವರಲ್ಲವೇ ಎನ್ನಿಸಿತು. ತಂಡದ ಹಿತವನ್ನು ಕಾಯುವ ನಿಜವಾದ ಸೇನಾನಾಯಕನಿಗೆ ಇರಬೇಕಾದ  ನಾಯಕತ್ವ ಗುಣ ಇವರಲ್ಲಿದೆ ಎಂದು ಅಭಿಮಾನ ಮೂಡಿತು. 
ಒಮ್ಮೆ ಹಿರಿಯರಾದ ತಂತ್ರಜ್ಞರೊಬ್ಬರು ಬಂದು ವರದಿಕೊಟ್ಟರು - ಅದೊಂದು ಹೊಸದಾಗಿ ತಂಡ ಉಪಕರಣದಲ್ಲಿ ದೋಷವಿದೆ. ಅದರ ಇನ್ನೊಂದು ಮಾದರಿ ಸರಿಯಾಗಿತ್ತು - ಎಂದು. ಅದನ್ನು ತುರ್ತಾಗಿ ಮುಂದಿನ ದಿನ ಇತರ ಉಪಕರಣಗಳೊಂದಿಗೆ ಸೇರಿಸಿ ಪರೀಕ್ಷೆಗೆ ಕಳಿಸಬೇಕಿತ್ತು. ಕರ್ನಲ್ ಗೆ ಆತಂಕವಾಯಿತು. ದೋಷಯುಕ್ತ ಉಪಕರಣವನ್ನು ವಾಪಾಸು ಕಳಿಸಿ ಇನ್ನೊಂದನ್ನು ತರಿಸಲು ಹಲವು ದಿನಗಳು ಬೇಕಾಗುತ್ತಿತ್ತು. ಚಿಂತಾಕ್ರಾಂತರಾದ ಕರ್ನಲ್ ನನಗೆ ‘ಸ್ವಲ್ಪ ನೋಡು’ ಎಂದರು. ಹಿರಿಯ ತಂತ್ರಜ್ಞರಲ್ಲಿ ಸಮಸ್ಯೆಯ ಬಗ್ಗೆ ಕೇಳಿದೆ. ಅವರು  ಉಪಕರಣದ ಕೆಲವು ಸ್ವಿಚ್ ಗಳನ್ನು ನಿಗದಿತ ಸರಣಿಯಲ್ಲಿ ಒತ್ತಿದಾಗ ಅದು ವರ್ತಿಸಬೇಕಾದ ರೀತಿಯಲ್ಲಿ ವರ್ತಿಸುತ್ತಿಲ್ಲ ಎಂದರು. ಉಳಿದಂತೆ ಅದರಲ್ಲಿ ದೋಷವಿಲ್ಲ ಎಂದರು. ನಾನು ಹೇಳಿದೆ, ಆ ನಿಗದಿತ ಸರಣಿಯನ್ನು ನಿರ್ಧರಿಸುವುದು ಅದರಲ್ಲಿರುವ ಸಾಫ್ಟ್ವೇರ್. ಅದು ಈ ಉಪಕರಣ ಮತ್ತೆ ಮೊದಲಿದ್ದ ಉಪಕರಣ ಎರಡರಲ್ಲೂ ಒಂದೇ ರೀತಿಯಾಗಿ ಇರುವುದರಿಂದ ಸರಣಿ ಬದಲಾಗುವ ಸಂಭವ ಕಡಿಮೆ ಎಂದೆ. ಮೊದಲಿದ್ದ ಉಪಕರಣದಲ್ಲಿ ಆ ಸರಣಿಯನ್ನು ಪರೀಕ್ಷಿಸಿ ನೋಡೋಣ ಎಂದೆ. ಅದರಲ್ಲಿ ಪರೀಕ್ಷಿಸಿದಾಗ ಅಲ್ಲಿಯೂ ವರ್ತಿಸಬೇಕಾದಂತೆ ವರ್ತಿಸುತ್ತಿರಲಿಲ್ಲ. ಆಗ ನಾನಂದೆ – ‘ಅಂದರೆ ನೀವು ಹೇಳುವ ಸರಣಿಯಲ್ಲಿಯೇ ತಪ್ಪಿರಬೇಕಲ್ಲವೇ?’. ಬಳಿಕ ಉಪಕರಣದ ಸೂಚನಾಪಟ್ಟಿ ಮತ್ತೆ ಓದಿದಾಗ ಸರಣಿ ತಪ್ಪೆಂದು ತಿಳಿಯಿತು. ಸರಿಪಡಿಸಿಕೊಂಡ ಮೇಲೆ ಉಪಕರಣದಲ್ಲಿ ದೋಷವಿಲ್ಲವೆಂದು ತಿಳಿಯಿತು. ಕರ್ನಲ್ ನೆಮ್ಮದಿಯ ನಿಟ್ಟುಸಿರು ಬಿಟ್ಟು ನನ್ನ ಬೆನ್ನು ತಟ್ಟಿ ‘Brilliant’  ಎಂದರು.
ಒಮ್ಮೆ ಮರುಭೂಮಿಯಲ್ಲಿ ಅದೊಂದು ಹೊಸ ಕಂಪ್ಯೂಟರ್ ತಂದು ಉಪಕರಣಕ್ಕೆ ಜೋಡಿಸಿ, ಉಪಕರಣವನ್ನು ಪರೀಕ್ಷೆಗಾಗಿ ಬೇಸಿಗೆಯ ಸುಡು ಬಿಸಿಲಲ್ಲಿ ಕೊಂಡು ಹೋದಾಗ ಅದು ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ವಿಫಲವಾಗ ತೊಡಗಿತು. ಸಂಜೆ ನಮ್ಮ ಶಿಬಿರಕ್ಕೆ ಉಪಕರಣವನ್ನು ತಂದು ತಡರಾತ್ರಿ ವರೆಗೂ   ಅದನ್ನು ರಿಪೇರ್ ಮಾಡುತ್ತ ಕುಳಿತೆ. ಕರ್ನಲ್ ಬಂದು ಪಕ್ಕದಲ್ಲಿ ನಿಂತುಕೊಳ್ಳುತ್ತಿದ್ದರು, ನನಗೆ ನೈತಿಕಸ್ಥೈರ್ಯ ತುಂಬಲಿಕ್ಕೆ. ಬೆಳಗಿನ ಜಾವ ಐದು ಘಂಟೆಗೆ ಬಂದು ನನ್ನ ರೂಮಿನ ಬಾಗಿಲು ತಟ್ಟಿ 'ಏಳು ಮಾರಾಯ, ಡಿನೇಶ, ಫೀಲ್ಡ್ ಗೆ ಉಪಕರಣ ಪರೀಕ್ಷೆ ಮಾಡಲು ಹೋಗಬೇಕು’ ಎಂದು ಕರೆಯುತ್ತಿದ್ದರು. ಗಾಢ ನಿದ್ದೆಯಲ್ಲಿದ್ದ ನನ್ನನ್ನು ಎಬ್ಬಿಸಿದ್ದಕ್ಕಾಗಿ  ಮನಸ್ಸಿನಲ್ಲೇ ಶಾಪ ಹಾಕುತ್ತ ಎದ್ದು ಮುಖ ತೊಳೆದುಕೊಂಡು  ಸನ್ನದ್ಧನಾದೆ.  