Posts

Showing posts from 2020

A Gentleman Officer

ಕೆಚ್ಛೆದೆಯ ದಂಡನಾಯಕರು  ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( A Gentleman Officer -  English version is given below in the end ) ಸೇನೆಯವರೊಡನೆ ಒಡನಾಟ ಜನಸಾಮಾನ್ಯರಿಗೆ  ಸ್ವಲ್ಪ ಕಷ್ಟ.  ಸೋಮಾರಿತನ, ಮನಸ್ಸಿಗೆ ಬಂದ ಹಾಗೆ ಕೆಲಸ ಮಾಡುವುದು, ಬೇಕೆನಿಸಿದಾಗ ರಜದ ಮೇಲೆ ಹೋಗುವುದು, ಅರ್ಧಂಬದ್ದ ಕೆಲಸ ಮಾಡಿ ಹಾಗೆ ಬಿಟ್ಟು ಇನ್ನೊಂದು ಕೆಲಸ ಎತ್ತಿಕೊಳ್ಳುವುದು - ಇಂತಹ ಅಭ್ಯಾಸವಿರುವವರಿಗೆ ಸೇನೆಯ ಅಧಿಕಾರಿಗಳೊಡನೆ ಕೆಲಸ ಮಾಡುವುದು ಕಷ್ಟ. ಎಲ್ಲೋ ಕೆಲವು ಅಧಿಕಾರಿಗಳು  ಇಂತವರನ್ನು ಸಹಿಸಿಕೊಳ್ಳುತ್ತಾರೆ. ಇನ್ನು ಕೆಲವರು ಇಂತಹವರನ್ನು ಓಡಿಸಿಯೇ  ಬಿಡುತ್ತಾರೆ. ಕೆಲವರು ಇಂತಹವರನ್ನು ಸುಧಾರಿಸಿ ಒಳ್ಳೇ  ಕೆಲಸಗಾರರನ್ನಾಗಿ ಪರಿವರ್ತಿಸುತ್ತಾರೆ. ಕೆಲವರು ಬೆದರಿಸಿ ಬದಲಾಯಿಸುತ್ತಾರೆ. ಅಪರೂಪಕ್ಕೆ ಇನ್ನು ಕೆಲವರ ವ್ಯಕ್ತಿತ್ವವನ್ನು ನೋಡಿಯೇ ಜನ ಬದಲಾಗುತ್ತಾರೆ. ತಂತ್ರಜ್ಞನಾಗಿ ಸೇನೆಯ ಅಧಿಕಾರಿಗಳೊಂದಿಗೆ ಒಡನಾಡುವ ಅವಕಾಶ ನನಗೆ ದೊರಕಿತ್ತು. ಆಗ ಹಲವಾರು ಅಧಿಕಾರಿಗಳೊಡನೆ ಕೆಲಸ ಮಾಡಿದ್ದೆ.  ಅವರಲ್ಲೊಬ್ಬರ ಹೆಸರು ಕರ್ನಲ್ ಠಾಕೂರ್. ಮಧ್ಯವಯಸ್ಸಿನ ದಪ್ಪ ಮೀಸೆಯ ದೃಢಕಾಯದ ಸುಮಾರು ೫ ಮುಕ್ಕಾಲು ಅಡಿ ಎತ್ತರದ ಸ್ವಲ್ಪ ಒರಟು ಚರ್ಮದ  ಗೌರವರ್ಣದ ಮನುಷ್ಯ. ಅಮರೀಶಪುರಿಯಷ್ಟು ಅಲ್ಲದಿದ್ದರೂ  ಸ್ವಲ್ಪ ಗಡುಸಾಗಿಯೇ  ಗಂಭೀರವಾಗಿ ಕಾಣುವ ಮನುಷ್ಯ...

