Emotions and 'Raakshasa'
ರಾಕ್ಷಸ – ತುಡಿತ ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Emotions and 'Raakshasa' - English version is given below in the end ) ಕೆಲವೊಮ್ಮೆ ಯೋಚಿಸುತ್ತೇನೆ - ಅದು ಹೇಗೆ ನಾವು ಇನ್ನೊಬ್ಬರ ಬಗ್ಗೆ ತುಡಿಯಲಾರಂಬಿಸುತ್ತೇವೆ? ಇನ್ನೊಬ್ಬರೊಡನೆ ಹೊಕ್ಕುಬಳಕೆಯಾದೊಡನೆಯೇ ತುಡಿಯತೊಡಗುತ್ತೇವೆಯೋ ಅಥವಾ ಅವರ ಪ್ರಭಾವಬೀರುವ ವ್ಯಕ್ತಿತ್ವದ ಫಲವಾಗಿಯೋ ? ಒಂದು ವೇಳೆ ದುರ್ನಡತೆಯವರಾದರೆ, ದ್ವೇಷ ಹುಟ್ಟಿಸಬಲ್ಲಂತೆ ವರ್ತಿಸುವವರಾದರೆ ಅವರ ಬಗ್ಗೆ ತುಡಿವುದು ಸಾಧ್ಯವಾದೀತೆ? ಈ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದದ್ದುಂಟು. ಆ ದಿನಗಳಲ್ಲಿ ನಾನೊಂದು ಭೂಸೇನಾ ವಿಭಾಗದೊಂದಿಗೆ ಆಗಾಗ ವ್ಯವಹರಿಸುತ್ತಿದ್ದೆ. ನಾನು ಸಮವಸ್ತ್ರದವನಲ್ಲ, ತಂತ್ರಜ್ಞನಾಗಿ ಅಲ್ಲಿಗೆ ಹೋಗುತ್ತಿದ್ದುದರಿಂದ ಅಲ್ಲಿನ ಸೈನಿಕರು ನನ್ನೊಂದಿಗೆ ಬಿಗುಮಾನವಿಲ್ಲದೆಯೇ ಸಲೀಸಾಗಿ ಮಾತನಾಡುತ್ತಿದ್ದರು. ಅವರ ಶ್ರೇಣೀಕೃತ ಅಧಿಕಾರಿಗಳ ಸಾಲಿನಲ್ಲಿ ನನ್ನಂತಹವರನ್ನು ನಿಲ್ಲಿಸಿ ನೋಡಬೇಕಾಗಿರಲಿಲ್ಲ ಅವರಿಗೆ. ಕಠಿಣ ಪರಿಸರದಲ್ಲಿ ಕೆಲಸಮಾಡುವ ಸೈನಿಕರು ತಮ್ಮ ಮಾನಸಿಕ ತುಮುಲಗಳನ್ನು ನಮ್ಮಂತವರ ಬಳಿ ತೋಡಿಕೊಳ್ಳುತ್ತಿದ್ದರು. ದೂರದ ತಮ್ಮ ಸಂಸಾರಗಳ ಬಗ್ಗೆಯೋ, ಸಂಸಾರದ ಖುಷಿಕ್ಷಣಗಳ ಬಗ್ಗೆಯೋ, ತಮ್ಮ ಕಷ್ಟಕಾರ್ಪಣ್ಯಗಳ ಬಗ್ಗೆಯೋ, ನಮ್ಮೊಡನೆ ತೋಡಿ...