ಅವರ ಜೀಪಿನಲ್ಲಿ ಹೊರಟೆ. ಆ ದಿನವೂ ನಮ್ಮ ಕಂಪ್ಯೂಟರ್ ಕೈಕೊಟ್ಟಿತು. ಸಂಜೆ ಮತ್ತೆ ರಿಪೇರ್ ಗೆ ಕೂತೆ. ಮತ್ತೆ ಕರ್ನಲ್ ಮಧ್ಯರಾತ್ರಿಯವರೆಗೂ ಕಂಪನಿ ಕೊಟ್ಟರು. ಮರುದಿನ ಮತ್ತೆ ಬೆಳಗಿನ ಜಾವ ೫ ಗಂಟೆಗೆ ಬಾಗಿಲು ತಟ್ಟಿ ಎಬ್ಬಿಸಿದರು. ಹೀಗೆ ಮೂರು-ನಾಲ್ಕು ದಿನ ನಡೆದು ನಾನು ಕಂಗೆಟ್ಟಂತವನಾದೆ. ಕರ್ನಲ್ ಮೇಲೆ ಅಸಾಧ್ಯ ಸಿಟ್ಟು ಬರುತ್ತಿತ್ತು. ಆದರೆ ಮರುಕ್ಷಣದಲ್ಲಿ ಅವರ ಕರ್ತವ್ಯಪರತೆಯ ಬಗ್ಗೆ ಮೆಚ್ಚುಗೆಯ  ಭಾವವೂ ಮೂಡುತ್ತಿತ್ತು. ಪಾಪ, ಅವರೂ ಕೂಡ ನನ್ನ ಹಾಗೆ ನಿದ್ದೆ ಬಿಟ್ಟಿದ್ದರೂ ಬೆಳಗಿನ ಜಾವವೇ ಎದ್ದು ಕೆಲಸಕ್ಕೆ ಸಿಧ್ದರಾಗುತ್ತಿದ್ದರಲ್ಲ  ಎಂದು ಕನಿಕರಪಟ್ಟೆ. ಹೀಗೆ ವಾರ ಕಳೆಯುವುದರಲ್ಲಿ, ನಿದ್ದೆಯಿಲ್ಲದೇ  ನನ್ನ ಕಣ್ಣ ಕೆಳಗಿನ ಚರ್ಮ ಕಪ್ಪಾಗಿ ಮುಖದಲ್ಲಿ ಸ್ವಲ್ಪ ಪ್ರೇತಕಳೆ  ಮೂಡಿತ್ತು.  ನಮ್ಮ ಕಂಪ್ಯೂಟರ್ ಅಷ್ಟು ಹೊತ್ತಿಗೆ  ಮರುಭೂಮಿಗೆ ಹೊಂದಿಕೊಂಡು ಸರಾಗವಾಗಿ ಕೆಲಸ ಮಾಡುತ್ತಿತ್ತು. 
ಒಂದೆರಡು ದಿನದಲ್ಲಿ ಮೇಲಧಿಕಾರಿಗಳು ಉಪಕರಣದ ಕಾರ್ಯಕ್ಷಮತೆ ವೀಕ್ಷಿಸಲು ಬಂದಾಗ, ಎಲ್ಲವೂ ಸರಾಗವಾಗಿ ನಡೆದು, ಅವರೆಲ್ಲ ಖುಷಿಗೊಂಡು, ಬಳಿಕ ಔತಣಕೂಟದಲ್ಲಿ ಪಾಲ್ಗೊಂಡರು. ಜನರಲ್ ಬಂದು ನನ್ನನ್ನು ಕೇಳಿದರು ‘ನಿಮ್ಮ ಕಂಪ್ಯೂಟರ್ ಹೇಗಿದೆ?’ ಎಂದು. ಆಗ ಕರ್ನಲ್ ಮಧ್ಯೆ ಬಾಯಿಹಾಕಿ ಹೇಳಿದರು – ‘ಅವರ ಕಂಪ್ಯೂಟರ್ಗಿಂತ ಅವರು ಹೇಗಿದ್ದಾರೆ ಎಂದು ಕೇಳಿ. ಅವರು ಸರಿಯಾಗಿ ನಿದ್ದೆ ಮಾಡದೆ ಹಲವು ದಿನಗಳಾದವು. ಎಷ್ಟು ಸಣ್ಣಗಾಗಿದ್ದಾರೆ  ನೋಡಿ, ಹಗಲೂ ರಾತ್ರಿ ಕೆಲಸ ಮಾಡಿ ಎಲ್ಲವನ್ನೂ ಸರಿದಾರಿಗೆ ತಂದಿದ್ದಾರೆ’  - ಎಂದರು. ಆಗ ಜನರಲ್ -  ‘ನೀವೆಲ್ಲ  ಎಷ್ಟು ಕಷ್ಟಪಡುತ್ತಿದ್ದೀರ ಎಂದು ಗೊತ್ತು, ನೋಡಿ ನಿಮ್ಮ ಕಂಪ್ಯೂಟರ್ ನಮ್ಮ ಉಪಕರಣದ ಬ್ರೈನ್ ಇದ್ದ ಹಾಗೆ. ಅದನ್ನು ನೀವು  ಸರಿಯಾಗಿ ನೋಡಿಕೊಂಡರೆ ಮಾತ್ರ ನಮ್ಮ ಉಪಕರಣ ಕೆಲಸ ಮಾಡುತ್ತದೆ. ಒಂದು ರೀತಿಯಲ್ಲಿ ನೀವು ನಮ್ಮ ಅನ್ನದಾತ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ನಿಮಗೆ ಗೊತ್ತಿರಬೇಕು -Only crying baby gets milk’ ಎಂದು ಬೆನ್ನು ಚಪ್ಪರಿಸಿ ಹೋದರು. ಕರ್ನಲ್ ಬಗ್ಗೆ ಮತ್ತೆ ನಮ್ರನಾದೆ.    

