Scientist's Purse
ವಿಜ್ಞಾನಿಯ ಪರ್ಸ್
ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ
ಮೊದಲ ಸಂಬಳದ ಮಧುರ ಕ್ಷಣಗಳ ನೆನಪು
ಯಾರಿಗೆ ಇಷ್ಟವಾಗುವುದಿಲ್ಲ? ಸದಾ
ತಂದೆಯನ್ನು ಕೇಳಿ ಪಡೆದು ಖರ್ಚು ಮಾಡುತ್ತ ಬಂದವನಿಗೆ ಸ್ವತಃ ದುಡಿದು ಸಂಬಳ ಬಂದಾಗ ಸಹಜವಾಗಿಯೇ ಸ್ವಲ್ಪ ಕೋಡು
ಮೂಡಿದಂತೆನಿಸಿತ್ತು. ಆದರೆ ಅದಕ್ಕಾಗಿ ನಾನು ನನ್ನ ಹುಟ್ಟೂರಿನಿಂದ ಮೂರು ಸಾವಿರ ಕಿಲೋಮೀಟರು ದೂರ ವಲಸೆ
ಬರಬೇಕಾಯಿತು, ಡೆಹ್ರಾಡೂನ್-ನ
ಸಂಶೋಧನಾಲಯವೊಂದಕ್ಕೆ. ಭಾರತದ ರಾಷ್ಟ್ರಪತಿಗಳು ಸಂತೋಷದಿಂದ ನನ್ನನ್ನು 'ವಿಜ್ಞಾನಿ' ಎಂಬ ಹುದ್ದೆಗೆ ನೇಮಿಸಿದ್ದಾರೆ ಎಂಬ ಪತ್ರ ತಲುಪಿದ ಮೇಲೆ -ದೂರ ಮೂರು
ಸಾವಿರವಾದರೇನು? ಆರು
ಸಾವಿರವಾದರೇನು? ಗಂಟುಮೂಟೆ
ಕಟ್ಟಿ ಹೊರಡುವುದೇ - ಎಂದು ಹೊರಟು ಬಂದಿದ್ದೆ.
ಡೆಹ್ರಾಡೂನ್ ಹಿಮಾಲಯದ ಶ್ರೇಣಿಗಳಿಗೆ ಸಮೀಪದ ಶಿವಾಲಿಕ್ ಬೆಟ್ಟಗಳ ಸಾಲಿನ ನಡುವೆ ಇರುವ ಕಣಿವೆ ಪ್ರದೇಶ. ಅಲ್ಲಿ ತಲೆ ಎತ್ತಿ ನೋಡಿದರೆ ಉತ್ತರಕ್ಕೆ ಹರಡಿರುವ ಬೆಟ್ಟದ ಸಾಲಿನಲ್ಲಿ ಮಸ್ಸೂರಿ ಎಂಬ ಪ್ರವಾಸೀತಾಣ ಗೋಚರಿಸುತ್ತದೆ. ಅಲ್ಲಿ ಹೋಗಿ ನೋಡಿದರೆ ಮತ್ತೂ ಉತ್ತರಕ್ಕೆ ಮನಮೋಹಕ ಹಿಮಾಲಯ ಶ್ರೇಣಿ ದ್ರಗ್ಗೋಚರವಾಗುತ್ತದೆ. ಅಲ್ಲಿಯವರೆಗೆ ಹೆಚ್ಚೆಂದರೆ ಸಹ್ಯಾದ್ರಿ ಶ್ರೇಣಿಯ ಕೆಲವು ಶಿಖರಗಳನ್ನೇ ದೊಡ್ಡದೆಂದುಕೊಂಡಿದ್ದ ನನಗೆ ಹಿಮಾಲಯದ ವೈಶಾಲ್ಯತೆ, ಭವ್ಯತೆ, ಅಸೀಮತೆ ದಿಗ್ಭ್ರಮೆ ಹುಟ್ಟಿಸಿತ್ತು. ಮನುಷ್ಯನ ಮಿತಿಯ ಅಸಹಾಯಕತೆಯ ಅರಿವನ್ನು ಮೂಡಿಸಿತ್ತು. ನಮ್ಮ ಅಹಂ ನೀಗಿಸಿ ನಾವೆಷ್ಟು ಸಣ್ಣವರು ಎಂದು ಬೊಟ್ಟು ಮಾಡಿ ತೋರಿಸುತ್ತಿರುವಂತೆನಿಸುತ್ತಿತ್ತು.

