Lame Dreams

ಹೆಳವನೋರ್ವನೂರ ಮುಂದೆ … ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Lame Dreams - English version is given below in the end ) ಡಾರ್ವಿನ್ ನ ವಿಕಾಸವಾದದಂತೆ ಸೃಷ್ಠಿಯ ಜೀವಿಗಳು ವಿಕಾಸಗೊಳ್ಳುತ್ತ ಬಂದಂತೆಮನುಷ್ಯಜೀವಿಯ ಅಂಗಾಂಗಗಳೂ ಬದಲಾಗುತ್ತ ಬಂದು ಎರಡು ಕಾಲುಗಳಲ್ಲಿ ನಡೆಯಬಲ್ಲವನಾಗಿ ಇನ್ನೆರಡು ಕಾಲುಗಳು ಕೈಗಳೆಂದು ಕರೆಯಲ್ಪಟ್ಟು ಬೇರೆ ಕಾರ್ಯಗಳಿಗೆ ಬಳಸಲಾರಂಭಿಸಲಾಯಿತು. ಇದರಿಂದ ಆದ ಮೊದಲ ಲಾಭವೆಂದರೆ ಹೊಟ್ಟೆತುಂಬಿಸಿಕೂಳ್ಳುವುದು ಸುಲಭವಾಗುತ್ತ ಬಂತು. ಬೇಟೆ, ವ್ಯವಸಾಯ, ಪಾಲನೆ, ಪೋಷಣೆ ಹೀಗೆಲ್ಲ ಕಾರ್ಯಗಳಿಗೆ ಕೈಗಳನ್ನು ಸಮರ್ಥವಾಗಿ ಬಳಸುವುದನ್ನು ಕಲಿತ - ಮಾನವ ಸಮೂಹ, ಪ್ರಗತಿ ಹೊಂದುತ್ತ ಸಾಗುತ್ತ ಇಂದಿನ ಸ್ಥಿತಿಯವರೆಗೆ ತಲುಪಿದೆ. ಹುಟ್ಟುವ ಎಲ್ಲ ಮನುಷ್ಯರಲ್ಲೂ ಎಲ್ಲ ಅಂಗಾಂಗಗಳು ಪರಿಪೂರ್ಣವಾಗಿ ಬೆಳೆದು ಹುಟ್ಟುವುದಿಲ್ಲ. ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಸುಮಾರು ಶೇಕಡಾ ೧೫ರಷ್ಟು ಜನ ಒಂದಲ್ಲ ಒಂದು ಅಂಗನ್ಯೂನತೆಯಿಂದ ಬಳಲುತ್ತಿರುತ್ತಾರೆ. ನ್ಯೂನತೆಯಿಲ್ಲದವರು ಆ ಬಗ್ಗೆ ಯೋಚಿಸುವುದು ಕಡಿಮೆ. ಅವರ ಹತ್ತಿರದ ಒಡನಾಡಿಗಳು ಬಳಲುತ್ತಿದ್ದರೆ ಮಾತ್ರ ಆ ಬಗ್ಗೆ ಸ್ವಲ್ಪ ಗಮನ ಹರಿಸಬಹುದು. ಕೆಲವರು ತಮ್ಮ ಜೀವಿತದ ಮಧ್ಯದಲ್ಲಿ ನ್ಯೂನತೆಗೆ ಒಳಗಾಗುತ್ತಾರೆ. ಆಗ ಕೆಲವರಿಗಂತೂ ಆಕಾಶ ಕಳಚಿ ಬಿದ್ದಂತಾಗುತ್ತದೆ. ಜೀವನದ ದಿಕ್ಕೇ ಬದಲಾಗುತ್ತದೆ. ಬದುಕು ದುಸ್ತರವೆನಿಸುತ್ತದೆ. ...