ಮುಂದೊಂದು ದಿನ, ಅಲ್ಲಿನ ಕೆಲಸ ಬಿಟ್ಟು ಇನ್ನೊಂದು ಉದ್ಯೋಗಕ್ಕಾಗಿ ಹೊರಡುವಾಗ ಕರ್ನಲ್ “ನಿನ್ನ ಮುಂದಿನ ಬಾಳು  ಸುಗಮವಾಗಲಿ, ಬದುಕಿನಲ್ಲಿ ಪಡೆಯಬಹುದಾದ ಸುಖವೆಲ್ಲ ನಿನ್ನದಾಗಲಿ, ಇಚ್ಛೆಯರಿತು ನಡೆವ ಸತಿ ಸಿಗಲಿ” ಎಂದು ಆಲಂಗಿಸಿ ಬೀಳ್ಕೊಟ್ಟರು.  
ಹಿರಿಯರ, ಘನತೆಯುಳ್ಳವರ,  ಸಜ್ಜನರ ಹಾರೈಕೆ ಫಲಿಸುವುದೆಂಬರು.   ಫಲಿಸುವುದೆಂದು ಕಾಯುವುದರಲ್ಲಿ ತಪ್ಪೇನಿಲ್ಲ, ಅಲ್ಲವೇ?