ಹಲವಾರು ತೊರೆಗಳು,ಬಿಸಿನೀರಬುಗ್ಗೆಗಳು, ಕಾಡುಪ್ರದೇಶಗಳು ಸುತ್ತುವರಿದಿರುವ ಈ ಡೆಹ್ರಾಡೂನ್ ಕಣಿವೆ
ಜವಾಹರಲಾಲ್ ನೆಹರೂಗೆ ತುಂಬಾ ಇಷ್ಟವಾದ ಸ್ಥಳವಾಗಿತ್ತು. ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಹಲವು
ಬಾರಿ ನೆಹರೂರನ್ನು ಡೆಹ್ರಾಡೂನ್ ಜೈಲಿನಲ್ಲಿ ಇಡಲಾಗಿತ್ತು. ಆ ದಿನಗಳ
ಬಗ್ಗೆ ನೆಹರೂ ಬರೆಯುತ್ತಾ - ಭವ್ಯ ಹಿಮಾಲಯದ ತಪ್ಪಲಲ್ಲಿ ಇದ್ದೇನೆ ಎನ್ನುವ ಭಾವ ತನ್ನ ಸೆರೆವಾಸದ ಬಳಲಿಕೆಯನ್ನು ನೀಗಿಸುತ್ತಿತ್ತು, ಆ ಪರ್ವತ ಸಾಲುಗಳನ್ನು ದಿಟ್ಟಿಸುತ್ತಾ
ಅದರ ಬಗ್ಗೆ ಧ್ಯಾನಿಸುತ್ತಾ, ಅಂತರಂಗದಲ್ಲಿ
ತುಂಬಿಕೊಳ್ಳುತ್ತಾ ಆ ಬೃಹತ್ತಿಕೆಯೊಂದಿಗೆ ಆಪ್ತತೆ ಬೆಳೆಯುತ್ತ ಹೋಗುತ್ತಿತ್ತು - ಎಂದು ಬಣ್ಣಿಸುತ್ತಾರೆ. ಹಿಮಾಲಯದ ಶ್ರೇಣಿಗಳ ನಡುವೆ ಧುಮುಧುಮುಕಿ
ಬರುವ ಗಂಗೆ ತನ್ನ ಧಾವಂತಿಕೆಯನ್ನು ಕೊಂಚ ಕಡಿಮೆ ಮಾಡಿಕೊಳ್ಳಲು ಬಯಲು ಪ್ರದೇಶಕ್ಕೆ ಪ್ರವೇಶಿಸುವ
ದ್ವಾರದಂತಿರುವ ಋಷಿಕೇಶ ಡೆಹ್ರಾಡೂನ್-ಗೆ ಸಮೀಪವೇ ಇದೆ - ೪೦-೫೦ ಕಿ.ಮೀ. ದೂರದಲ್ಲಿ. ಹಿಮಾಲಯ ಶ್ರೇಣಿಯಲ್ಲಿರುವ ಪ್ರಸಿದ್ಧ ಪ್ರವಾಸೀ ತಾಣಗಳಾದ
ಗಂಗೋತ್ರಿ, ಯಮುನೋತ್ರಿ, ಬದರೀನಾಥ, ಕೇದಾರನಾಥ ಇತ್ಯಾದಿ ಸ್ಥಳಗಳಿಗೆ ಹೋಗಲು
ಸಾಮಾನ್ಯವಾಗಿ ಡೆಹ್ರಾಡೂನ್ ಮೂಲಕವೇ ತೆರಳುತ್ತಾರೆ.
ಇಂತಹ ಪ್ರದೇಶ
ಧ್ಯಾನಾಸಕ್ತರಿಗೂ, ಸಂಶೋಧಕರಿಗೂ ಪ್ರಶಸ್ತವಾದದ್ದೇ ಆಗಿದೆ.
ಡೆಹ್ರಾಡೂನ್-ನಲ್ಲಿರುವ ಬಹುತೇಕ ಜನ ಅಲ್ಲಿರುವ ಹಲವಾರು ಸರಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುವವರೇ
ಆಗಿರುತ್ತಾರೆ. ಇದನ್ನು ಗಮನಿಸಿ ಪ್ರಚಲಿತದಲ್ಲಿರುವ ಜೋಕ್ - ಮಸ್ಸೊರಿಯಿಂದ ಕೆಳಗೆ ಒಂದು
ಕಲ್ಲೆಸದರೆ ಅದು ಡೆಹ್ರಾಡೂನ್- ನಲ್ಲಿರುವ ಯಾರಾದರೂ ಒಬ್ಬ ವಿಜ್ಞಾನಿಗೋ ಅಥವಾ ಸರಕಾರೀ ಅಧಿಕಾರಿಗೋ ತಾಗುವ
ಸಂಭವವೇ ಹೆಚ್ಚು. ವಿಜ್ಞಾನ ಮತ್ತು ವಿಜ್ಞಾನಿ-ಬಳಗದ ಮೇಲೆ
ಜನರಿಗೆ ಒಂದು ರೀತಿಯ ಆಕರ್ಷಣೆ ಯಾವಾಗಲೂ ಇದ್ದದ್ದೇ ಅನ್ನಿ!
