Bhootopakaara
ಭೂತೋಪಕಾರ ( ಕಥೆಗಾರ : ದಿನೇಶ್ ಕುಮಾರ ಶೆಟ್ಟಿ ಟಿ.) ( 'Bhootopakaara' English version is down below) ಕಥೆಯ ಹೆಸರು ಭೂತೋಪಕಾರ. ಹೌದು ಭೂತೋಪಕಾರ - ಭೂತ ಪ್ಲಸ್ ಉಪಕಾರ = ಭೂತೋಪಾಕಾರ - ಗುಣ ಸಂಧಿ, ಭೂತ ಅಂದ ಕೂಡ್ಲೆ ಅವಗುಣಗಳು ಮತ್ತು ಅಪಕಾರ ನಿಮ್ಮ ಮನಸ್ಸಿಗೆ ಬರುವುದರಲ್ಲಿ ಅಚ್ಚರಿಯಿಲ್ಲ. ಭೂತಗಳು ಉಪಕಾರ ಮಾಡುವುದುಂಟೆ ಎಂದು ಕೇಳಬಹುದು ನೀವು. ಕೆಲವು ಅದ್ರಷ್ಟವಂತರಿಗೆ ಆ ಭಾಗ್ಯ ಒದಗಿಬರುವುದು ಉಂಟು. ಅದರಲ್ಲಿ ನಾನೂ ಒಬ್ಬ. ನೀವು ಪಶ್ಚಿಮ ಘಟ್ಟ ದಾಟಿ ಕೆಳಗಿಳಿದರೆ - ಅಂದರೆ ಭದ್ರಾನದಿ ದಾಟಿ ಕೆಳಗಿಳಿದರೆ - ಸೀತಾನದಿ ಸಿಗುತ್ತದೆ (ನೋಡಿ ರಾಮಭದ್ರನ ನದಿ ದಾಟಿದರೆ ಸೀತಾನದಿ ಸಿಗುವುದು ಸಮಂಜಸವೇ ಅಲ್ಲವೇ? ). ಸೀತನದಿ ದಾಟಿ್ದರೆ ಅಲ್ಲಿನ ದಟ್ಟವಾದ ಕಾಡು ಮುಗಿಯುವ ಹೊತ್ತಿಗೆ ಸಮುದ್ರವೇ ಸಿಗುತ್ತದೆ. ಆ ಕಾಡಿನ ಅಂಚಿನಲ್ಲಿ ಒಂದೂರಿದೆ ಅದರ ಹೆಸರು ಕಾಡೂರು. ಅದೇ ನನ್ನ ಅಜ್ಜಿಯ ಊರು ಅಥವಾ ಹಳ್ಳಿ. ಅಲ್ಲಿ ನಮ್ಮೂರಿನ ಜನ ಹೊಲಗದ್ದೆಗಳಲ್ಲಿ ಶ್ರಮವಹಿಸಿ ಬೇಸಾಯ ಮಾಡಿಕೊಂಡು ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ಹೋರಾಡುತ್ತ ಬದುಕುತ್ತಾರೆ. ಎಲ್ಲರ ಮನೆಯಲ್ಲಿಯೂ ನಾಯಿ,ಕೋಳಿ, ಬೆಕ್ಕು, ದನಕರುಗಳು, ಎಮ್ಮೆ ಕೋಣಗಳು ಎತ್ತಿನಬಂಡಿ ಇರುತ್ತಿದ್ದವು , ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ನನ್ನ ಅಜ್ಜಿ ಮನೆಯ...