(A version of this  was told to limited audience at Minnimane Kathaavali Edition 10)

______________________________________________________________________________________




A Gentleman Officer
(Author: Dinesh K Shetty T.)


It's difficult for common people to work with Military officers. If you are a bit lazy, or work as you wish, or have the habit of taking leave as you wish, or have the habit of half finishing a job & taking up another one, then it will be very difficult to work with military officers. There are very few officers who tolerate these kind of people. Some will immediately get rid of them, some will threaten them and forcibly make them  to change their habits, some will nicely persuade them to change their habits. There are some, whose personality itself induces respect and people change by seeing them.

I had an opportunity to interact with army officers as a technician. I had worked for several officers. One of them is Colonel Thakoor. A well-built looking fair, middle-aged man with thick mustache, must be around 5 ft 9 inch height and rough skin on his face. Though he may not be looking as rough as Amarish Puri, he is often seen with serious face. Very few people must have seen him smiling, even if he smiles,it gets hidden in his mustache. My duty was to look after a special computer used in an instrument used in Army.  In the beginning, when I was just introduced to the Colonel, he spoke rarely with me only asking whether the work is done or not. Then we had to take the instruments to  many places for testing. Colonel was in charge of testing work. Once we had to take it to a seashore, once we had to take it to a desert etc. We had to camp in those places and conduct the testing procedures. Colonel used to carry us in his jeep in those places. he used meticulously plan the work and supervise. He used to encourage us to work with team spirit. He was fond of youngsters that too the ones who work hard. But he doesn't let others know about it. I belong to the category of people who don't care for rain or sunshine. Sometimes I used to work on the instruments in the open field during hot noon. Colonel used to observe that and liked my work. Hence, whenever there is important work, he used to take me, even though it is not computer related work. Sometimes I had to inspect different equipment, check whether the turn on or not, check whether any cables got disconnected, etc. and give report. I observed that - many a times,   problems can be solved by applying ones common sense.  

Colonel was a fatherly figure for me, hence I used to respect him. Sometimes I felt I had to work more compared to others, Colonel is using me more for his work. Then I thought, he is not using me for his personal work. There is purpose for the work. It's for the great cause, it's for the nation. If everyone contributes whatever he/she can and attain self-satisfaction, its fulfilling, I thought. Even after working for long with Colonel, he never spoke in a lighter manner with me. Though he loves us, he doesn't express. There were people in our team who were a bit lazy and there were some who  build palaces just talking. Colonel was putting up with them, he tries to get at least some work from them. He was good in riding the given horse.
Once there was a program to test a new equipment. After finishing the testing, we were supposed to demonstrate it's working. A  Lieutenant General was scheduled to visit & see the demonstration. We all got ready with the equipment. Just 5 minutes before the General was about to visit, one team member, the one who builds palaces by talk, went and put on the instrument and tried connecting one cable into a wrong connector forcibly. It resulted in a short circuit and a part got burnt. The whole instrument became non-operational and nothing could be done with it now. Repairing it with may take at least two days. We all got frightened. How can we answer General now? General came. He was explained about the current situation. he became furious! 