ನನ್ನ ಗೆಳೆಯರೊಬ್ಬರ ಮಗ ೧೦-೧೨ ವರ್ಷದ ಹುಡುಗ, ವಿನೋದ, ನಮ್ಮೊಡನೆ ಬಹಳ ಸಲುಗೆಯಿಂದಿದ್ದ. ಒಮ್ಮೆ ನಮ್ಮ ಗೆಳೆಯರ ತಂಡ ಪಿಕ್ನಿಕ್ ಹೋಗಿ ಬರುತ್ತಿದ್ದಾಗ ವಿನೋದನಿಗೆ ಯಾರೋ ಹೇಳಿದರು - ನಾವು 'ವಿಜ್ಞಾನಿ'ಗಳು ಎಂದು. ಅವನು ಅಚ್ಚರಿಯಿಂದ ಉದ್ಗಾರ ತೆಗೆದು “ಹೌದಾ ! ನೀವೂ ವಿಜ್ಞಾನಿಗಳಾ , ನಂಬೋಕ್ಕೆ ಅಗೋಲ್ಲಪ್ಪ” - ಎಂದ. ನಾವೆಲ್ಲ ಅವನ ಉದ್ಗಾರಕ್ಕೆ ಪಕಪಕನೆ ನಕ್ಕೆವು. ಛೇಡಿಸುತ್ತ “ಯಾಕೆ ಅನುಮಾನ? ವಿಜ್ಞಾನಿಗಳು ಹೇಗಿರುತ್ತಾರೆ ಅಂದುಕೊಂಡಿದ್ದೆ? ಗಡ್ಡ ಬಿಟ್ಟಿರಬೇಕೇ? ಉದ್ದ ಕೂದಲಿರಬೇಕೇ? ದಪ್ಪ ಕನ್ನಡಕ ಇರಬೇಕೇ ?” - ಎಂದೆಲ್ಲ ಕೇಳುತ್ತ ತಮಾಷೆ ಮಾಡಿದೆವು. ವಿನೋದ ಮೆಲ್ಲನೆ ಹೇಳಿದ “ವಿಜ್ಞಾನಿಗಳು ಅಂದರೆ ತುಂಬಾ ಬುದ್ಧಿವಂತರು, ಜಾಣರು ಆಗಿರುತ್ತಾರೆ. ಹೆಚ್ಚು I.Q. ಇರುವವರು. ಅಲ್ಲವೇ?”

ಆಮೇಲೆ ನಾನು
ಹೇಳಿದೆ. “ನೋಡು, ವಿಜ್ಞಾನಿಗಳ ತಲೆಯ ಸುತ್ತ ಒಂದು ಪ್ರಭಾವಳಿ ಇರುತ್ತದೆ. ಅದು ತುಂಬಾ ಧ್ಯಾನ ಮಾಡುವವರಿಗೆ ಮಾತ್ರ
ಕಾಣಿಸುತ್ತದೆ. ವಿಜ್ಞಾನಿಗಳ
ಮಿದುಳಿನಲ್ಲಿ ಬುದ್ಧಿಶಕ್ತಿ ಹೆಚ್ಚಾಗಿ ಹೊರಸೂಸುತ್ತಿರುವುದರಿಂದ ಆ ಪ್ರಭಾವಳಿ ಉಂಟಾಗುತ್ತದೆ. ನೀನೂ ತುಂಬಾ ಧ್ಯಾನ ಮಾಡಿ ಬಂದು, ನಮ್ಮನ್ನು
ಕಂಡರೆ ನಿನಗೆ ನಮ್ಮ ಪ್ರಭಾವಳಿ ಕಾಣಬಹುದು” - ಎಂದೆ. ಪಾಪ! ವಿನೋದ ಇನ್ನೊಂದಿಷ್ಟು ಗೊಂದಲಕ್ಕೊಳಗಾಗಿ ತಲೆಬಿಸಿ ಮಾಡಿಕೊಂಡ!
