Posts

Showing posts from April, 2019

Here is a Hiriya

ಹೀಗೊಬ್ಬ ಹಿರಿಯ ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Here is a Hiriya -  English version is given below in the end ) ನಾನೀಗ ಹೇಳಹೊರಟಿರುವುದು ನಮ್ಮೂರಿನ ಹಿರಿಯನ ಬಗ್ಗೆ. ಹೌದು ಅವನ ಹೆಸರೇ ಹಿರಿಯ. ಆತ ದೊಡ್ಡ ಮನುಷ್ಯನೇ, ಕಾಯದಲ್ಲಿಯೂ, ವಯಸ್ಸಿನಲ್ಲಿಯೂ, ಗುಣದಲ್ಲಿಯೂ. ಜಾತಿಯಲ್ಲಿ ಮಾತ್ರ ದೊಡ್ಡವನಲ್ಲ. ಆತ ಹೊಲೆಯರ ಜಾತಿಗೆ ಸೇರಿದವನು. ನಾನು ಚಿಕ್ಕವನಿದ್ದಾಗ ಅಮ್ಮನೊಡನೆ ಈ ಹಿರಿಯನಿಗೆ ವಯಸ್ಸೆಷ್ಟು ಎಂದು ಕೇಳಿದಾಗ ಆಕೆ ಅಂದಿದ್ದಳು - ಗೊತ್ತಿಲ್ಲಪ್ಪ, ನಾನು ಚಿಕ್ಕವಳಿದ್ದಾಗಲೂ ಆತ ಹೀಗೇ ಇದ್ದ. ಈತ ಎಲ್ಲೋ 'ಸಂಜೀವಿನಿ' ಸೇವಿಸಿರಬೇಕು ಅಂದುಕೊಳ್ಳುತ್ತಿದ್ದೆ ! ನನ್ನ ಕಾಲಕ್ಕೆ ಈ 'ಒಕ್ಕಲುತನ ಅಥವಾ ಜೀತ' ಎನ್ನುವುದು ಕಡಿಮೆಯಾಗುತ್ತ ಬಂದಿತ್ತು. ಈ ಭೂಸುಧಾರಣೆ ಕಾಯಿದೆ ಬಂದ ಮೇಲೆ ಒಕ್ಕಲು ಅನ್ನಿಸಿಕೊಂಡವರಿಗೆಲ್ಲ ಒಂದಿಷ್ಟು ಭೂಮಿಯ ಒಡೆತನ ಸಿಕ್ಕಿ ಅವರೆಲ್ಲ ಯಾರೋ ಒಬ್ಬ ಧಣಿಯ ಅಡಿಯಾಳಾಗಿ ಜೀವಮಾನ ಸವೆಸಬೇಕಾಗಿರಲಿಲ್ಲ. ಆದರೆ ಹೊಲೆಯರಿಗೆ ಮಾತ್ರ ಭೂಮಿಯ ಭಾಗ್ಯ ದಕ್ಕಿದ್ದು ಕಡಿಮೆ. ಯಾಕೆಂದರೆ ಅವರಿಗೆ ಉಳುವ ಭೂಮಿಯನ್ನು ಗೇಣಿಗೆ ಕೊಡುತ್ತಿರಲಿಲ್ಲ. ಗೇಣಿಗೆ ಕೊಂಡವರಿಗೆ ಮಾತ್ರ ಭೂಮಿ ಒಡೆತನ ದಕ್ಕುತ್ತಿತ್ತು. ಈ ಹಿರಿಯ ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ. ಇನ್ನೊಬ್ಬರ ಹೊಲಗಳಲ್ಲಿ ದುಡಿಯುತ್ತಿದ್ದ. ನಮ್ಮ ಮನೆಗೂ ಕೆಲಸಕ್ಕೆ ಬರುತ್ತಿ...