He thought of showing us his official power and started an inquiry. He asked us – ‘First of all, tell me how this became non-operational?' An answer came 'Due to Short Circuit'.
'How did Short Circuit happen'. 'It was due to connecting a cable to a wrong connector and that time power was on.'
'Who is that dumb guy who doesn't even know that cable connection shouldn't be done when power is on?'
For this our talkative man tried washing his hands off by putting onus on someone else 'Sir, Instrument was off when we were trying cable connections, but the driver came & switched on the instrument.'
'Who ordered Driver to switch on the instrument' was the next question.
So long Colonel was watching this & was silent. He realized that its going out of hand and going to victimize innocent people and with a firm voice he replied 'It's me who ordered'!
There was pin drop silence. Even General got stunned. He realized that Colonel was trying to take the responsibility for the mishap and save  his team. General withheld his anger by biting his teeth and returned back. We all breathed a sigh  of relief for getting spared from General's wrath. Few in our team are also disappointed from the fact that our talkative man has escaped from punishment for his misdeed.
We all felt grateful to the Colonel. He is a man who has the courage to  face bullets, we felt. We felt proud of him and felt that he is a true leader who can guard the team interest.

Once a senior technician came and gave a report saying that the new equipment which was brought recently is having problems. It's not behaving the way the old one was operating he said. It was scheduled to undergo testing procedure along with other old equipment next day. Colonel got worried. To get a replacement for the faulty one it will take several days. Colonel was thinking of how to manage the crisis. Then he asked me to have a look at the problem. I sat with the senior technician and asked him to explain the problem. He told me that the new equipment was not responding to a key sequence followed by him. Rest of the functions are fine. I told him that the instruments behavior with the key sequence is normally codified in software. Since the software put in this is same as the other instrument there is very less chance of change in behavior. Hence let us check your key sequence with the other equipment which was there earlier, I said. When we checked with the old equipment the key sequence wasn't getting response from the old equipment too. I told him, this means that your key sequence may be wrong. Let's verify with the manual. When we checked in the manual we found that he had erroneously noted down the key sequence. After correcting the key sequence,we found that all instruments are working as expected. Colonel breathed a sigh of relief, patted my back and said 'Brilliant'.

Once in a desert, I took a new model special computer and fitted with an instrument. We took it for testing it in hot summer. it failed to work as expected. When we returned to the camp with the instrument in the evening, I started repair work. Colonel also came and stood behind me to give me moral support. I worked till mid night and fitted back the computer. Next day early morning 5 O'clock, there was knock on my door. Colonel woke me up and asked me to join him for the field test with the instrument. I was so annoyed with Colonel  for not allowing proper sleep to me and was cursing him silently. I got ready & joined him. The next day also the computer failed. I again sat repairing in the evening till midnight. Again Colonel accompanied me. Next day morning again Colonel knocked my door at 5 AM. This continued for 3-4 days. I was in a state of despair. I was getting angry on Colonel too. next moment I was appreciative of his work discipline too. he too was sleepless accompanying me, still he gets up early and gets ready for work. I felt pity for him. Within a week a dark shadow developed around my eyes due to lack of  sleep and looking pale. But my computer got adjusted to the desert and started working as desired.
After few days higher officials came to inspect the instruments and all worked well meeting their expectations. There was a dinner party to celebrate. A General came and asked me 'How is your computer doing?'. Colonel chipped in and said 'Ask about his condition rather than his computer. He has been working without proper sleep since many days. He has become so thin now. He has worked day & night for many days to set right everything'. Then the General said "I am aware how hard you all are working. Your computer is like the brain of our instrument. If you make sure it works well, then only our instrument can work as desired. if you look at this way, you are our breadwinner. I am proud of you. You should pay attention to your health. You should know - only crying baby gets milk". He patted me and left. I was again  grateful to Colonel.

After sometime, when I was leaving the job to join another one, Colonel blessed me saying "Let your career flourish. Let all the happiness life can give be yours. Hope you will get a girl who can, not only love you wholeheartedly but also understand you well enough". He hugged me and gave send off.

There is a belief that  the blessings from elders, honorable people and gentlemen will come true. There is no harm in hoping for that, Right?  


The End.

Comments

Popular posts from this blog

Sakura and Shakuntala

Here is a Hiriya

Bhootopakaara