ನನ್ನ ಮೊದಲ
ಸಂಬಳ ಬಂದ ದಿನವೇ ಅದರಲ್ಲಿ ೫೦೦ ರೂಪಾಯಿಯನ್ನು ನನ್ನ ಅಜ್ಜಿಗೆ ಮನಿ
ಆರ್ಡರ್ ಮಾಡಿದ್ದೆ. ಒಂದು ವಾರದ ಬಳಿಕ ಅದು ತಲುಪಿದಾಗ, ಅಜ್ಜಿ
ಲಾಟರಿ ಹೊಡೆದವಳಂತೆ ಖುಷಿ ಪಟ್ಟಿದ್ದಳಂತೆ! ಊರ ತುಂಬೆಲ್ಲ ಡಂಗುರ ಹೊಡೆದಿದ್ದಳಂತೆ!
ನನ್ನೂರ ಜನ ಹಿಮಾಲಯದ ಗಂಗಾವತರಣದ ಕತೆ ಕೇಳಿದ್ದರೂ ಈ ಲಕ್ಷ್ಮಿ-ಅವತರಣದ ಕತೆ ಅವರಿಗೆ ಹೊಸದು.
ಕೆಲಸಕ್ಕೆ ಸೇರುವ ಮೊದಲು ಪರ್ಸ್ ಬಳಸಿರಲಿಲ್ಲ ನಾನು. ಜೇಬಲ್ಲಿ ಕಾಸು ಇದ್ದರೆ ತಾನೆ ಪರ್ಸ್ ಬೇಕಾಗುವುದು? ಸಂಬಳ ಬರಲು ಆರಂಭವಾದ ಮೇಲೆಯೇ ನನಗೆ ಪರ್ಸ್ ಆಲೋಚನೆ ಬಂದದ್ದು. ಅದೂ ಕೆಲವು ತಿಂಗಳಾದ ಮೇಲೆ. ಪಲ್ಟನ್ ಬಜಾರ್- ಗೆ ಹೋಗಿ ಒಂದು ಪರ್ಸ್ ಕೊಂಡುಕೊಂಡೆ. ಅದರಲ್ಲಿ ಒಂದಿಷ್ಟು ಹೊಸ ನೋಟುಗಳನ್ನು ಇಟ್ಟುಕೊಂಡು ಪ್ಯಾಂಟಿನ ಹಿಂಬದಿಯ ಜೇಬಿನಲ್ಲಿಟ್ಟುಕೊಂಡು ಆಗಾಗ ಜೇಬು ಸವರಿಕೊಳ್ಳುತ್ತಾ, ಪರ್ಸ್ ಇರುವುದನ್ನು ಖಾತರಿಪಡಿಸಿಕೊಳ್ಳುತ್ತ ತಿರುಗಾಡುತ್ತಿದ್ದೆ. ಪರ್ಸ್-ನಲ್ಲಿ ತಮಗೆ ಪ್ರಿಯರಾದವರ, ಆರಾಧಿಸುವವರ ಫೋಟೋ ಇಟ್ಟುಕೊಳ್ಳುವುದು ರೂಡಿಯಷ್ಟೇ? ನಾನು ಐನ್ಸ್ಟೀನ್ ಫೋಟೋ ಇಟ್ಟುಕೊಂಡಿದ್ದೆ. ಹಾಗೆಯೆ ಒಂದಿಷ್ಟು ೨೦ ಪೈಸೆ ರೆವೆನ್ಯೂ ಸ್ಟ್ಯಾಂಪ್ ಇಟ್ಟುಕೊಂಡಿದ್ದೆ. ಪ್ರತೀ ತಿಂಗಳೂ ಸಂಬಳ ಪಡೆಯಲು ರಿಜಿಸ್ಟರ್ನಲ್ಲಿ ಈ ಸ್ಟ್ಯಾಂಪ್ ಅಂಟಿಸಿ ಸಹಿ ಮಾಡಬೇಕಿತ್ತು.
ಕೆಲದಿನಗಳ
ಬಳಿಕ ನಮ್ಮ ಕಚೇರಿಯಿಂದ ಕೆಲಸದ ನಿಮಿತ್ತ ನನ್ನನ್ನು ಮತ್ತು ನನ್ನ ಗೆಳೆಯ ನಿಸಾರನನ್ನು ಮುಂಬಯಿ ಮತ್ತು ಬೆಂಗಳೂರಿಗೆ
ಹೋಗಿಬರುವಂತೆ ತಿಳಿಸಲಾಯಿತು. ಅಲ್ಲಿರುವ
ಕೆಲವು ಸಂಶೋಧನಾಲಯಗಳಿಗೆ ಭೇಟಿ ಕೊಡಬೇಕಿತ್ತು.
