Posts

Showing posts from 2022

Those who can manage

Image
    ಪ್ರಜೆಯಂ ಪಾಲಿಸಬಲ್ಲೊಡೆ …   ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Those who can manage -  English version is given below in the end ) ಪಾಲನೆ, ನಿರ್ವಹಣೆ, ನಿಭಾಯಿಸುವುದು, ಆಡಳಿತ ಮಾಡು, ಮಾರ್ಗದರ್ಶನ ಮಾಡು ಇವೆಲ್ಲ ಇಂಗ್ಲಿಷ್ ನ 'manage' ಶಬ್ದಕ್ಕೆ ಬದಲಾಗಿ ಬಳಸಲ್ಪಡುವ ಪದಗಳು.  ಪಶುಪಾಲನೆಯು ನಮ್ಮ ನಾಗರಿಕತೆಯಲ್ಲಿ ಅನಾದಿಕಾಲದಿಂದ ಬಂದ ಉದ್ಯೋಗ. ಈ ಪಶುಪಾಲನೆಯ ಕೆಲಸ ಎಷ್ಟು ಕಷ್ಟ ಎಂದು ಅರಿವಾದದ್ದು ನನ್ನ ಬಾಲ್ಯದಲ್ಲೇ. ನಾನು ಸುಮಾರು ಐದಾರನೇ ತರಗತಿಯಲ್ಲಿದ್ದಾಗ ನನ್ನ ಅಜ್ಜಿಮನೆಗೆ ಹೋದಾಗ ಈ ಪಶುಪಾಲನೆಯ ಕೆಲಸಕ್ಕೆ ಹಚ್ಚಿದರು. ಒಂದು ಮುದಿ ದನವನ್ನು ಒಂದು ಹಸಿರುಹುಲ್ಲು ತುಂಬಿದ್ದ ಗದ್ದೆಗೆ ಕೊಂಡು ಹೋಗಿ ಮೇಯಿಸಿಕೊಂಡು ಬರಲು ಕಳಿಸಿದರು. ಅದು ಪಕ್ಕದಲ್ಲಿದ್ದ ಭತ್ತದ ಸಸಿ ನೆಟ್ಟಿದ್ದ ಗದ್ದೆಗೆ ಬಾಯಿ ಹಾಕದಂತೆ ನೋಡಿಕೊಳ್ಳಬೇಕಾಗಿತ್ತು. ನಾನು ದನದ ಮುಖಕ್ಕೆ ಎದುರಾಗಿ ನಿಂತುಕೊಂಡಾಗ ಆ ದನಕ್ಕೆ ಕಸಿವಿಸಿಯಾಗಿ ಒಂದೆರಡು ಕ್ಷಣ ಹುಲ್ಲು ತಿಂದು ಥಟ್ಟನೆ ಇನ್ನೊಂದು ಕಡೆ ತಪ್ಪಿಸಿಕೊಂಡು ಓಡುತ್ತಿತ್ತು. ಅದನ್ನು ಅಡ್ಡಗಟ್ಟಿ ಮತ್ತೆ ಎದುರು ನಿಂತರೆ ಮತ್ತೆ ಇನ್ನೊಂದು ಕಡೆ ಓಡುತ್ತಿತ್ತು. ನಾನು ಅದರ ಹಿಂದೆ ಓಡಿ ಓಡಿ ಸುಸ್ತಾದೆ. ಈ ದನವನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯವಿಲ್ಲ ಅನ್ನಿಸಿ ಅಜ್ಜಿಗೆ ದೂರುಕೊಟ್ಟೆ. ಅಜ್ಜಿ ಬಂದು ನನ್ನ ಪಶುಪಾಲನೆಯ ವೈಖರಿ ನೋಡಿ ನಕ್ಕು 'ಅಯ್ಯ...

Lame Dreams

Image
  ಹೆಳವನೋರ್ವನೂರ ಮುಂದೆ …   ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Lame Dreams -  English version is given below in the end ) ಡಾರ್ವಿನ್ ನ ವಿಕಾಸವಾದದಂತೆ ಸೃಷ್ಠಿಯ ಜೀವಿಗಳು ವಿಕಾಸಗೊಳ್ಳುತ್ತ ಬಂದಂತೆಮನುಷ್ಯಜೀವಿಯ ಅಂಗಾಂಗಗಳೂ ಬದಲಾಗುತ್ತ ಬಂದು ಎರಡು ಕಾಲುಗಳಲ್ಲಿ ನಡೆಯಬಲ್ಲವನಾಗಿ ಇನ್ನೆರಡು ಕಾಲುಗಳು ಕೈಗಳೆಂದು ಕರೆಯಲ್ಪಟ್ಟು ಬೇರೆ ಕಾರ್ಯಗಳಿಗೆ ಬಳಸಲಾರಂಭಿಸಲಾಯಿತು. ಇದರಿಂದ ಆದ ಮೊದಲ ಲಾಭವೆಂದರೆ ಹೊಟ್ಟೆತುಂಬಿಸಿಕೂಳ್ಳುವುದು ಸುಲಭವಾಗುತ್ತ ಬಂತು.  ಬೇಟೆ, ವ್ಯವಸಾಯ, ಪಾಲನೆ, ಪೋಷಣೆ ಹೀಗೆಲ್ಲ ಕಾರ್ಯಗಳಿಗೆ ಕೈಗಳನ್ನು ಸಮರ್ಥವಾಗಿ ಬಳಸುವುದನ್ನು ಕಲಿತ - ಮಾನವ ಸಮೂಹ, ಪ್ರಗತಿ ಹೊಂದುತ್ತ ಸಾಗುತ್ತ ಇಂದಿನ ಸ್ಥಿತಿಯವರೆಗೆ ತಲುಪಿದೆ. ಹುಟ್ಟುವ ಎಲ್ಲ ಮನುಷ್ಯರಲ್ಲೂ ಎಲ್ಲ ಅಂಗಾಂಗಗಳು ಪರಿಪೂರ್ಣವಾಗಿ ಬೆಳೆದು ಹುಟ್ಟುವುದಿಲ್ಲ. ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಸುಮಾರು ಶೇಕಡಾ ೧೫ರಷ್ಟು ಜನ ಒಂದಲ್ಲ ಒಂದು ಅಂಗನ್ಯೂನತೆಯಿಂದ ಬಳಲುತ್ತಿರುತ್ತಾರೆ. ನ್ಯೂನತೆಯಿಲ್ಲದವರು ಆ ಬಗ್ಗೆ ಯೋಚಿಸುವುದು ಕಡಿಮೆ. ಅವರ ಹತ್ತಿರದ ಒಡನಾಡಿಗಳು ಬಳಲುತ್ತಿದ್ದರೆ ಮಾತ್ರ ಆ ಬಗ್ಗೆ ಸ್ವಲ್ಪ ಗಮನ ಹರಿಸಬಹುದು. ಕೆಲವರು ತಮ್ಮ ಜೀವಿತದ ಮಧ್ಯದಲ್ಲಿ ನ್ಯೂನತೆಗೆ ಒಳಗಾಗುತ್ತಾರೆ. ಆಗ ಕೆಲವರಿಗಂತೂ ಆಕಾಶ ಕಳಚಿ ಬಿದ್ದಂತಾಗುತ್ತದೆ. ಜೀವನದ ದಿಕ್ಕೇ ಬದಲಾಗುತ್ತದೆ. ಬದುಕು ದುಸ್ತರವೆನಿಸುತ್ತದೆ.   ...