Scientist's Purse

ವಿಜ್ಞಾನಿಯ ಪರ್ಸ್  ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Scientist's Purse -  English version is given below in the end ) ಮೊದಲ ಸಂಬಳದ ಮಧುರ ಕ್ಷಣಗಳ ನೆನಪು ಯಾರಿಗೆ ಇಷ್ಟವಾಗುವುದಿಲ್ಲ ? ಸದಾ ತಂದೆಯನ್ನು ಕೇಳಿ ಪಡೆದು ಖರ್ಚು ಮಾಡುತ್ತ ಬಂದವನಿಗೆ ಸ್ವತಃ  ದುಡಿದು ಸಂಬಳ ಬಂದಾಗ ಸಹಜವಾಗಿಯೇ ಸ್ವಲ್ಪ ಕೋಡು ಮೂಡಿದಂತೆನಿಸಿತ್ತು.     ಆದರೆ ಅದಕ್ಕಾಗಿ ನಾನು ನನ್ನ ಹುಟ್ಟೂರಿನಿಂದ   ಮೂರು ಸಾವಿರ ಕಿಲೋಮೀಟರು ದೂರ ವಲಸೆ ಬರಬೇಕಾಯಿತು , ಡೆಹ್ರಾಡೂನ್-ನ  ಸಂಶೋಧನಾಲಯವೊಂದಕ್ಕೆ. ಭಾರತದ   ರಾಷ್ಟ್ರಪತಿಗಳು ಸಂತೋಷದಿಂದ   ನನ್ನನ್ನು ' ವಿಜ್ಞಾನಿ ' ಎಂಬ ಹುದ್ದೆಗೆ ನೇಮಿಸಿದ್ದಾರೆ   ಎಂಬ ಪತ್ರ   ತಲುಪಿದ ಮೇಲೆ - ದೂರ ಮೂರು ಸಾವಿರವಾದರೇನು ? ಆರು ಸಾವಿರವಾದರೇನು ? ಗಂಟುಮೂಟೆ ಕಟ್ಟಿ ಹೊರಡುವುದೇ  - ಎಂದು ಹೊರಟು   ಬಂದಿದ್ದೆ.   ಡೆಹ್ರಾಡೂನ್ ಹಿಮಾಲಯದ ಶ್ರೇಣಿಗಳಿಗೆ ಸಮೀಪದ ಶಿವಾಲಿಕ್ ಬೆಟ್ಟಗಳ ಸಾಲಿನ ನಡುವೆ ಇರುವ ಕಣಿವೆ ಪ್ರದೇಶ. ಅಲ್ಲಿ ತಲೆ ಎತ್ತಿ ನೋಡಿದರೆ ಉತ್ತರಕ್ಕೆ ಹರಡಿರುವ ಬೆಟ್ಟದ ಸಾಲಿನಲ್ಲಿ ಮಸ್ಸೂರಿ ಎಂಬ ಪ್ರವಾಸೀತಾಣ   ಗೋಚರಿಸುತ್ತದೆ. ಅಲ್ಲಿ ಹೋಗಿ ನೋಡಿದರೆ ಮತ್ತೂ   ಉತ್ತರಕ್ಕೆ   ಮನಮೋಹಕ ಹಿಮಾಲಯ ಶ್ರೇಣಿ ದ್ರಗ್ಗೋಚರವಾಗುತ್ತದೆ.   ಅಲ್ಲಿಯವರೆ...

When the muddy water clears

ಕದಡಿದ ಸಲಿಲಂ ತಿಳಿವಂದದಿ  ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( When the muddy water clears -  English version is given below in the end ) ತಣ್ಣಗಿನ ಮಾಗಿಯು  ನಿಧಾನಕ್ಕೆ ಕಳಚುತ್ತ ವಸಂತ ಆಗಮಿಸುವ ದಿನಗಳಲ್ಲಿ, ಸುತ್ತುಮುತ್ತಣದ  ತರುಲತೆಗಳೆಲ್ಲ  ಚಿಗುರಿ ಸಂಭ್ರಮಿಸುತ್ತಿದ್ದ ಒಂದು ಅಪರಾಹ್ನ, ತಿಳಿಯಾದ ಸರೋವರದ ಮೇಲಿಂದ ಸುಳಿದಾಡುತ್ತ ಮಂದವಾಗಿ ಬೀಸುವ ತಂಗಾಳಿ ಹಿತವಾಗಿ  ನನ್ನನ್ನಾವರಿಸುತ್ತಿರಲು,ನಿದ್ರಾದೇವಿಯು ನನ್ನ ಚಿತ್ತವನ್ನಪಹರಿಸತೊಡಗಿದಳು. ಕಿವಿಯ ಮೇಲೆ ಬೀಳುತ್ತಿದ್ದ, ಉಡುಪ ಮೇಷ್ಟ್ರು ಬೋಧಿಸುತ್ತಿದ್ದ  ‘ಪಾಯಿಸೊನ್ ಡಿಸ್ಟ್ರಿಬ್ಯುಶನ್’ ಪಾಠ ಮನಸ್ಸಿನ ಒಳಗೆ ನಾಟಲು ವಿಫಲವಾಗುತ್ತಿತ್ತು. ಆಗ  ಎಡಭಾಗದ ಸಾಲಿನಲ್ಲಿ ಕುಳಿತ ನಾಗವೇಣಿಯು ( ನಾವು ಹೃಸ್ವವಾಗಿ   ಕರೆಯುವ ನಾಗ್)   ಮುಡಿದ  ಕೆಂಡಸಂಪಿಗೆಯನ್ನು ಸ್ಪರ್ಶಿಸಿ ಸುಳಿದು ಬಂದ ಮಂದಮಾರುತನು ನನ್ನ ನಾಸಿಕವನ್ನು ಹೊಕ್ಕಾಗ ಮತ್ತು ಆ ಕ್ಷಣದಲ್ಲೇ ಪಕ್ಕದಲ್ಲಿ ಕೂತಿದ್ದ ರಾಧಾ ನನ್ನ  ಪಕ್ಕೆಗೆ ತಿವಿದಾಗ ನಿದ್ರಾದೇವಿಯ ಮಡಿಲಿನಿಂದ ದೊಪ್ಪನೆ ಜಾರಿ ಬಿದ್ದಂತೆನಿಸಿ  ತಡವರಿಸುತ್ತಾ ಕಣ್ಣು ತೆರೆದೆ.  ಪಿಸುಮಾತಿನಲ್ಲಿ ಗೆಳೆಯ ರಾಧಾಕೃಷ್ಣ (ನಾವು ಹೃಸ್ವವಾಗಿ   ಕರೆಯುವ ರಾಧಾ) - 'ಮೇಷ್ಟ್ರು ನಿನ್ನ ತೂಕಡಿಕೆಯನ್ನು ಗಮನಿಸಿದರು' ...