ಹೊರಡುವ
ಮುಂಚೆ ನಮ್ಮ
ಸಹೋದ್ಯೋಗಿಗಳು ನನ್ನ ಮೊದಲ ಪ್ರವಾಸವಾದುದರಿಂದ ಒಂದಿಷ್ಟು ಸಲಹೆಗಳನ್ನಿತ್ತರು. ಅದರಲ್ಲಿ
ಮುಖ್ಯವಾಗಿ ಹೇಳಿದ್ದು - “ನೀನು
ಬಾಂಬೆಯಲ್ಲಿ ಬಹಳ ಜಾಗರೂಕತೆಯಲ್ಲಿರಬೇಕು. ಆ ಮಹಾನಗರ ಪಿಕ್-ಪಾಕೆಟ್-ಗೆ ಬಹಳ ಪ್ರಸಿದ್ಧ” ಎಂದು. ನಿಸಾರನು
ಮಹಾರಾಷ್ಟ್ರದವನಾಗಿದ್ದು ಬಾಂಬೆ ಪರಿಚಯವಿರುವವನಾಗಿರುವುದರಿಂದ ನಾನು ಅಷ್ಟು ತಲೆ
ಕೆಡಿಸಿಕೊಳ್ಳಬೇಕಾಗಿಲ್ಲ ಅಂದುಕೊಂಡೆ.
ನಾನೂ ನಿಸಾರನೂ ಡೆಹ್ರಾಡೂನ್-ನಿಂದ ನವದೆಹಲಿ-ಗೆ ರೈಲಿನಲ್ಲಿ ಪ್ರಯಾಣಿಸಿದೆವು. ಮರುದಿನ ಬೆಳಿಗ್ಗೆ ದಿಲ್ಲಿ ತಲುಪಿ ಸಂಜೆಯ ರೈಲಿಗೆ ಬಾಂಬೆ-ಗೆ ಟಿಕೆಟ್ ಬುಕ್ ಮಾಡಿದೆವು. ಸ್ಟೇಷನ್-ನ ಕ್ಲಾಕ್-ರೂಮ್ ನಲ್ಲಿ ನಮ್ಮ ಲಗ್ಗೇಜು ಇಟ್ಟು ಹೊತ್ತು ಕಳೆಯಲು ಸಮೀಪದ ಕನ್ನಾಟ್ ಪ್ಲೇಸ್ ಸುತ್ತಮುತ್ತ ಅಲೆದಾಡತೊಡಗಿದೆವು. ಮಧ್ಯಾಹ್ನದ ಹೊತ್ತಿಗೆ ಢಾಬಾವೊಂದರಲ್ಲಿ ಹೊಟ್ಟೆ ತುಂಬಿಸಿಕೊಂಡು ಬಳಿಕ ರೈಲಿಗೆ ಇನ್ನೂ ಸಮಯವಿರುವುದರಿಂದ, ಅಲ್ಲೊಂದು ಸಿನಿಮಾ ಥಿಯೇಟರ್ ಕಂಡುದರಿಂದ, ಸಿನಿಮಾ ನೋಡೋಣ ಎಂದು ಆಲೋಚಿಸಿ, ಅಲ್ಲಿ ಕೌಂಟರ್ ಬಳಿ ನಿಂತೆವು. ನಮ್ಮಿಂದ ಮುಂದೆ ಒಬ್ಬಿಬ್ಬರಿದ್ದರು. ಕ್ಯೂನಲ್ಲಿ ನನ್ನ ಹಿಂದೆ ನಿಸಾರನೂ ನಿಂತ. ಸ್ವಲ್ಪ ಹೊತ್ತಿನ ಬಳಿಕ ಹತ್ತಿಪ್ಪತ್ತು ಜನ ನಮ್ಮ ಹಿಂದೆ ಬಂದು ನಿಂತರು. ಅಲ್ಲೊಂದಿಷ್ಟು ಸ್ಲಂ ಹುಡುಗರು ಆಚೆ ಈಚೆ ಅಲೆದಾಡುತ್ತಿದ್ದರು. ಕೌಂಟರ್ ತೆರೆಯುವ ಸ್ವಲ್ಪ ಮೊದಲು ನಾನು ನನ್ನ ಪ್ಯಾಂಟಿನ ಹಿಂಬದಿಯ ಜೇಬಿನಿಂದ ಪರ್ಸ್ ತೆಗೆದು ಹಣ ಎಣಿಸಿ, ಟಿಕೆಟ್ಗೆ ಚಿಲ್ಲರೆ ಇರುವುದನ್ನು ಖಾತರಿ ಪಡಿಸಿಕೊಂಡು, ಮತ್ತೆ ಹಿಂದಿನ ಜೇಬಿನಲ್ಲಿಟ್ಟುಕೊಂಡೆ. ಕೌಂಟರ್ ತೆರೆಯಿತು. ಅಷ್ಟೊತ್ತಿಗೆ ಹಿಂದಿನಿಂದ ಕೆಲವರು ನೂಕಿದರು. ಕ್ಯೂ ಮುರಿದು ಕೆಲವರು ಬದಿಯಿಂದ ನುಗ್ಗಿದರು. ನನ್ನ ಮುಂದಿನವರು ಖಾಲಿಯಾಗಿ ನಾನು ಕೌಂಟರ್ ಬಳಿ ನಿಂತಾಗ ನನ್ನ ಹಿಂದಿದ್ದ ನಿಸಾರನೇ ದುಡ್ಡು ಕೊಟ್ಟು ಎರಡು ಟಿಕೆಟ್ ಖರೀದಿಸಿದ.
