Posts

Showing posts from February, 2020

A Gentleman Officer

ಕೆಚ್ಛೆದೆಯ ದಂಡನಾಯಕರು  ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( A Gentleman Officer -  English version is given below in the end ) ಸೇನೆಯವರೊಡನೆ ಒಡನಾಟ ಜನಸಾಮಾನ್ಯರಿಗೆ  ಸ್ವಲ್ಪ ಕಷ್ಟ.  ಸೋಮಾರಿತನ, ಮನಸ್ಸಿಗೆ ಬಂದ ಹಾಗೆ ಕೆಲಸ ಮಾಡುವುದು, ಬೇಕೆನಿಸಿದಾಗ ರಜದ ಮೇಲೆ ಹೋಗುವುದು, ಅರ್ಧಂಬದ್ದ ಕೆಲಸ ಮಾಡಿ ಹಾಗೆ ಬಿಟ್ಟು ಇನ್ನೊಂದು ಕೆಲಸ ಎತ್ತಿಕೊಳ್ಳುವುದು - ಇಂತಹ ಅಭ್ಯಾಸವಿರುವವರಿಗೆ ಸೇನೆಯ ಅಧಿಕಾರಿಗಳೊಡನೆ ಕೆಲಸ ಮಾಡುವುದು ಕಷ್ಟ. ಎಲ್ಲೋ ಕೆಲವು ಅಧಿಕಾರಿಗಳು  ಇಂತವರನ್ನು ಸಹಿಸಿಕೊಳ್ಳುತ್ತಾರೆ. ಇನ್ನು ಕೆಲವರು ಇಂತಹವರನ್ನು ಓಡಿಸಿಯೇ  ಬಿಡುತ್ತಾರೆ. ಕೆಲವರು ಇಂತಹವರನ್ನು ಸುಧಾರಿಸಿ ಒಳ್ಳೇ  ಕೆಲಸಗಾರರನ್ನಾಗಿ ಪರಿವರ್ತಿಸುತ್ತಾರೆ. ಕೆಲವರು ಬೆದರಿಸಿ ಬದಲಾಯಿಸುತ್ತಾರೆ. ಅಪರೂಪಕ್ಕೆ ಇನ್ನು ಕೆಲವರ ವ್ಯಕ್ತಿತ್ವವನ್ನು ನೋಡಿಯೇ ಜನ ಬದಲಾಗುತ್ತಾರೆ. ತಂತ್ರಜ್ಞನಾಗಿ ಸೇನೆಯ ಅಧಿಕಾರಿಗಳೊಂದಿಗೆ ಒಡನಾಡುವ ಅವಕಾಶ ನನಗೆ ದೊರಕಿತ್ತು. ಆಗ ಹಲವಾರು ಅಧಿಕಾರಿಗಳೊಡನೆ ಕೆಲಸ ಮಾಡಿದ್ದೆ.  ಅವರಲ್ಲೊಬ್ಬರ ಹೆಸರು ಕರ್ನಲ್ ಠಾಕೂರ್. ಮಧ್ಯವಯಸ್ಸಿನ ದಪ್ಪ ಮೀಸೆಯ ದೃಢಕಾಯದ ಸುಮಾರು ೫ ಮುಕ್ಕಾಲು ಅಡಿ ಎತ್ತರದ ಸ್ವಲ್ಪ ಒರಟು ಚರ್ಮದ  ಗೌರವರ್ಣದ ಮನುಷ್ಯ. ಅಮರೀಶಪುರಿಯಷ್ಟು ಅಲ್ಲದಿದ್ದರೂ  ಸ್ವಲ್ಪ ಗಡುಸಾಗಿಯೇ  ಗಂಭೀರವಾಗಿ ಕಾಣುವ ಮನುಷ್ಯ...