ಆವಾಗಲೂ ಕೆಲವರು ಹಿಂದಿನಿಂದ ದೂಡುತ್ತಲೇ ಇದ್ದರು. ನಾವಿಬ್ಬರೂ “ಅಬ್ಬಾ! ಟಿಕೆಟ್ ಸಿಕ್ಕಿತಲ್ಲ” ಎಂದು ನಿಟ್ಟುಸಿರು ಬಿಟ್ಟು, ಪಕ್ಕದ ಅಂಗಡಿಯಲ್ಲಿ ಎರಡು ಕೋಲ್ಡ್ ಡ್ರಿಂಕ್ಸ್ ಬಾಟಲ್ ಕೊಂಡು ಕುಡಿದೆವು. ದುಡ್ಡು ಕೊಡಲು ನಾನು ಹಿಂದಿನ ಜೇಬಿಗೆ ಕೈ ಹಾಕಿದರೆ ಖಾಲಿ ಜೇಬು! ಪರ್ಸ್ ಇರಲಿಲ್ಲ! ಕೂಡಲೇ ಹಿಂದಿನ ಘಟನೆಗಳೆಲ್ಲ ನೆನಪಿಗೆ ಬಂದವು. ಕ್ಯೂ-ನಲ್ಲಿ ನಿಂತು ಸ್ಲಂ ಹುಡುಗರ ಮುಂದೆಯೇ ಪರ್ಸ್ ತೆರೆದು ಹಣ ಎಣಿಸಿದ್ದು, ಕೌಂಟರ್ ತೆರೆಯುವ ಹೊತ್ತಿಗೆ ಆ ಹುಡುಗರು ಕ್ರತಕ ರಶ್ ಸೃಷ್ಟಿಸಿ, ನಮ್ಮನ್ನು ಸುತ್ತುವರಿದು ನೂಕಿದ್ದು ಎಲ್ಲ ನೆನಪಾಯಿತು.
ನಿಸಾರ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಇಬ್ಬರು ಪೊಲೀಸ್ ಪೇದೆಗಳಿಗೆ - ಅದರಲ್ಲೊಬ್ಬಳು ಹೆಂಗಸು- ಪರ್ಸ್ ಕಳುವಾಗಿದ್ದು ಹೇಳಿದ. ಆಕೆ ನನ್ನೊಡನೆ ಕೇಳಿದಳು - “ನಿಮಗೆ ಇಲ್ಲಿರುವ ಯಾರ ಮೇಲಾದರೂ ಅನುಮಾನವಿದೆಯೇ?” ಆ ಸ್ಲಂ ಹುಡುಗರು ಪರ್ಸ್ ಸಿಕ್ಕಿದ ಮೇಲೆ ಅಲ್ಲಿರುತ್ತಾರೆಯೇ? ಕ್ಷಣದಲ್ಲಿ ಮಾಯವಾಗಿದ್ದರು. ಅವರ ಎದುರು ಪರ್ಸ್ ತೆರೆದು ಹಣ ಎಣಿಸಿದ ನನ್ನ ಮೂರ್ಖತನಕ್ಕೆ ನನಗೆ ನಗು ಬಂದಿತು. ಅದನ್ನು ನೋಡಿ ಆ ಪೊಲೀಸ್-ನವಳು ಸಿಡಿಮಿಡಿಗೊಂಡು ಅಂದಳು - “ನಿಮ್ಮ ಪರ್ಸ್ ಕಳೆದು ಹೋಗಿರುವುದು ಕೇಳಿ ನಮಗೆ ಬೇಜಾರಾಗಿದ್ದರೆ, ನೀವು ನಗುತ್ತಿದ್ದೀರಲ್ಲ!”. ಆಕೆಗೆ ಏನೆಂದು ವಿವರಿಸುವುದೆಂದು ತಿಳಿಯಲಿಲ್ಲ. ಆದರೂ ಹೇಳಿದೆ - “ಆ ಸ್ಲಂ ಹುಡುಗರು ಸಾಲಿನಲ್ಲಿ ಒತ್ತಾಗಿ ನಿಂತಿದ್ದ ನಮ್ಮಿಬ್ಬರ ಮಧ್ಯೆ ಕೈಹಾಕಿ ಅದು ಹೇಗೆ ಪರ್ಸ್ ಹಾರಿಸಿದರು” - ಅಂತ ಬೆರಗಾಗಿ ನಗು ಬಂತು ಅಂದೆ. ಆಕೆ ಮತ್ತೆ- “ನಿಮಗೆ ಅನುಮಾನದವರು ಕಂಡು ಬಂದರೆ ತಿಳಿಸಿ” ಎಂದು ಹೇಳಿ ಹೊರಟು ಹೋದಳು. ಪರ್ಸ್-ನಲ್ಲಿ ಸುಮಾರು ಒಂದೂವರೆ ಸಾವಿರ ರೂಪಾಯಿಗಳಿದ್ದವು - ಅದು ಸುಮಾರು ನನ್ನ ತಿಂಗಳ ಸಂಬಳದ ಅರ್ಧದಷ್ಟಾಗಿತ್ತು.
ಪುಣ್ಯಕ್ಕೆ ನನ್ನೊಡನೆ ನಿಸಾರನಿದ್ದುದರಿಂದ ಮುಂದಿನ ಪ್ರಯಾಣಕ್ಕೆ ತೊಂದರೆಯಿರಲಿಲ್ಲ. ಆತ ಒಳಕಿಸೆಯಲ್ಲಿ ದುಡ್ಡು ಇಟ್ಟುಕೊಂಡಿರುತ್ತಿದ್ದ. ಮುಂದಿನ ಬಾಂಬೆ ಪ್ರವಾಸವನ್ನು ನೆಮ್ಮದಿಯಿಂದಲೇ ಮುಗಿಸಿದೆ - ಪರ್ಸ್ ಇಲ್ಲದಿದ್ದ ಮೇಲೆ ಪರ್ಸ್ ಕಳುವಾಗುವ ಭಯವಿರಲಿಲ್ಲವಲ್ಲ! ನನ್ನ ಪಾಲಿಗೆ ಬಾಂಬೆ ಹೊತ್ತುಕೊಳ್ಳಬೇಕಾಗಿದ್ದ ಅಪಖ್ಯಾತಿಯನ್ನು ದಿಲ್ಲಿ ಹೊತ್ತುಕೊಂಡಿತ್ತು.

ಸ್ಲಂ ಹುಡುಗರು
'ವಿಜ್ಞಾನಿ'ಗೆ ಚಳ್ಳೆಹಣ್ಣು ತಿನ್ನಿಸಿದರಲ್ಲ
ಅಂದುಕೊಂಡೆ. ಅವರ I.Q. ಕಡಿಮೆಯದ್ದೇನಲ್ಲ
ಅನ್ನಿಸಿತು.
(A version of this was told to limited audience at Minnimane Kathaavali Edition 9)
______________________________________________________________________________________
Scientist's Purse
(Author: Dinesh K Shetty T.)
Who doesn’t like to remember the sweet memories of getting first salary? When I got my first salary I was elated as if horns have grown on my head. That's because so long I have begged my father for money to buy anything for me.
But for this, I had to migrate three thousand kilometres from my hometown. When I received a letter stating that "President of India is pleased to offer you a job as 'Scientist' in a research center in Dehradun", I didn't care for the distance. I packed up & left home.
Dehradun is a valley situated near the Shivalik ranges which are on the foothill of Himalayas. if you look up from the valley towards north you will see ' Mussoorie ' a renowned hill station. From Mussoorie you will be able to see the magnificent Himalayan ranges. Till then, I had seen only few peaks in Sahyadri ranges. I used to think they were quite large. When I saw Himalayas, I was mesmerised by it's vastness, its grandeur. It makes you aware of your limit & helplessness. It suppresses your ego & make you aware how minute we are in the nature.
Dehradun is surrounded by quite a few streams, hot-water springs, and dense forests. Javaharlal Nehru was fond of Dehradun. He was put is Dehradun Jail several times during British rule. Writing about those days, Nehru says that the feeling that he was near the towering Himalayas - was an added joy which went a long way to removing the weariness of prison. HE further says his mind was full of them; he was ever conscious of their nearness, and a secret intimacy seemed to grow between him & Himalayas. The river Ganga comes dancing between the Himalayan Mountains with roaring speed and slows down when it reaches plains after Rishikesh. Rishikesh is just around 40-50 km from Dehradun. Dehradun is treated as gateway for travelling to pilgrimage spots like Gangothri, Yamunothri, Badarinath, Kedarnath, etc. Dehradun's serene environment is ideal for meditating people & researchers.
Most of people in Dehradun works in some or other government offices. There are many research centres and government offices in Dehradun. One popular joke on Dehradun is - 'If you throw a stone from Mussoorie towards the Doon valley, there is a more likelihood of it hitting a scientist or a government officer!' People always had fascination towards science & scientist community, Right?
Vinod aged around 10-12, son of one of my friend was friendly with me. Once, when we were returning from a picnic along with some colleagues & friends, someone told him that we work as scientists. Vinod exclaimed 'Really! Are you scientist? It's so difficult to believe!' We all had hearty laugh for his reaction. To tease him, we asked him - "Why not? Don't we look like scientists? How do you imagine a scientist? One with long hair & beard? Or one wearing thick lenses?"
Vinod thought for a while and then slowly said "Scientists should be very intelligent, wise, should have more I.Q., I guess". To tease him further I told him that - "Scientist will have a halo around their head. That's due to the heat generated by their intelligence in the brain. But that halo is visible to only those who do meditation for long. You can also do meditation & then look at us. You should be able to confirm that we are scientists." Vinod got confused further and left.
When I got my first salary, I went to post office and sent 500 rupees to my grandmother by money order. After a week, when my Grandmother received it, she was so elated as if she won a lottery, I was told. She had spread the news to the whole village saying that I had sent the money from Himalayas. People in my village have heard about Ganga flowing out of Himalayas, it was first time they heard about Lakshmi (God of wealth) flowing out of Himalayas.
I wasn't using purse before I joined the job. I never had enough money to keep in the purse till then. After I started receiving salary, I thought of buying a purse, that too after couple of months. I bought a purse in Paltan Bazaar. I kept some fresh notes in that. I used to roam around the city keeping the purse in my back pocket and often feeling it with my hand to ensure its presence there. People normally keep the photo of their near & dear ones in the purse. I had kept a photo of Einstein and few revenue stamps in my purse. Every month we had to sign on a register pasting a 20paisa revenue stamp to get our salary.
After few months of joining my office, I was told to visit few research centres in Mumbai & Bangalore along with another colleague named Nisar. I was excited about the trip. But my colleagues gave a warning. We need to be careful about our purses in Bombay. They said Bombay is famous for pickpocketing. Though I was going to Bombay for the first time, Nisar was from Maharastra & knew Bombay, hence I wasn't much worried.
I traveled to New-Delhi along with Nisar by train & landed there next day morning. We booked the ticket for an evening train to Bombay. We kept our luggage at Cloakroom and to spend the day time, we visited nearby Connaught place. We had lunch in a Dhaba. We saw a small movie theatre nearby. To spend our noon time, we thought of watching a movie. We stood in the queue there. There were hardly 3-4 people ahead of us in the queue. After sometime queue grew with another 10-15 more people. I saw some slum boys roaming around nearby. Before the ticket counter opened, I opened my purse, counted the notes and checked whether I had change for the movie tickets. I put back my purse in my back pocket. Nisar was standing behind me. Within few minutes counter opened. There was push in the queue. Some were breaking the queue, some stood adjacent to me. When I reached near the counter, Nisar said he has exact change & gave money for tickets. We were relieved that we got the ticket in this melee and bought two cold-drinks at a nearby shop. After drinking it, for paying the shopkeeper, I put my hand into my back pocket. Alas! My purse wasn't there!
I recalled the previous moments. It all flashed in my memory - Standing in the queue, I had opened the purse & counted the notes in front of slum boys; the artificial rush they created when the counter opened and the way they surrounded me, etc. Nisar complained to the two constables who just came nearby, one was a lady. The lady constable asked us whether we have suspicion on someone around there. Once they got hold of the purse, how will you expect them to be present around there? They have already vanished. I was ashamed of my foolishness of opening my purse in their full view. A sheepish smile peeped out from my face. The lady constable got irritated seeing my smile and chastised me saying “When we are feeling bad for your purse loss, you are laughing at it!' I didn't know what to say. Still, to pacify her, I said “I was surprised how they could flick my purse, though me & my friend were standing so close!”. She again reiterated that we can approach them, if we find someone, whom we suspect and left the place.
There was around 1,500 Rupees in the purse, which was about half of my monthly salary. Luckily Nisar was with me. Hence, we could continue our trip. He was keeping money in his inside pockets.
I was with less worry during my Bombay stay. I had no purse to lose in pickpocketing. For me, Delhi had stolen the dubious distinction of being 'pickpocket capital' from Bombay.
How slum boys could easily outsmart a scientist, I thought. Their I.Q. is no less, I concluded.

The End.
Comments
Post a Comment